ಸಾಹಿತ್ಯ ಸಮ್ಮೇಳನ: ಮಹಾಲಕ್ಷ್ಮಿ ಲೇಔಟ್ ನಲ್ಲಿ ಶಾಸಕಿ ಫಾತಿಮಾ, ಮಹಿಳಾ ಸಮಿತಿ ಸದಸ್ಯರಿಂದ ಪ್ರಚಾರ

0
41

ಕಲಬುರಗಿ: ಫೆಬ್ರವರಿ 5 ರಿಂದ 7ರ ವರೆಗೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವಂತೆ ಶಾಸಕಿ ಕನೀಸ್ ಫಾತಿಮಾ ಅವರ ನೇತೃತ್ವದಲ್ಲಿ ಸಮ್ಮೇಳನದ ಮಹಿಳಾ ಸಮಿತಿಯು ಕಲಬುರಗಿ ನಗರದ ಮಹಾಲಕ್ಷ್ಮಿ ಬಡಾವಣೆ, ಇ.ಎಸ್.ಐ.ಸಿ.ಸುತ್ತಮುತ್ತ ಬಡಾವಣೆಯಲ್ಲಿ ಸಂಚರಿಸಿ ಮಹಿಳಾ ನಿವಾಸಿಗಳಲ್ಲಿ ಮನವಿ ಮಾಡಿದರು.

ಬಡಾವಣೆಯ ನಿವಾಸಿಗಳಿಗೆ ಪೋಸ್ಟರನ್ನು ನೀಡಿದ ಸಮಿತಿ ಸದಸ್ಯರು, ನುಡಿ ಜಾತ್ರೆಗೆ ಆಹ್ವಾನಿಸಿದರು.

Contact Your\'s Advertisement; 9902492681

ತದನಂತರ ಸಮಿತಿಯು ಕನ್ನಡಮ್ಮನ ಜಾತ್ರೆಗೆ ಬರುವ ಮಹಿಳಾ ಪ್ರತಿನಿಧಿಗಳು ತಂಗಲಿರುವ ಇ.ಎಸ್.ಐ.ಸಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದಕ್ಕೂ ಮುನ್ನ ಸಮಿತಿಯು ಸಭೆ ನಡೆಸಿ ಮುಂದಿನ ಕಾರ್ಯಯೋಜನೆ, ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾದೇವಿ ಸೇರಿದಂತೆ ಮಹಿಳಾ ಸಮಿತಿ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here