ಕೊಪ್ಪಳ : 2018-19 ನೇ ಸಾಲಿನ ವಿಶೇಷ ಬೆಸ್ಟ್ ಬ್ಲಡ್ ಬ್ಯಾಂಕ್ ಪ್ರಶಸ್ತಿಯನ್ನು ಕೊಪ್ಪಳದ ರೆಡ್ ಕ್ರಾಸ್ ಸೊಸೈಟಿ ಮೂಡಿಗೆರಿಸಿಕೊಂಡಿದೆ.
ರಾಜ್ಯದ ಅತ್ಯಂತ ಹಿಂದುಳಿದ 12 ಜಿಲ್ಲೆಗಳ ಪೈಕಿ ಮತ್ತು ಕಲ್ಯಾಣ ಕರ್ನಾಟಕದ ಆರು ಜಿಲ್ಲೆ ಗಳಲ್ಲೊಂದಾದ ಕೊಪ್ಪಳ ಜಿಲ್ಲೆ 2018-19 ನೇ ಸಾಲಿನ ಬೆಸ್ಟ್ ಬ್ಲಡ್ ಬ್ಯಾಂಕ್ ಸಿ ಕೆಟಗೆರಿಯಲ್ಲಿ ಆಯ್ಕೆಯಾಗಿರುವ ಪ್ರಶಸ್ತಿಯನ್ನು ರಾಜಭವನದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಕೊಪ್ಪಳ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮತ್ತು ರೆಡ್ ಕ್ರಾಸ್ ಸೊಸೈಟಿಯ ಸದಸ್ಯರ ಸಮ್ಮುಖದಲ್ಲಿ ಪಡೆದುಕೊಂಡರು.
ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೊಸೈಟಿ ನೂರಾರು ರಕ್ತ ದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ರಕ್ತ ಸಂಗ್ರಹಿಸಿ ಸಾವಿರಾರು ಜನ ರೋಗಿಗಳ ಪ್ರಾಣ ಉಳಿಸುವಲ್ಲಿ ತನ್ನದೇ ಆದ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ರೆಡ್ ಕ್ರಾಸ್ ನ ಸ್ಟೇಟ್ ಚೇರ್ಮನ್ ನಾಗಣ್ಣ , ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಡಾ.ಸಿ.ಎಸ್.ಕರಮುಡಿ, ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ, ನಿರ್ದೇಶಕರಾದ ರಾಜೇಶ ಯಾವಗಲ್ಲ್ ಹಾಗೂ ನ್ಯಾಯವಾದಿ ಗೌರಮ್ಮ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವರದಿ:ಮರಿಗೌಡ ಬಾದರದಿನ್ನಿ