ಸುರಪುರ: ೦೬ ರಿಂದ ೧೮ ವರ್ಷದೊಳಗೆ ಬರುವ ಮಕ್ಕಳನ್ನು ಸರಕು ಸಾಗಾಣೆ ವಾಹನಗಳಲ್ಲಿ ಹೊಲಗದ್ದೆ ಕೂಲಿಕೃಷಿ ಆಧಾರಿತ ಅಂಗಡಿ ಹೋಟೆಲ್ ರೆಸ್ಟೋರೆಂಟ್ ಗ್ಯಾರೆಜ್ ಬಾರ್‌ಅಂಗಡಿ ಹಾಗೂ ಇನ್ನಿತರ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಶಾಲೆಬಿಟ್ಟ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘವೀರಸಿಂಗ್ ಠಾಕೂರ್ ಮಾತನಾಡಿದರು.
ತಾಲೂಕಿನ ದೇವಿಕೇರಾ ರತ್ತಾಳ ಹಾಗು ನಗರದ ರಂಗಂಪೇಟೆ ತಿಮ್ಮಾಪುರ ಮತ್ತಿತರೆ ಕಡೆತಗಳಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಹಾಗು ಗುಟ್ಕಾ ಮತ್ತು ಪ್ಲಾಸ್ಟಿಕ್ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾತನಾಡಿ, ಬಾಲಕಾರ್ಮಿಕ ಪದ್ದತಿ ೧೯೮೬ರ ಕಾಯ್ದೆಯಡಿಯಲ್ಲಿ ೬ ರಿಂದ ೧೮ ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದೆಮೆಗಳಲ್ಲಿ ಮತ್ತು ಇತರೆ ಉದ್ಧೆಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯವನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ನಗರಾದ್ಯಂತ ಅನಿರೀಕ್ಷಿತ ತಪಾಸಣೆ ಕೈಗೊಂಡು ಪತ್ತೆಯಾದ ಮಕ್ಕಳ ದಾಖಲೆಗಳನ್ನು ಪರೀಕ್ಷಿಸಲಾಗುತ್ತಿದೆ ಹಾಗೂ ಅಂತಹ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಮಾಲೀಕರುಗಳಿಗೆ ಸೂಚಿಸಲಾಗುವುದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಪ್ರತಿ ಮಗುವಿಗೆ ರೂ.೫೦೦೦೦/- ಗಳನ್ನು ದಂಡ ವಿಧಿಸಲಾಗುತ್ತದೆ. ಜೊತೆಗೆ ಜೈಲು ವಾಸ ಕೂಡ ವಿಧಿಸಬಹುದಾಗಿದೆಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ರತ್ತಾಳ, ದೇವಿಕೇರಿ ಗ್ರಾಮಗಳ ಹಾಗು ನಗರದ ರಂಗಂಪೇಠ-ತಿಮ್ಮಾಪೂರದಲ್ಲಿನ ಅಂಗಡಿಗಳ ಮೇಲೆ ದಾಳಿಮಾಡಿ ಪ್ಲಾಸ್ಟಿಕ್ ಮತ್ತು ಗುಟ್ಖಾ ಪಾಕೇಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ತಂಬಾಕು ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ, ಟಿ.ಎಚ್.ಓ ಕಛೆರಿಯ ಸಿಬ್ಬಂದಿ ಹಾಗೂ ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಅಮೃತ ರಾವ್ ಕೋತ್ವಾಲ್ ಇದ್ದರು.