ಕಲಬುರಗಿ: ಸಂವಿಧಾನದ ರಕ್ಷಣೆಯಾಗಬೇಕೆಂದರೆ ಮೊದಲು ಎಲ್ಲರೂ ಇವಿಎಂ ವಿರುದ್ಧ ಧ್ವನಿ ಎತ್ತಬೇಕು ಎಂದು ಮೈಸೂರಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಜಿ ಹೇಳಿದರು.
ನಗರದ ಜಗತ್ ವೃತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಲಬುರಗಿ ಸಮಿತಿ ವತಿಯಿಂದ ಆಯೋಜಿಸದ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ಧ ಬಹಿರಂಗ ಸಮಾವೇಶ ಉದ್ದೇಶಿ ಮಾತನಾಡಿ, ಸಂವಿಧಾನ ಮತ್ತು ದೇಶದ ಶಾಂತಿಗಾಗಿ ಇವಿಎಂ ರದ್ದು ಅಗತ್ಯ, ಎಲ್ಲರೂ ಒಂದಾಗಿ ಧ್ವನಿಗೂಡಿಸಿ, ಬ್ಯಾಲೇಟ್ ಪೇಪರ್ ಮತದಾನಕ್ಕೆ ಒತ್ತಾಯಸಬೇಕು. ನ್ಯೋಟ್ ಬ್ಯಾನ್ ಆದಾಗ ಎಲ್ಲರ ನೋಟ್ ಗಳನ್ನು ಎಣಿಸಬಹುದು ಆದರೆ ಬೈಲೇಟ್ ಪೇಪರ್ ಮತದಾನದ ಚೀಟಿಗಳು ಎಣಿಸಲು ಏಕೆ ಸಾಧ್ಯವಿಲ್ಲ ಎಂದು ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೌರತ್ವ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಪ್ರತಿಯೊಂದು ಸಮುದಾಯಕ್ಕೆ ಇದರಿಂದ ತೊಂದರೆ ಉಂಟುಮಾಡುಗುತ್ತದೆ. ಜಾತಿ ಮತ ಭೇದ ಮರೆತು ದೇಶದ ಉಳಿವಿಗಾಗಿ ಹೋರಾಟ ಮಾಡುವ ಅಗತ್ಯ ಎದುರಾಗಿದೆ ಎಂದರು. ಪೊಲೀಸ್ ಅಧಿಕಾರಿಗಳು ತಮ್ಮ ತಂದೆ, ತಾಯಿ, ತಾತಾ, ಅಜ್ಜ ಅವರ ಜನ್ಮ ದಾಖಲೆ ಕೈಯಲ್ಲಿ ಹಿಡಿದು ಸಾಲಿನಲ್ಲಿ ನಿಂತು ತಮ್ಮ ಪೌರತ್ವವನ್ನು ಸಾಬಿತು ಮಾಡಬೇಕಾಗಿದೆ, ನೀವು ರಾಜಕೀಯ ಪಕ್ಷಗಳ ಗುಲಾಂರಾಗಬೇಡಿ ಸಂವಿಧಾನದ ಗುಲಾಂರಾಗಿ ಎಂದು ಕರೆ ನೀಡಿ, ಚಾಹಾ ಮಾರುವ ಮೋದಿಗೆ ಸಂವಿಧಾನ ಪ್ರಧಾನ ಮಂತ್ರಿ ಮಾಡಿದೆ ಪಂಚಾರ್ ಹಾಕುವನಿಗೆ ಪ್ರಧಾನಿ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.
ಪೌರತ್ವ ಕಾಯ್ದೆ ಜಾರಿಗೆ ಮಾಡಬೇಕಾದರೆ ಡಿ.ಎನ್.ಎ ಆಧಾರಿತ ಜಾರಿಯಾಗಲಿ, ಯಾಕೆಂದರೆ ನಾವು ರಕ್ತದಿಂದ ಭಾರತೀಯರು, ಕಾಗದ್ ದಿಂದ ಅಲ್ಲ. ಯಾರಿಗೆ ನಮ್ಮ ಭಾರತೀಯರ ಮೇಲೆ ಅನುಮಾನವಿದೆ ರಕ್ತ ಪರೀಕ್ಷೆಗೆ ಮುಂದಾಗಿ ಯಾರು ಭಾರತೀಯರ ಮತ್ತು ಯಾರು ಅಲ್ಲ ಎಂಬದು ಎಲ್ಲರಿಗೂ ತಿಳಿಯುತದೆ ಎಂದರು. ದಾಖಲೆ ಕೇಳಿದರೆ ಯಾರು ದಾಖಲೆಗಳು ತೊರಿಸದಿರಿ ಬದಲಿಗೆ ಡಿ.ಎನ್.ಎಗೆ ಒತ್ತಾಯಿಸಿ ಎಂದು ಕರೆ ಕೊಟ್ಟರು.
