ಮಾಣಿಕೇಶ್ವರರ ಜಾತ್ರಾ ಮಹೋತ್ಸವದಲ್ಲಿ ಸಾಹಿತ್ಯ ಸಮ್ಮೇಳನ ಪ್ರಚಾರ

0
86

ಬೀದರ್: ಹುಮನಾಬಾದ ಪಟ್ಟಣದ ಮಾಣಿಕ ನಗರ ಶಿವಸಂಗ ಸಂಸ್ಕೃತಿಕ ಸೇವಾ ಸಂಘ ಹಾಗೂ ಸಾಹಿತ್ಯ ಬಳಗದ ವತಿಯಿಂದ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಚಾಲನೆ ನೀಡಿದರು.

ಮಾಣಿಕೇಶ್ವರರ ಸನ್ನಿದಿಯಲ್ಲಿ ಭಕ್ತರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಶಕಗಳ ನಂತರ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಕುಟುಂಬ ಸಮೇತ ಬಂದು ಸಮ್ಮೇಳನದಲ್ಲಿ ಭಾಗವಹಿಸಿ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪರಮೇಶ್ವರ ಶಟಕಾರ, ಡಾ. ಅಶೋಕ್ ಶಟಕಾರ, ಡಾ. ಸಂಜೀವಕುಮಾರ ಶಟಕಾರ ಹಾಗೂ ಶ್ರೀಸಿಮೆಂಟ್ ನ ಸೀನಿಯರ್ ಮ್ಯಾನೇಜರ್ ವಿನೋದ್ ಕುಮಾರ ಮಾಶೆಟ್ಟೆ, ಬಸವ ಕಲ್ಯಾಣದ ಶಿವಯ್ಯ ಸ್ವಾಮಿ ಹಾಗೂ ವೈಜಿನಾಥ ಸ್ವಾಮಿ, ಪರಮೇಶ್ವರ ಅಣದುರಗೆ, ಪ್ರಶಾಂತ ಬಡಿಗೇರ್, ಕಲಬುರಗಿಯ ವೀರಯ್ಯ ಸ್ವಾಮಿ, ಹಳ್ಳಿಖೇಡನ ಎಸ್. ಪಿ. ಸ್ವಾಮಿ ಹಾಗೂ ಶೋಭಾವತಿ ಹಳೆಂಬುರ, ಅಕ್ಷತಾ ಹಿರೇಮಠ ಹಾಗೂ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here