ಸಂಸದ ಜಾಧವ್ ಕಚೇರಿ ಮುಂದೆ ಧರಣಿ ನಡೆಸುತ್ತಿದ ರೈತರ ಹೋರಾಟಗಾರರಿಗೆ ಎಳೆದಾಡಿ ಬಂಧಿಸಿದ ಪೊಲೀಸರು!

0
578

ಕಲಬುರಗಿ: ತೊಗರಿ ಖರೀದಿ ಕೋಟಾ ಹೆಚ್ಚಿಸುವುದಕ್ಕಾಗಿ ಪ್ರತಿ ಕ್ವಿಂಟಲ್ ತೊಗರಿಗೆ 7500 ರೂಪಾಯಿ ಬೆಂಬಲ ಬೆಲೆಗಾಗಿ ಆಗ್ರಹಿಸಿ ಕಳೆದ 8 ದಿನಗಳಿಂದ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರ ಕಚೇರಿ ಮುಂದೆ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದ 9ನೇ ದಿನಕ್ಕೆ ಕಾಲಿಟ್ಟಿತ್ತು, ಧರಣಿ ಸತ್ಯಗ್ರಹ ಸ್ಥಳಕ್ಕೆ ಪೋಲಿಸರು ಏಕಾಏಕಿ ಬಂದು ರೈತ ಮುಖಂಡರನ್ನು ಅಮಾನಷ್ಯವಾಗಿ ಎಳೆದು ಬಂಧಿಸಲಾಗಿದೆ.

ಹೋರಾಟಗಾರರನ್ನು ಬಂಧಿಸಿ, ಸ್ಟೇಷನ್ ಬಜಾರ್ ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ ಪೊಲೀಸರು ಹೋರಾಟಗಾರ ಮಾರುತಿ ಮಾನ್ಪಡೆ ಅವರಿಗೆ ಅಮಾನಷ್ಯವಾಗಿ ಎಳೆದು ಪೊಲೀಸರು ವಾಹನದಲ್ಲಿ ಕುರಿಸಿದಾಗ, ವಾಹನದ ಮುಂದೆ ಮಲಗಿ ಹೋರಾಟ ನಡೆಸುತ್ತಿದ ಹೋರಾಟಗಾರರ ಎಳೆದಾಡಿದ್ದಾರೆ.

Contact Your\'s Advertisement; 9902492681

ಜನರ ಸಮಸ್ಯೆ ವಿಷಯ ಬಂದಾಗ ಎಂದಿಗೂ ಕಾರ್ಯಗತನಾಗಿರುವ ಕಲಬುರಗಿ ಸಂಸದ ಡಾ. ಜಾಧವ್ ಸುಮಾರು 9ದಿನಗಳಿಂದ ತನ್ನ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದರೂ ಕೇರ್ ಮಾಡದೇ ಕನಿಷ್ಟ ಪಕ್ಷ ಹೋರಾಟಗಾರರ ಸಮಸ್ಯೆ ತಿಳಿದುಕೊಂಡು ಮಾತನಾಡಬೇಕಾತ್ತು ಎಂದು ಅನಿಸುತ್ತದೆ.

ಬೇಳೆದ ಬೆಲೆಗೆ ನ್ಯಾಯಕೇಳಿದರೆ ಅವರಿಗೆ ಎಳೇದಾಡಿ ಬಂದಿಸುವ ಮೂಲಕ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರಾ ಎಂಬುದು ರೈತರಲ್ಲಿ ಪ್ರಶ್ನೆ ಎದುರಾಗಿದ್ದು, ರೈತರ ಹೋರಾಟಗಳಿಗೆ ಯಾವುದೇ ಕಿಮ್ಮತಿಲ್ಲ ಎಂಬುದು ಈ ಘಟನೆ ಸಾಕ್ಷಿಯಾಗಿದೆ.

ಶರಣಬಸಪ್ಪ ಮಮಶೇಟಿ, ಮೌಲಾ ಮುಲ್ಲಾ, ಸುಧಾಮ ಧನ್ನಿ ಸೇರಿದಂತೆ ಹಲವು ರೈತರು ಮತ್ತು ಮುಖಂಡರನ್ನು ಬಂಧಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here