ಇದಕ್ಕೂ ಮುನ್ನ ಮಹಾರಾಷ್ಟ್ರದ ಪ್ರಗತಿಪರ ಚಿಂತಕಿ ಡಾ.ಸುಷ್ಮಾ ಅಂಧಾರೆ ಮಾತನಾಡಿ, ಇವಿಎಂ ಮಷಿನ್ ಮುಖಾಂತರ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ನರೇಂದ್ರ ಮೋದಿಯವರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ಈ ದೇಶದ ಮೂಲನಿವಾಸಿಗಳನ್ನೇ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಎಲ್ಲಾ ರೀತಿಯ ಸಂವಿಧಾನ ವಿರೋಧಿಸವ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ಮೋದಿ ಹಾಗೂ ಶಾ ಅವರು ಕುತಂತ್ರ ನೀತಿಯಿಂದ ಎಚ್ಚತ್ತು ಕೊಳ್ಳಬೇಕಾಗಿದೆ. ಇದು ಕೇವಲ ಮುಸ್ಲಿಂರಿಗೆ ಅಲ್ಲ. ಎಲ್ಲಾ ಹಿಂದುಳಿದ, ಅಲ್ಪಸಂಖ್ಯಾತ, ಎಸ್‌ಸಿ ಎಸ್‌ಟಿ ಸಮುದಾಯಗಳ ಜನರು ಅರಿಯಬೇಕಾಗಿದೆ.
ನಾಗರಿಕ ನೋಂದಣಿ ಸಂದರ್ಭದಲ್ಲಿ ಅಲೆಮಾರಿ ಜನಾಂಗದವರು ಗುಳೆ ಹೋಗಿ ಬದಕು ಕಟ್ಟಿಕೊಳ್ಳುವ ಇತರೆ ಜನಾಂಗದವರು ತಮ್ಮ ವಂಶಸ್ಥರ ಜನ್ಮ ಪ್ರಮಾಣ ಪತ್ರ ಎಲ್ಲಿಂದ ತರಬೇಕು. ಪ್ರವಾಹದಲ್ಲಿ ನೊಂದ ಜನರು ತಮ್ಮ ಸರಸ್ವವನ್ನೆ ಕಳೆದುಕೊಂಡವರು ತಮ್ಮ ಪೂರ್ವಜರ ಮಾಹಿತಿ ಹೇಗೆ ನೀಡಬೇಕು ಎಂದು ಪ್ರಶ್ನಿಸಿದರು.
ದೇಶದಲ್ಲಿ ಅಶಾಂತಿಯನ್ನು ಮೂಡಿಸಿ ಜನರ ಮಧ್ಯೆ, ಧರ್ಮಗಳ ಮಧ್ಯೆ ಧ್ವೇಷವನ್ನು ತರುತ್ತಿರುವ ಕೇಂದ್ರ ಕೇಂದ್ರ ಸರಕಾರ ಏ. ೧ ರಂದ ದೇಶಾದ್ಯಂತ ನಡೆಯುವ ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನಕ್ಕೆ ಅಸಹಕಾರಿ ಚಳುವಳಿ ಆರಂಭಿಸಬೇಕಾಗುತ್ತದೆ. ಅದಕ್ಕಾಗಿ ದೇಶದ ೮೯ ಪ್ರತಿಶತ ಜನ ಮನೆಹೊಂದ ಹೊರಬಂದು ಅಸಹಕಾರ ಚಳುವಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವೇದಿಕೆ ಮೇಲೆ ಭಂತೆ ಸಂಘಾನಂದ ಹಾಗೂ ವಿವಿಧ ಮಠಾಧೀಶರು. ದಲಿತ ನಾಯಕ ಡಾ. ವಿಠ್ಠಲ ದೊಡ್ಡಮನಿ, ಶಾಸಕರಾದ ಖನಿಜ್ ಫಾತಿಮಾ ಖಮರುಲ್ ಇಸ್ಲಾಂ, ಎಂ.ವೈ ಪಾಟೀಲ, ವಿಧಾನ ಪರಿಷತ್ತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಭೀಮಣ್ಣ ಸಾಲಿ, ಸುಭಾಷ ರಾಠೋಡ, ಕರ್ನಾಟಕ ಪೀಪಲ್ಸ್ ಫೋರಂ ಸಂಸ್ಥಾಪಕ ಡಾ. ಅಸಗರ ಚುಲಬುಲ್, ನ್ಯಾಯವಾದಿ ವಾಹಾಜ್ ಬಾಬಾ, ಸಂಜಯ ಮಾಕಲ್, ವಾಹಾಬ ಬಾಬಾ, ಶೇಖ್ ಬಾಬಾ, ಅರ್ಜುನ ಭದ್ರ, ಆರ್.ಕೆ. ಹುಡಗಿ, ಗುರುಶಾಂತ ಪಟ್ಟೆದಾರ, ಪ್ರಕಾಶ ಮೂಲಭಾರತಿ, ಹಣಮಂತ ಯಳಸಂಗಿ, ಲಿಂಗರಾಜ ತಾರಫೈಲ್, ಸೂರ್ಯಕಾಂತ ನಿಂಬಾಳಕರ, ಎ.ಬಿ. ಹೊಸಮನಿ, ಸಂಜುಕುಮಾರ ಮಾಲೆ, ಮರೆಪ್ಪ ಹಳ್ಳಿ, ಮಲ್ಲಪ್ಪ ಹೊಸಮನಿ, ಲಕ್ಷ್ಮೀಕಾಂತ ಹುಬಳಿ, ಸೋಮಶೇಖರ ಮೇಲ್ಮನಿ, ಹಣಮಂತ ಬೋಧನಕರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.