ಬಯಲಾಟ ಪರಂಪರೆ ಮುಂದಿನ ಪಿಳಿಗೆಗೂ ಪರಿಚಯಿಸಿ: ಡಾ.ಶಿವಾನಂದ ಮಹಾಸ್ವಾಮಿಗಳು

0
132

ಕಲಬುರಗಿ: ಆಧುನಿಕರಣದ ಪ್ರಭಾವಕ್ಕೆ ಅಳಿವಿನ ಅಂಚಿನಲ್ಲಿರುವ ಬಯಲಾಟ ಪರಂಪರೆ ಮುಂದಿನ ಪಿಳಿಗೆಗೂ ಪರಿಚಯಿಸುವ ಅಗತ್ಯತೆ ಇದೆ ಎಂದು ಸೊನ್ನ ದಾಸೊಹ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಜೇವರ್ಗಿ ತಾಲೂಕಿನ ಮಂದೆವಾಲ್ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಮಂದೇವಾಲ್ ಸಹಯೋಗದೊಂದಿಗೆ ಹಮ್ಮಿಕೊಂಡ ಬಯಲಾಟ ಸಂಭ್ರಮ ಕಾರ್ಯಕ್ರಮದ ಸಾನಿಧ್ಯವಹಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಅನಾಧಿಕಾಲದಿಂದಲೂ ಬಯಲಾಟ ಪರಂಪರೆ ನಮ್ಮ ನಾಡಿನಲ್ಲಿ ಬೆಳೆದು ಬಂದಿದ್ದು, ರಂಜನೆ, ಮನೊರಂಜನೆ ಜೊತೆಗೆ ಮಾನವಿಯ ಸಂದೇಶಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬಯಲಾಟ ಪರಂಪರೆ ವಿಶೀಷ್ಠಪೂರ್ಣವಾಗಿ ಬೆಳೆದು ಬಂದಿದೆ ಎಂದರು.

Contact Your\'s Advertisement; 9902492681

ಬಯಲಾಟಗಳು ಸಣ್ಣಾಟ, ದೊಡ್ಡಾಟ, ಶ್ರೀ ಕೃಷ್ಣ ಪಾರಿಜಾತ, ತೊಗಲು ಗೊಂಬೆ ಆಟ ಹಿಗೆ ವಿವಿಧ ಪ್ರಕಾರನ್ನೊಳಗೊಂಡು ಆಯಾ ಭಾಗದ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬಯಲಾಟ ಪರಂಪರೆ ಬೆಳೆದು ಬಂದಿದ್ದು, ಆ ಸಾಲಿನಲ್ಲಿ ಬಯಲಾಟಗಳು ಹಳ್ಳಿಯ ಜನರ ಐಕ್ಯತೆಯ ಹಾಗೂ ಒಗ್ಗಟಿನ ಪ್ರದರ್ಶನದ ಜೊತೆಗೆ ಸಾಂಸ್ಕೃತಿಕ ಸಂಬಂಧ ಮಾನವಿಯ ಸಂಬಂಧ ಬೆಸೆಯುವ ಬೆಸುಗೆಯಾಗಿವೆ ಎಂದರು.
ಇಂದು ಆಧುನಿಕರಣದ ಭರಾಟೆಗೆ ಟಿವಿ ಮಾಧ್ಯಮಗಳ ಹೊಡೆತಕ್ಕೆ ಬಯಲಾಟ ಕಲೆಗಳು ಮರೆಯಾಗುತ್ತಿವೆ, ಆ ನಿಟ್ಟಿನಲ್ಲಿ ಮತ್ತೊಮ್ಮೆ ಬಯಲಾಟ ಪರಂಪರೆ ಬೆಳೆಸುವ ದೃಷ್ಟಿಕೊನದಿಂದ ಕರ್ನಾಟಕ ಬಯಲಾಟ ಅಕಾಡೆಮಿ ಹೊಸ ಹೊಸ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಸವಕಲ್ಯಾಣ ಸಮಾರಂಭದ ಸಾನಿಧ್ಯ ವಹಿಸಿದ್ದ ಬಸವಕಲ್ಯಾಣ ಬಸವ ಪೀಠದ ನಿರಂಜನ ಮಹಾಸ್ವಾಮಿಗಳು ಆಶಿರ್ವಚನವನ್ನು ನಿಡಿದರು, ಪ್ರಮುಖರಾದ ಶ್ರೀಶೈಲ ಬುಟ್ನಾಳ, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ, ಜೇವರ್ಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವನಗೌಡ ಪಾಟೀಲ್ ಹಂಗರಗಿ, ಜಾನಪದ ಪರಿಷತ್ತಿನ ಅಧ್ಯಕ್ಷ ಎಸ್.ಕೆ.ಬಿರಾದರ, ಬಿಜಾಪುರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಪಾಟೀಲ್ ಇಬ್ರಾಹಿಂಪುರ, ಸಾಹಿತಿ ಪಂಡಿತ್ ಜಿ ನೆಲಗಿ, ಗ್ರಾಮ ಪಂಚಾಯತಿ ಅಧ್ಯಕ್ಷ ರೇಣುಕಾ ಸಿಂಗೆ, ಉಪನ್ಯಾಸಕ ಮಲ್ಲಿಕಾರ್ಜುನ ಇಬ್ರಾಹಿಂಪುರ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಸಂಚಾಲಕ ಶಿವಾನಂದ ಶೆಲ್ಲಿಕೇರೆ ಮಾತನಾಡಿ ಕರ್ನಾಟಕ ಬಯಲಾಟ ಅಕಾಡೆಮಿ ಕಲಾವಿಧರ ಏಳಿಗೆಗಾಗಿ ಪ್ರೇರಣದಾಯಕ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದ್ದು ಕಲಾವಿಧರಿಗೆ ಮಾಶಾಸನ, ಪ್ರಶಸ್ತಿ ಪ್ರಾಧಾನ, ಕಲಾ ತಂಡಗಳ ಪ್ರಾಯೋಜನೆ, ಕಲೆಗಳ ತರಬೇತಿ ಹಾಗೂ ಇನ್ನಿತರ ಯೋಜನೆಗಳನ್ನು ಹಾಕಿಕೊಂಡು ಬಯಲಾಟ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷವಾದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಅಧ್ಯಕ್ಷ ಕಾಶಿನಾಥ ಗಾಣಿಗೇರ ಪ್ರಾಸ್ತಾವಿಕ ಮಾತನಾಡುತ್ತ ಅವರು, ನಮ್ಮ ಕಲಾವಿದರು ದಾಖಲಾತಿಗಾಗಿ ಕೆಲಸ ಮಾಡಿಲ್ಲ. ಉತ್ತರ ಕರ್ನಾಟಕದ ಕಲಾವಿದರಿಗೆ ಮಾಶಾಸನ ಭದ್ರತೆ ಅವಶ್ಯವಿದೆ. ದಾಖಲಾತಿಗಳಿಗೆ ಒತ್ತು ಕೊಡದೆ ನಿಜವಾದ ಕಲಾವಿದರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿ ಮಾಶಾಸನ ಕಲ್ಪಿಸುವಂತಾಗಬೇಕು ಎಂದು ಹೇಳಿದರು.

