ಸುರಪುರ: ವಿದ್ಯಾರ್ಥಿಗಳು ಆದರ್ಶ ಶಿಕ್ಷಕರಾಗಬೇಕು, ಸಾಕ್ಷರತೆ ಪಡೆದು ರೈತನಾಗಿ ಕೃಷಿಯಲ್ಲಿ ಆವಿಷ್ಕಾರ ಮಾಡಿ ಹೆಚ್ಚು ಫಲಪಡೆಯಬೇಕು. ದೇಶ ಕಾಯುವ ಯೋಧನಾಗಿ ತಮ್ಮ ವೃತ್ತಿಯನ್ನು ಆಯ್ದು ಕೊಳ್ಳಬೇಕು.
ವಿನಯಶೀಲರಾಗಬೇಕು, ರಾಷ್ಟಪ್ರೇಮವನ್ನು ಬೆಳೆಸಿಕೊಳ್ಳಬೇಕು ಮತ್ತು ತಂದೆ ತಾಯಿಯನ್ನು ಹಾಗು ವಿದ್ಯೆ ನೀಡಿದ ಗುರುಗಳನ್ನು ಎಂದೂ ಮರೆಯಬಾರದು ಎಂದು ಯಾದಗಿರಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಾ ಹನಮಪ್ಪ ನಾಯಕ (ತಾತಾ) ಮಾತನಾಡಿದರು.
ನಗರದ ರಂಗಂಪೇಟೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಿ.ಯು.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ರಾಷ್ಟಕ್ಕಾಗಿ ತಮ್ಮ ಪ್ರಾಣವನ್ನೆ ಬಲಿದಾನಗೈದ ಸ್ವತಂತ್ರ್ಯ ಹೋರಾಟಗಾರರ, ಸೈನಿಕರ ಸಾರ್ಥಕ ಬದುಕನ್ನು ಸದಾ ಸ್ಮರಿಸಬೇಕು ಎಂದರು ಹಾಗು ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಣಕಾಸಿನ ಪ್ರೋತ್ಸಾಹ ನೀಡುವ ಕಾಲೇಜು ಪ್ರತಿಭಾ ಪುರಸ್ಕಾರ ನಿಧಿ ಗೆ ರೂ.೧೧ ಸಾವಿರ ಹಣವನ್ನು ನೀಡುತ್ತೇನೆಂದು ಘೋಷಿಸಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಸುರಪುರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸುರಪುರ ಪ್ರಾಂಶುಪಾಲರಾದ ಸೈದಾ ಬೀ ಜಾಮಾದಾರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸ್ವಾಭಿಮಾನ, ನಮ್ಮ ನೆಲದ ಐತಿಹಾಸಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲು ಕನಸು ಕಾಣಬೇಕು, ಆ ಕನಸನ್ನು ನನಸು ಮಾಡಲು ಸತತ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಕಷ್ಟ ಪಟ್ಟು ಓದದೇ,ಇಷ್ಟ ಪಟ್ಟು ಓದಬೇಕು. ವಿದ್ಯಾರ್ಥಿಗಳು ಆಧುನೀಕ ತಂತ್ರಜ್ಞಾನದ ಮೊಬೈಲ್ ಮೇಲ್,ಫೇಸ್ ಬುಕ್, ಟಿ.ವಿ. ಸಾಮಾಜಿಕ ಜಾಲತಾಣಗಳ ದಾಸರಾಗದೇ, ಅವುಗಳನ್ನು ಹಿತಮಿತವಾಗಿ ಬಳಸಬೇಕೆಂದರು.
ಮತ್ತೋರ್ವ ಮುಖ್ಯ ಅತಿಥಿ ಉಪನ್ಯಾಸಕ ಮಹ್ಮದ ಮಶಾಖ್ ಮಾತನಾಡುತ್ತಾ, ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರಮುಖವಾದ ಹಂತ ಇದು ಜೀವನದ ದಿಕ್ಕನ್ನೆ ಬದಲಿಸುತ್ತದೆ. ವಿದ್ಯಾರ್ಥಿಗಳು ಪಠ್ಯ, ಮತ್ತು ಪಠ್ಯೇತರ ಚಟುವಟಿಕೆಗಲ್ಲಿ ಭಾಗವಹಿಸಬೇಕು. ಜಗತ್ತು ಬದಲಾಗಬೇಕೆಂದರೆ ಮೊದಲು ನೀನು ಬದಲಾಗಬೇಕು. ಇತಿಹಾಸ ಮರೆತವನ್ನು ಇತಿಹಾಸ ಸೃಷ್ಠಿಸಲಾರ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಉಪಪ್ರಾಂಶುಪಾಲರಾದ ಗುರುಲಿಂಗಪ್ಪ ಖಾನಾಪುರ, ಶ್ರೀನಿವಾಸ ನಾಯಕ ದರಬಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಬಸವರಾಜ ಕೊಡೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕಬೀರ್ ಟಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಅಜ಼ೀಜ್ ಸ್ವಾಗತಿಸಿದರು. ಉಪನ್ಯಾಸಕಿ ಶಕುಂತಲಾ ಜಾಲವಾದಿ ವಾರ್ಷಿಕ ವರದಿ ವಾಚಿಸಿದರು.ಅರುಣಮ್ಮ ಚಿನ್ನಾಕಾರ ನಿರೂಪಿಸಿದರು. ಸಂಗಮೇಶ ನಾಗಲಿಕ್,ಶ್ರೀನಿವಾಸ ಕುಲ್ಕರ್ಣಿ, ಈರಣ್ಣ ಹೊಸಮನಿ, ಶರಣಪ್ಪ ಚಿನ್ನಾಕಾರ, ರಾಜಶೇಖರ, ಅಬ್ದುಲ್ ರಜ಼ಾಕ್ ಭಾಗವಾನ, ಮಲ್ಕಣ್ಣ, ಉಪಸ್ಥಿತರಿದ್ದರು. ದೇವಮ್ಮ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು,ಉಪನ್ಯಾಸಕಿ ಗೌಸಿಯಾ ಫರವಿನ್ ವಂದಿಸಿದರು.