ಕಲಬುರಗಿ: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಜಾರಿ, ವೇತನ ಪರಿಷ್ಕರಣೆ ವಿಶೇಷ ಭತ್ಯೆ ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಸುವಂತೆ ಇಂದು ನಗರದ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ ಓಮ್ ನಗರ ಬ್ಯಾಂಕ್ ಎದುರು ಯುನೈಟೆಡ್ ಫೋರಂ ಬ್ಯಾಂಕ್ ಯುನಿಯನ್ ವತಿಯಿಂದ ಬ್ಯಾಂಕ್ ಸಿಬ್ಬಂಧಿಗಳು ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಕೆಲಸದ ಸಮಯದ ನಂತರ ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಬ್ಯಾಂಕ್ ನೌಕರರ ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ ಮಾತನಾಡಿ , ವಾರದಲ್ಲಿ 5 ದಿನ ಬ್ಯಾಂಕಿಂಗ್ ಸೇವೆ, ಪಿಂಚಣಿ ನವೀಕರಣ, ಕುಟುಂಬ ಪಿಂಚಣಿಯಲ್ಲಿ ಸುಧಾರಣೆ, ಲಾಭದ ಆಧಾರದ ಮೇಲೆ ಸಿಬ್ಬಂದಿ ಕಲ್ಯಾಣ ನಿಧಿ ಹಂಚಿಕೆಯಾಗಬೇಕೆಂದು ಆಗ್ರಹಿಸಿದರು.
ಸೀಲಿಂಗ್ ಇಲ್ಲದೆ ರೆಟರಲ್ ಪ್ರಯೋಜನಗಳ ಮೇಲೆ ಆದಾಯ ತೆರಿಗೆಗೆ ವಿನಾಯಿತಿ, ಗುತ್ತಿಗೆ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಂದ್ರಮೋಹನ, ಶ್ರೀಧರ, ರವಿಶಂಕರ್, ಅನಂತಪದ್ಮನಾಭ, ಆದೀಪ್, ಗಂಗಾರಾಮ, ಸಂತೋಷ ಪರಂ, ವೆಂಕಟೇಶ, ವಿನಯ, ಪ್ರವಿಣ ಸಾಗರ, ಶಿವಕುಮಾರ, ಎಳವಾರ ಚಂದ್ರಾಮ್, ಮಹ್ಮದ್ ಖದೀರ್, ನಾರಯಣ ರುಗಿ, ರಾಧೀಕಾ ರಾಠೋಡ್, ಶಿಲ್ಪಾ ಜಾನೆ ಸೇರಿದಂತೆ ಹಲವು ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.