ಕಲಬುರ್ಗಿ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯ್ಕೆಯಲ್ಲಿ ಭಾರಿ ಗೋಲ್ಮಾಲ್ ಆರೋಪ.!

0
61

ಶಹಾಪುರ: ಇದೇ ಫೆಬ್ರುವರಿ ೫.೬.ಮತ್ತು ೭ ರಂದು ಕಲಬುರಗಿಯಲ್ಲಿ ಜರುಗಲಿರುವ ೮೫ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದ ಕಲಾ ತಂಡಗಳ ಆಯ್ಕೆಯಲ್ಲಿ ಭಾರಿ ಗೋಲ್ಮಾಲ್ ಆಗಿರುವುದು ಇತ್ತೀಚೆಗೆ ಕಂಡು ಬಂದಿರುವ ಆರೋಪಗಳು ಕೇಳಿ ಬರುತಿವೆ.

ಕಲಾ ತಂಡಗಳ ಪರಿಶೀಲನೆ ಮಾಡದೇ ಏಕಪಕ್ಷೀಯ ನಿರ್ಧಾರದಿಂದ ಸಮಿತಿಯ ಸದಸ್ಯರು ಹಾಗೂ ಕಲಬುರಗಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ತಮಗೆ ಬೇಕಾದ ಸಂಘ ಸಂಸ್ಥೆಗಳನ್ನು ಕಲಾತಂಡಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Contact Your\'s Advertisement; 9902492681

ಸಾಹಿತ್ಯ ಪರಿಷತ್ತಿನ ನಿಯಮಾವಳಿಯಂತೆ ಆಯಾ ಜಿಲ್ಲಾ ಅಧ್ಯಕ್ಷರ ಶಿಫಾರಸಿನ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮದ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ತಮಗೆ ಬೇಕಾದ ಕಲಾತಂಡಗಳನ್ನು ನೇರವಾಗಿ ಆಯ್ಕೆ ಮಾಡಿದ್ದಾರೆ. ಕಲಬುರಗಿಯನ್ನು ಹೊರತುಪಡಿಸಿ ಬೆಂಗಳೂರಿನಿಂದ ಅತಿ ಹೆಚ್ಚು  ಕಲಾತಂಡಗಳಿಗೆ ಪ್ರಾಯೋಜನೆ ನೀಡಿ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧ್ಯಕ್ಷರಾದ ಸಿಂಪಿ ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ  ಸಾಂಸ್ಕೃತಿಕ ಕಾರ್ಯಕ್ರಮ ಕಲಾ ತಂಡಗಳ ಆಯ್ಕೆಯಲ್ಲಿ ಕೂಡ ಕೆಲವೊಂದಿಷ್ಟು ತಪ್ಪುಗಳಾಗಿವೆ ನಾಳೆನೇ ಇದರ ಬಗ್ಗೆ ವಿಚಾರಿಸಿ   ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನನಗೂ ಕೂಡ ಈ ರೀತಿ ಮಾಡಿರುವುದು ತುಂಬಾ ಬೇಸರವಾಗಿದೆ  ಇವತ್ತೇ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಒಂದು ವೇಳೆ ಸರಿಪಡಿಸದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here