ಕಲಬುರಗಿ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಸುಮುದಾಯ ಆರೋಗ್ಯ ಕೇಂದ್ರ ಶಹಾಬಾದ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಹಾಬಾದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಶಹಾಬಾದ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಹಾಬಾದ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ ಪಿ.ಎಮ್.ಸಜ್ಜನ ಮಾತನಾಡುತ್ತಾ ರಾಷ್ಟ್ರೀಯ ಜಂತುಹುಳು ನಿವಾರಣಾ ಮಾತ್ರೆಯನ್ನು ಕಡ್ಡಾಯವಾಗಿ ಮಕ್ಕಳು ಸೇವಿಸಬೇಕು. ಜಂತು ಹುಳುಗಳು ಅಂದರೆ ಮಾನವನ ಕರುಳುನಿಂದ ಪೋಷಕಾಂಶಗಳನ್ನು ಹೀರಿಕೊಂಡು ಜೀವಿಸುವ ಪರಾವಲಂಬಿಗಳು ಮಕ್ಕಳಲ್ಲಿ ಕಂಟುಬರುವ ಅತ್ಯಂತ ಸಾಮಾನ್ಯ ಮೂರು ವಿಧದ ಜಂತುಹುಳುಗಳು ಎಂದರೆ ದುಂಡು ಹುಳುಗಳು , ಚಾಟಿ ಹುಳುಗಳು, ಕೊಕ್ಕೆ ಹುಳುಗಳು ಜಂತುಹುಳುಗಳು ಸೋಂಕಿನಿಂದ ಮಕ್ಕಳ ಮೇಲೆ ಉಂಟಾಗುವ ಪರಿಣಾಮಗಳು ರಕ್ತ ಹೀನತೆ ,ಪೌಷ್ಠಿಕಾಂಶ ಕೊರತೆ, ಹಸಿವೆಯಾಗದೆಯಿರುವುದು, ನಿಶಕ್ತಿ ಮತ್ತು ಆತಂಕ ಹೊಟ್ಟೆನೋವು ವಾಕರಿಕೆ,ವಾಂತಿ ಮತ್ತು ಅತಿಸಾರ ತೂಕ ಕಡಿಮೆಯಾಗುವುದು, ಜಂತುಹುಳು ಮಾತ್ರೆ ಸೇವಿಸುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸುತ್ತದೆ ಪೌಷ್ಠಿಕಾಂಶ ಹೀರಿಕೆಯನ್ನು ಸುದಾರಿಸುತ್ತದೆ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದಂತಹ ಡಾ ಶಂಕರ ರಾಠೋಡ ವೈದ್ಯಾಧಿಕಾರಿಗಳು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶಹಾಬಾದ ಇವರು ಮಾತನಾಡುತ್ತಾ ಸಮುದಾಯದಲ್ಲಿ ಜಂತುಹುಳು ಸೋಂಕನ್ನು ಕಡಿಮೆ ಮಾಡಲು ಎಲ್ಲಾ ಮಕ್ಕಳಿಗೂ ಜಂತುಹುಳು ನಾಶಕ ಮಾತ್ರೆ ನೀಡುವುದು ಅವಶ್ಯಕವಾಗಿದೆ.ಜಂತುಹುಳು ನಾಶಕ ಮಾತ್ರೆಯು ಎಲ್ಲಾ ಮಕ್ಕಳಿಗೂ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಈ ಚಿಕಿತ್ಸೆ ತಗೆದುಕೊಳ್ಳುವುದನ್ನು ಶಿಫಾರಸ್ಸು ಮಾಡುತ್ತಿದೆ ಹಿಗಾಗಿ ೧-ರಿಂದ ೧೯ ವರ್ಷ ವಯಸ್ಸಿನ ಮಕ್ಕಳಿಗೆ ಈ ಮಾತ್ರೆಯನ್ನು ನೀಡುವುದು ಕೆಲಸವಾಬೇಕಾಗಿದೆ.ಈ ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿಯೂ ನೀಡಬಹುದು ಅಗಿಯುವಂತೆ ಹಾಗೂ ೧ ರಿಂದ ೨ ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಜಜ್ಜಿದ ಮಾತ್ರೆಯನ್ನು ನೀರಿನೊಂದಿಗೆ ಬೇರಿಸಿ ಕೋಡಬುಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಶ್ರೀ ಅಮರೇಶ ಇಟಗಿಕರ್ ಹದಿಹರೆಯ ಆಪ್ತಸಮಾಲೋಚಕರು ಮಾತನಾಡುತ್ತಾ ೧ ರಿಂದ ೧೯ ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಜಂತುಹುಳು ಮಾತ್ರೆಯನ್ನು ಶಹಾಬಾದ ನಗರದ ಎಲ್ಲಾ ಶಾಲೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿವಾಗಿ ನೀಡಲಾಗುತ್ತಿದೆ.ಈ ಮಾತ್ರ ಮಕ್ಕಳಿಗೆ ಮತ್ತು ವಯಸ್ಕರಿಗೆ ಸುರಕ್ಷಿತವಾಗಿದೆ,ಮಾತ್ರೆಯನ್ನು ತಗೆದುಕೊಂಡ ನಂತರ ಕೆಲವೊಮ್ಮೆ ಮಕ್ಕಳಿಗೆ ವಾಕರಿಕೆ,ಸೌಮ್ಯ ಹೊಟ್ಟೆನೋವು ಅತಿಸಾರ,ಹಾಗೂ ಬಳಲಿಕೆ ಅನುಭವಿಸುವುದು ಅವರು ಜಂತುಹುಳುಗಳನ್ನು ಹೊಂದಿದ್ದಲ್ಲಿ ಇವುಗಳನ್ನು ನೀರಿಕ್ಷಿಸಬಹುದು ಆದ್ದರಿಂದ ಗಾಬರಿಪಡುವ ಅವಶ್ಯತೆ ಇಲ್ಲಾ ಎಂದಿ ತಿಳಿಸಲಾಯಿತು. ಶಹಾಬಾದ ನಗರದ ಒಟ್ಟು ೧೮೫೭೨ ಮಕ್ಕಳು ಮಾತ್ರೆಗಳು ಸೇವಿಸುವ ಗುರಿ ಹೊಂದಿದೆ .
ಈ ಕಾರ್ಯಕ್ರದಲ್ಲಿ ಡಾ ದಶರಥ ಜಿಂಗಾಡೆ, ವೈದ್ಯಾಧಿಕಾರಿಗಳು,ನ.ಪ್ರಾ,ಆ,ಕೇದ್ರ ಶಹಾಬಾದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀ ಯೇಮನಾಥ ರಾಠೋಡ ಮಹಿಳೆ ಕಿರಿಯ ಆರೋಗ್ಯ ಸಹಾಯಕರಾದ, ಜಯಶ್ರಿ, ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಮತ್ತು ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಿರಿಯ ಆರೋಗ್ಯ ಸಹಾಯಕರಾz ಶ್ರೀ ಯೂಸಫ ಸಾಬ ನಾಕೇದಾರ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.