ಜನತೆ ಗುಳೆ ಹೋಗಬೇಡಿ ಉದ್ಯೋಗ ನೀಡಲಾಗುವುದು: ಇಒ ಅಂಬ್ರೇಶ

0
58

ಸುರಪುರ: ಇಂದು ಸರಕಾರ ಜನರಿಗಾಗಿ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿ ಗ್ರಾಮೀಣ ಪ್ರದೇಶದ ಎಲ್ಲರಿಗೂ ದುಡಿಯಲು ಉದ್ಯೋಗ ನೀಡಲಾಗುತ್ತಿದೆ.ಆದ್ದರಿಂದ ತಾವ್ಯಾರು ಬೇರೆ ಕಡೆಗೆ ಕೆಲಸ ಅರಸಿ ಗುಳೆ ಹೋಗದೆ ತಮ್ಮ ತಮ್ಮ ಊರುಗಳಲ್ಲಿಯೇ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ತಿಳಿಸಿದರು.

ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಜಿಲ್ಲಾ ಹಾಗು ತಾಲೂಕು ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿ,ಉದ್ಯೋಗ ಖಾತ್ರಿ ಯೋಜನೆಯಡಿ ಇದುವರೆಗೆ ೧೦೦ ದಿನಗಳ ಉದ್ಯೋಗ ನೀಡಲಾಗುತ್ತಿತ್ತು,ಆದರೆ ಈಗ ಬರಗಾಲದ ಕಾರಣದಿಂದ ೧೫೦ ದಿನಗಳ ವರೆಗೆ ಉದ್ಯೋಗ ನೀಡಲಾಗುತ್ತದೆ.ಗಂಡು ಮತ್ತು ಹೆಣ್ಣಿಗೆ ನಿತ್ಯವು ೨೪೯ ರೂಪಾಯಿಗಳ ಕೂಲಿ ನೀಡಲಾಗುತ್ತದೆ.ಕೆಲಸ ಮಾಡಿದ ೧೫ ದಿನದೊಳಗೆ ನಿಮ್ಮ ಖಾತೆಗೆ ಹಣ ಹಾಕಲಾಗುತ್ತದೆ.ಅಲ್ಲದೆ ನೀವು ವಾಸವಾಗಿರುವ ಸ್ಥಳದಿಂದ ೫ ಕಿಲೋ ಮೀಟರ್‌ಗಿಂತ ಹೆಚ್ಚಿನ ದೂರದಲ್ಲಿ ಕೆಲಸ ಮಾಡಿದರೆ ಹೆಚ್ಚುವರಿಯಾಗಿ ಶೇ ೧೦ ರಷ್ಟು ಹಣವನ್ನು ಸಾರಿಗೆ ಮತ್ತು ಜೀವನ ವೆಚ್ಚಕ್ಕಾಗಿ ನೀಡಲಾಗುತ್ತದೆ.

Contact Your\'s Advertisement; 9902492681

ವಿಶೇಷ ತೇತನರು ಹಾಗು ವೃಧ್ಧರಿಗಾಗಿ ಕೆಲಸದಲ್ಲಿ ಶೇ ೫೦ ರೀಯಾಯಿತಿ ನೀಡಲಾಗುತ್ತದೆ.ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗು ಬುಡಕಟ್ಟು ಜನಾಂಗ,ಬಿಪಿಎಲ್ ಕುಟುಂಬ,ಮಹಿಳಾ ಪ್ರಧಾನ ಕುಟುಂಬ ಸೇರಿದಂತೆ ವಿವಿಧ ಯೋಜನೆಗೆ ಅರ್ಹ ಫಲಾನುಭವಿ ಕುಟುಂಬಗಳಿಗೆ ವ್ಯಕ್ತಿಗತ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ.ಆದ್ದರಿಂದ ತಾವೆಲ್ಲರು ಗುಳೆ ಹೋಗುವುದನ್ನು ಬಿಟ್ಟು ತಮ್ಮ ಗ್ರಾಮಗಳಲ್ಲಿಯೆ ಉದ್ಯೋಗ ಖಾತರಿ ಯೋಜನೆಯ ದುಡಿಯುವ ಕೈಗಳಿಗೆ ಕೂಲಿ ಖಾತರಿಯಡಿ ಕೆಲಸ ನಿರ್ವಹಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ವಿಶ್ವನಾಥ,ಐ.ಸಿ ಸಂಪನ್ಮೂಲ ಅಧಿಕಾರಿ ಅನಿಲ,ಹಣಮಂತ ಬಡಿಗೇರ,ವೆಂಕನಗೌಡ,ಈಶ್ವರ ಕಟ್ಟಿಮನಿ ಸೇರಿದಂತೆ ಅನೇಕ ಜನ ಕೂಲಿಕಾರರು ಹಾಗು ಸಾರ್ವಜನಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here