ಬಯಲಾಟ ಅಕಾಡೆಮಿ ಸದಸ್ಯರುಗಳಾದ ಮಂಜು ಗುರುಲಿಂಗ ಪೂಜಾರಿ, ಶಿವಲಿಂಗ ಪೂಜಾರಿ, ಮಾಜಿ ಸದಸ್ಯ ಬಾಪು ಶೊಕತ್ ತಾಶೆವಾಲೆ ವೇದಿಕೆಮೇಲಿದ್ದರು. ಕಾರ್ಯಕ್ರಮದಲ್ಲಿ ಮಂದೆವಾಲ್ ಶಂಕರಲಿಂಗೇಶ್ವರ ಬಯಲಾಟ ಸಂಘದಿಂದ ಬಯಲಾಟ ಹಾಡುಗಳ ಪ್ರದರ್ಶನ, ಚಡಚಣದ ಲಕ್ಷ್ಮೀ ಬಯಲಾಟ ಮಂಡಳಿವತಿಯಿಂದ ದೊಡ್ಡಾಟ ಕುಣಿತ ಪ್ರಾತ್ಯಕ್ಷಿಕೆ, ಉಗಾರಪುರ್ದ ಬಾಲಗೋಪಾಲ ಕೃಪಾ ಪೊಷಿತ ಕಲಾ ಸಂಘದಿಂದ ಪಾರಿಜಾತ ಪ್ರದರ್ಶನ, ಸವದಿ ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಹೆಮರೆಡ್ಡಿ ಮಲ್ಲಮ್ಮ ಸಣ್ಣಾಟ ಪ್ರದರ್ಶನ ನಡೆಯಿತು. ರಾಮಚಂದ್ರ ಬಂಟನುರು ಸಂಗಡಿಗರು ಪ್ರಾಥಿಸಿದರು, ಸುನೀಲ್ ಬಳ್ಳುಂಡಗಿ ನಿರೂಪಿಸಿದರು, ಲಂಕೇಶ ದೇವತ್ಕಲ್ ಸ್ವಾಗತಿಸಿದರು, ಮಡಿವಾಳಪ್ಪಗೌಡ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here