ಶೋಷಿತರ ಧ್ವನಿಯಾಗಿದ್ದ ಡಿ.ಮಂಜುನಾಥರ ಅಗಲಿಕೆ ಬಹುದೊಡ್ಡ ನಷ್ಟ: ನಂದಕುಮಾರ ಕನ್ನೆಳ್ಳಿ

0
41

ಸುರಪುರ: ಕಳೆದೆರಡು ದಿನಗಳ ಹಿಂದೆ ನಿಧನರಾದ ಮಾಜಿ ಸಚಿ ಡಿ.ಮಂಜುನಾಥ ಅವರು ನಾಡು ಕಂಡ ಧಿಮಂತ ರಾಜಕಾರಣಿಯಾಗಿದ್ದರು.ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ ಅವರ ಅಗಲಿಕೆ ನಾಡಿಗಾದ ಬಹು ದೊಡ್ಡ ನಷ್ಟ ಎಂದು ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಕನ್ನೆಳ್ಳಿ ಮಾತನಾಡಿದರು.

ಇತ್ತೀಚೆಗೆ ನಿಧರಾದ ಮಾಜಿ ಸಚಿವ ಡಿ.ಮಂಜುನಾಥ ಅವರಿಗೆ ಜಾಂಬವ ಮಾದಿಗ ಸಮಾಜದಿಂದ ನಗರದ ಟೈಲರ್ ಮಂಜಿಲ್‌ನಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಡಿ.ಮಂಜುನಾಥವರು ಯಾವುದಾದರು ಕಾರ್ಯಕ್ರಮಕ್ಕೆ ಆಗಮಿಸಾದಗ ಮಾಜಿ ಪ್ರಧಾನಿ ದೇವೆಗೌಡರು ಸಹ ಎದ್ದು ನಿಂತು ಅವರನ್ನು ಬರಮಾಡಿಕೊಳ್ಳುತ್ತಿದ್ದರು.ಅಂತಹ ಮಹನಿಯರಾಗಿದ್ದ ಡಿ.ಮಂಜುನಾಥವರ ನಿಧನ ತುಂಬಾ ದುಃಖ ಮೂಡಿಸಿದೆ.ರಾಜಕಾರಣದಲ್ಲಿ ಅವರು ತಾವು ಮಾತ್ರ ಬೆಳೆಯದೆ ಅನೇಕ ಯುವಕರನ್ನು ಹುರಿದುಂಬಿಸಿ ಬೆಳೆಸಿದ್ದಾರೆ.ಅವರು ಬದುಕಿನುದ್ದಕ್ಕೂ ದಲಿತರ ಧ್ವನಿಯಾಗಿ ಸೇವೆ ಸಲ್ಲಿಸಿದವರು ಎಂದು ಬಣ್ಣಿಸಿದರು.

Contact Your\'s Advertisement; 9902492681

ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣದ) ಜಿಲ್ಲಾಧ್ಯಕ್ಷ ಹಣಮಂತ ಕಟ್ಟಮನಿ ಮಾತನಾಡಿ,ನಾಡಿನ ಹಿರಿಯ ರಾಜಕಾರಣಿಯಾಗಿದ್ದ ಡಿ.ಮಂಜುನಾಥವರು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಅನೇಕ ಅಭೀವೃಧ್ಧಿ ಕಾರ್ಯಗಳು ಇಂದಿಗೂ ಕಾಣಸಿಗುತ್ತವೆ.ಅಲ್ಲದೆ ಅವರು ಹಾಕಿ ಕೊಟ್ಟ ಮಾರ್ಗ ಇಂದಿನರಾಜಕಾರಣಿಗಳಿಗೆ ಆದರ್ಶಪ್ರಾಯವಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಆದಿ ಜಾಂಬವ ವಕೀಲರ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯರಾದ ಯಲ್ಲಪ್ಪ ಹುಲಕಲ್ ಮಾತನಾಡಿ,ಮಂಜುನಾಥವರು ಕಾರ್ಮಿಕ ಸಚಿವರಾಗಿ ಹಾಗು ಉನ್ನತ ಶಿಕ್ಷಣ ಸಚಿವರಾಗಿ ಹಲವಾರು ಜನಪರವಾದ ಯೋಜನೆಗಳನ್ನು ಕೊಟ್ಟಿದ್ದಾರೆ.ಅಲ್ಲದೆ ೧೯೮೭ ರಿಂದ ೯೨ರ ವರೆಗೆ ಸಭಾಪತಿಯಾಗಿ ನಿರ್ವಹಿಸಿದ ಅವರ ಸೇವೆ ಅವಿಸ್ಮರಣಿಯವಾಗಿದೆ.ಆರು ವಿವಿಗಳಲ್ಲಿನ ಖಾಲಿ ಇದ್ದ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ,ದಲಿತರ ಉದ್ಧಾರಕ್ಕಾಗಿ ಕೂಡು ವ್ಯವಸಾಯ ಸಹಕಾರ ಸಂಘಗಳ ಸ್ಥಾಪನೆ,ಅನೇಕ ಜಿಲ್ಲೆಗಳಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸ್ಥಾಪನೆ ಜೊತೆಗೆ ಮಾದಿಗ ಸಮುದಾಯದ ಏಳಿಗೆಗಾಗಿ ಕರ್ನಾಟಕ ಮಾದಿಗ ಮಹಾಸಭಾವನ್ನು ಸ್ಥಾಪಿಸಿದ ಧಿಮಂತ ವ್ಯಕ್ತಿ ಮಂಜುನಾಥವರು ಅನೇಕ ಜನಪರ ಯೋಜನೆಗಳನ್ನು ನೀಡಿದ್ದರು. ಅವರ ಅಗಲಿಕೆ ನೋವು ತರಿಸಿರುವುದರ ಜೊತೆಗೆ ನಾಡಿಗೆ ಬಹುದೊಡ್ಡ ನಷ್ಟವುಂಟುಮಾಡಿದೆ ಎಂದರು.

ಸಭೆಯ ಆರಂಭದಲ್ಲಿ ಮಂಜುನಾಥವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಮಾದಿನ ಮಹಾಸಭಾದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಂದಾಲೆ,ವಕೀಲರಾದ ರವಿಶಂಕರ ದೇವರಗೋನಾಲ,ಪರಶುರಾಮ ಹುಲಿಕಲ್,ಮೌನೇಶ ಬಿರಾದಾರ,ಯಲ್ಲಾಲಿಂಗ ಕಾಂಜಾಂಜಿ ಇದ್ದರು.ಮಾದಿಗ ಯುವ ಸೇನೆ ತಾಲೂಕು ಅಧ್ಯಕ್ಷ ಬಸವರಾಜ ಮುಷ್ಠಳ್ಳಿ ನಿರೂಪಿಸಿದರು,ನಾಗರಾಜ ವಾಗಣಗೇರಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here