ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಹೊಸ ನೀತಿಯನ್ನು ಪರಿಚಯಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಸಾಂಪ್ರದಾಯಿಕ ಬಿ.ಟೆಕ್ ಕೋರ್ಸ ಜೊತೆಗೆ ವಿಶೇಷ ಪದವಿ ಶಿಕ್ಷಣ ನೀಡಲು ನಿರ್ಧರಿಸಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ದೇಶಮುಖ ಮತ್ತು ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಬುಧವಾರ ತಿಳಿಸಿದರು.
ಬಿ.ಟೆಕ್ ಕೋರ್ಸ ನಾಲ್ಕು ವರ್ಷದ್ದಾಗಿದೆ. ೧೬೦ಕ್ಕೆ ೨೦೦ ಕ್ರೆಡಿಟ್ ಗಳು ಮತ್ತು ಸಾಂಪ್ರದಾಯಿಕ ಕೋರ್ಸಗಳ ಹೊರಗಿನ ಹೆಚ್ಚುವರಿ ೨೦ ಕ್ರೆಡಿಟ್‌ಗಳೊಂದಿಗೆ ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ವಿಶೇಷತೆಯನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲು ಬಿ.ಟೆಕ್ ಕೋರ್ಸಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಕ್ಕೆ ಸಲಹೆ ನೀಡಿವೆ.
ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ೨೦ ಕ್ರೇಡಿಟ್‌ಗಳೊಂದಿಗೆ ವಿಶೇಷಕೋರ್ಸ ನೀಡಲಾಗುವುದು. ಹಿಂದಿನ ಸೆಮಿಸ್ಟರ್‌ಗಳಲ್ಲಿ ವೇಗದ ಕಲಿಕೆ ಹಾಗೂ ಸಾಧನೆ ಗುರುತಿಸಿ ವಿಶೇಷ ಪದವಿಗಳಿಗೆ ವಿದ್ಯಾರ್ಥಿಗಳನ್ನು ವಿಶ್ವ ವಿದ್ಯಾಲಯ ಆಯ್ಕೆ ಮಾಡಲಾಗುತ್ತದೆ. ಬಿ.ಟೆಕ್ ಕೋರ್ಸ ಕಲಿಕೆ ಸಮಯದಲ್ಲಿ ವಿಶೇಷ ಕೋರ್ಸ ಪ್ರವೇಶಕ್ಕೆ ಹಾಗೂ ಕೌಶಲ್ಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ತಿಳಿಸಿದರು.
ಸಾಂಪ್ರದಾಯಿಕ ಬಿ.ಟೆಕ್ ಕೋರ್ಸ ಜೊತೆಗೆ ವಿಶೇಷ ಪದವಿ ಕೋರ್ಸಗಳ ಪರಿಚಯದಿಂದ ವಿದ್ಯಾರ್ಥಿಗಳಿಗೆ ಹೊಸ ಪ್ರದೇಶದಲ್ಲಿ ಹೆಚ್ಚುವರಿ ಜ್ಞಾನ ಪಡೆಯಲು ಹಾಗೂ ಉದ್ಯೋಗ ಪಡೆಯಲು ಸಹಕಾರಿಯಾಗುತ್ತವೆ. ಅವರ ಮುಂದಿನ ಶಿಕ್ಷಣಕ್ಕೆ ಸಹಾಯವಾಗುತ್ತದೆ. ೧:೧೫ ಶಿಕ್ಷಕ ವಿದ್ಯಾರ್ಥಿ ಅನುಪಾತವನ್ನು ಕಾಯ್ದುಕೊಳ್ಳಲು ಎಐಸಿಟಿಇ ಸಂಸ್ಥೆಗಳಿಗೆ ಸಲಹೆ ನೀಡಿದೆ ಮತ್ತು ಇದು ಕಡ್ಡಾಯವಲ್ಲದಿದ್ದರೂ, ಎಐಸಿಟಿಇ ಶಿಫಾರಸ್ಸು ಸಲಹೆಯಂತೆ ಎಲ್ಲಾ ತರಗತಿಗಳು ಎರಡು ವರ್ಷಗಳಲ್ಲಿ ೧:೧೫ ಅನುಪಾತವನ್ನು ಹೊಂದಿರುತ್ತವೆ ಎಂದರು. ವಿವಿ.ಸಮಕುಲಪತಿ ಡಾ.ವಿ.ಡಿ.ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್. ಡಾ. ಲಕ್ಷ್ಮಿ ಮಾಕಾ, ಹಾಗೂ ಡಾ. ಬಸವರಾಜ ಮಠಪತಿ ಉಪಸ್ಥಿತರಿದ್ದರು.