ಕಲಬುರಗಿ: ಸಂವಿಧಾನದ ದಿನದ ಪ್ರಯುಕ್ತ ಕತ್ತಲ ಸಂಜೆ ರಿಂಗ್ ರೋಡ್ ರಸ್ತೆ ಬದಿಗೆ ನಿಂತು ನೂರಾರು ಜನರು ಬೃಹತ್ ಮಾನವ ಸರಪಳಿ ನಿರ್ಮಿಸಿ ಕೆರಳ ಮಾದರಿಯಲ್ಲಿ ಸಿಎಎ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ಪ್ರದೇಶ ಖರ್ಗೆ ಪೆಟ್ರೋಲ್ ಬಂಗ್ ದಿಂದ ಆರಂಭವಾದ ಮಾನವ ಸರಪಳಿ ಟಿಪ್ಪು ಸುಲ್ತಾನ್ ಚೌಕ್, ರಫೀಕ್, ಚೌಕ್ ಮತ್ತು ಎಂ.ಎಸ್.ಕೆ.ಮಿಲ್ ಪ್ರದೇಶಗಳಲ್ಲಿ ಮಾನವ ಸರ್ಪಳಿ ಕಂಡುಬಂತು.
ಪೂರ್ವ ನಿಯೋಜಿತವಾಗದ ಈ ಪ್ರತಿಭಟನೆ ಯಾಗಿದ್ದು, ಕೆರಳ ಮಾದರಿ ಪ್ರತಿಭಟನೆ ಇದ್ದಾಗಿತು. ಜಿಲ್ಲೆಯಲ್ಲಿ ನೂತನ ರೀತಿಯ ಪ್ರತಿಭಟನೆ ಇದ್ದಾಗಿದ್ದು, ಪ್ರತಿಭಟನೆಯಲ್ಲಿ ಯುವ ಸಮುದಾಯ ರಸ್ತೆಯಲ್ಲಿ ಕಂಡಿದರು. ಸರಕಾರ ಮತ್ತು ಪೌರತ್ವ ಕಾಯ್ದೆ ವಿರುದ್ಧ ಘೋಷಣೆಗಳು ಕುಗಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಲೇಖಕಿ, ಹೋರಾಟಗಾರ್ತಿ ಕೆ. ನೀಲಾ, ಕೀಸಾನ್ ಸಭಾ ಮುಖಂಡ ಮೌಲಾಮುಲ್ಲಾ, ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಕಂಡರು.
https://youtu.be/ZCh4gbnPT_c