ಬಂಜಾರಾ ಸಮಾಜದ ಚೇತನ್ ಶಕ್ತಿ ಸಂತ್ ಸೇವಾಲಾಲ: ಡಾ. ಚವ್ಹಾಣ

0
89

ಕಲಬುರಗಿ: 15 ಫೆಬ್ರುವರಿ 1789 ರಲ್ಲಿ ಆಂಧ್ರ ಪ್ರದೇಶದ ಗುತ್ತಿ ತಾಂಡಾದಲ್ಲಿ ಜನಸಿದ ಸಂತ ಸೇವಾಲಾಲರು ಬಂಜಾರಾ ಸಮಾಜದ ಏಳಿಗೆಗಾಗಿ ಸತತ ಪ್ರಯತ್ನ ಮಾಡಿ ಸಮಾಜದ ಜನರ ಜೀವನವನ್ನೇ ಬದಲಿಸಿದ ಚೇತನ ಶಕ್ತಿ ಎಂದು ಎಂ. ಎಸ್. ಇರಾಣಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪ್ರೇಮಚಂದ ಚವ್ಹಾಣರವರು ನುಡಿದರು.

ಸಂತ್ ಸೇವಾಲಾಲರ 281ನೇ ಜಯಂತಿಯನ್ನು ಕಾಲೇಜಿನಲ್ಲಿ ಆಚರಿಸಿದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಮತ್ತು ಸಿಬಂಧಿ ವರ್ಗದವರನ್ನು ಉದ್ದೇಶಿಶಿ ಮಾತನಾಡಿದರು.ಈ ಸಂದರ್ಭದಲ್ಲಿ ಸಂತ್ ಸೇವಾಲಾಲರ ಜೀವನದ ಕುರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್.ಎ. ಪಾಟೀಲರವರು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ. ಶಿವಲೀಲಾ ಧೋತ್ರೆಯವರು ಮಾಡಿದರು. ಸ್ವಾಗತವನ್ನು ಡಾ. ಲಿಂಗಬಸವ ಪಾಟೀಲ್ ಮಾಡಿದರು. ವಂದನಾರ್ಪಣೆಯನು ಡಾ. ಈಶ್ವರಯ್ಯ ಮಠರವರು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here