ವಿಜ್ಞಾನ ಮೇಳಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡುತ್ತದೆ: ಬಿಇಒ ನಾಗರತ್ನ

0
109

ಸುರಪುರ: ಆಯಾ ದಿನದ ತರಗತಿಯಲ್ಲಿ ಬೋಧಿಸಿದ ವಿಷಯಗಳನ್ನು ಆ ದಿನದಲ್ಲಿದೆಯೇ ಓದಬೇಕು ಹಾಗೂ ಮಕ್ಕಳು ಓದಿನ ಜೊತೆಗೆ ಬರವಣಿಗೆ ಹಾಗು ಗುರುಗಳ ಮಾರ್ಗದರ್ಶನವನ್ನು ತಪ್ಪದೆ ಪಾಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೆಕಾರ್ ಮಾತನಾಡಿದರು.

ನಗರದ ಹಸನಾಪುರ ಕ್ಯಾಂಪ್ ಬಳಿಯ ಶರಣಬಸವ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ವಿಜ್ಞಾನ ಮೇಳಗಳಿಂದ ಮಕ್ಕಳಲ್ಲಿ ವೈಜ್ಞಾನಿಕತೆ ಚಿಂತನೆ ಮೂಡುತ್ತದೆ ಜೊತೆಗೆ ಮಕ್ಕಳಲ್ಲಿ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ಉತ್ಸಾಹ ಹೆಚ್ಚಲಿದೆ ಎಂದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಮಾತನಾಡಿ, ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಅಧ:ಪತನದ ಹಾದಿ ಹಿಡಿಯುತ್ತಿವೆ, ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅದಕ್ಕಾಗಿ ಗುರುಗಳು ಮಕ್ಕಳ ಮನದಾಳದಲ್ಲಿ ನೈತಿಕ ಮೌಲ್ಯಗಳ ಬೀಜವನ್ನು ಬಿತ್ತಬೇಕೆಂದು ಹೇಳಿದರು, ಸದಾ ಮಕ್ಕಳು ಗುರುಗಳ ಅನುಕರುಣೆಮಾಡವುದರಿಂದ ಗುರುಗಳು ಮಕ್ಕಳ ಎದುರಿಗೆ ಸದಾ ಜಾಗುರುಕತೆಯಿಂದ ಮಾದರಿಯ ಗುರುಗಳಾಬೇಕೆಂದು ಕಿವಿಮಾತನ್ನು ಹೇಳಿದರು.ನಂತರ ಶರಣಬಸವ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಳರಾದ ಡಾ: ಅನಿಲಕುಮಾರ ಪಾಟೀಲ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜಂಟಿ ಕಾರ್ಯದರ್ಶಿ, ದೊಡ್ಡಪ್ಪ ಎಸ್.ನಿಷ್ಠಿ ಜಹಾಗೀರದಾರ ಮಾತನಾಡಿ,ನಮ್ಮ ಸಂಸ್ಥೆಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೆ ವಿಜ್ಞಾನದೆಡೆಗೆ ಆಸಕ್ತಿ ಬೆಳೆಸಿಕೊಂಡು ಮುಂದೆ ಹೊಸ ಹೊಸ ಸಂಶೋದನೆಗಳ ಮೂಲಕ ಏನನ್ನಾದರು ಸಾಧಸಬೇಕೆಂಬ ನಿಲುವನ್ನು ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ.ಈ ವಿಜ್ಞಾನ ಪ್ರದರ್ಶನದಲ್ಲಿ ನೂರಾರು ಮಕ್ಕಳು ತಮ್ಮ ವೈಜ್ಞಾನಿಕ ಅವಿಷ್ಕಾರಗಳನ್ನು ಮಾಡಿ ಪ್ರದರ್ಶಿಸುವ ಮೂಲಕ ಸಂಸ್ಥೆಯ ಕೀರ್ತಿ ಬೆಳೆಸುತ್ತಿದ್ಧಾರೆ ಎಂದು ಮಕ್ಕಲ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರ ಸಂಪನ್ಮೂಲಧಿಕಾರಿ ಖಾಧರ ಪಟೇಲ್, ಯಂಕಣ್ಣ ಸಿ.ಆರ್.ಪಿ ದೇವಾಪುರು, ನಾನಾಗೌಡ ದೇಸಾಯಿ ಪ್ರಾಂಶುಪಾಲರು ಬಸವರಾಜಪ್ಪ ಅಪ್ಪಾ ಪದವಿ ವಾಣಿಜ್ಯ ಮಹಾವಿದ್ಯಾಲಯ ಹಸನಾಪುರ, ಹಾಗೂ ಕು.ರತ್ನಾ ಮುಖ್ಯೋಪಾದ್ಯಾಯರು ಶರಣಬಸವ ಪಬ್ಲಿಕ್ ಸ್ಕೂಲ್ ಹಸನಾಪುರ ವೇದಿಕೆ ಮೇಲಿದ್ದರು.

ಶರಣಬಸವ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳು ವಸ್ತುಪ್ರದರ್ಶನವನ್ನು ಮಾಡಿದರು ಈ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲಾ ಗಣ್ಯರು,ವಿವಿಧ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಹಾಗು ಪೋಷಕರು ವಿಜ್ಞಾನ ಹಾಗೂ ಎಲ್ಲ ಉಳಿದ ವಿಷಯಗಳ ವಸ್ತು ಪ್ರದರ್ಶನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here