ಕಲಬುರಗಿ: ಟಿವಿ ನೊಡಬೇಕೆಂದರೆ ಕೇಬಲ್,ಡಿಟಿ ಎಚ್ ಗೆ ದುಡ್ಡು ಕೊಡಬೇಕು. ಪೇಪರ್ ನೊಡಬೇಕೇಂದರೆ ಅಲ್ಲಿಯು ಹಣ ನೀಡಬೇಕು. ಜೀವನ ದಲ್ಲಿ ಒಮ್ಮೆ ರೇಡಿಯೋ ಖರೀದಿ ಮಾಡದರೆ ಸಾಕು ಇಡೀ ಜೀವನ ದೂದ್ದಕೂ ಯಾವುದೇ ಶುಲ್ಕ ವಿಲ್ಲದೆ ದೇಶಾದ್ಯಂತ ನಡೆಯುವ ಸುದ್ದಿ ಸಮಾಚಾರ ತಿಳಿಯವ ಸಾಧನವೆ ರೇಡಿಯೋ ಕಡಿಮೆ ಖರ್ಚು ಹೆಚ್ಚು ಲಾಭ ಕೊಡುವ ಸಾಧನ ಎಂದು ಶಿವರಾಜ ಅಂಡಗಿ ತಿಳಿಸಿದರು.
“ವಿಶ್ವ ರೇಡಿಯೋ ದಿನ” ಆಚರಣೆ ಅಂಗವಾಗಿ ಇಂದು ನಡೆದ ಸರಳ ಮದುಮೆ ಸಮಾರಂಭದಲ್ಲಿ ರೇಡಿಯೋ ಒಂದನ್ನೂ ಕಾಣಿಕೆ ನೀಡಿ ಮಹತ್ವ ಕುರಿತು ಮಾತನಾಡಿ, ಪ್ರಧಾನಿ ಮೋದಿ ಕೂಡಾ ಜನರಿಗೆ ತಮ್ಮ “ಮನ್ ಕಿ ಬಾತ್” ತಲುಪಿಸಲು ರೇಡಿಯೋ ನ್ನೆ ಆರಿಸಿಕೊಂಡಿದ್ದು ಎಂದು ತಿಳಿಸಿದರು.
ನವ ದಂಪತಿಗಳಾದ ಚಿ.ನಾಗರಾಜ ನಿರಂಜಿ ಚಿ.ಅಂಬಿಕಾ ಹಾಗೂ ವೀರಶೆಟ್ಟಿ ಪೋಲಿಸ್ ಪಾಟೀಲ ಸೇಡಂ, ಜಗದೀಶ್ ತಿಪ್ಪಣನವರ್ ಶಾಹಾಬಾದ,ಗೌತಮ ನಿರಂಜಿ, ರೇಖಾ ಅಂಡಗಿ, ಪದ್ಮಾ, ಶೊಭಾ , ಅಂಬಿಕಾ, ಚನ್ನಮ್ಮ, ಶಾಂತಕುಮಾರ, ಸಿದೇಶ್ವರ,ಆದಿತ್ಯ, ಆರ್ಯನ್, ಇತರರಿದ್ದರು.
Congratulations🎉🎊👏👍….. Good initiative on radio 📻 day…..