ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸರಕಾರ ಬೀಳುವ ಭ್ರಮೆ ಬಿಜೆಪಿ ನಾಯಕರಿಗಿದೆ: ಪರಮೇಶ್ವರ

0
127

ಕಲಬುರಗಿ: ಶಾಸಕನೊಬ್ಬ ಜನಮನ್ನಣೆ ಪ್ರೀತಿ ಗಳಿಸುತ್ತಾರೆ. ಪಕ್ಷ ಆತನ ಬೆನ್ನಿಗೆ ನಿಲ್ಲುತ್ತದೆ. ಆದರೆ ಆ ವ್ಯಕ್ತಿ ಹಣ ತಗೊಂಡು ನಮ ಕೈಗೆ ಸಿಗದೆ ದೂರದ ಬಾಂಬೆನಲ್ಲಿ‌ ಹೋಗಿ ಬಿಜೆಪಿಯವರಿಗೆ ಪಕ್ಷ ಸೇರುವುದಾಗಿ ಹೇಳಿ ಬಂದು ಇಲ್ಲಿ ರಾಜೀನಾಮೆ ಕೊಡುತ್ತಾರೆ ಎಂದರೆ ಮತದಾರರ ನಂಬಿಕೆ ಮಣ್ಣು ಪಾಲು ಮಾಡಿರುವುದು ಸರಿಯಲ್ಲ ಎಂದು ಡಿಸಿಎಂ ಡಾ ಜಿ ಪರಮೇಶ್ವರ ವಿಷಾದ ವ್ಯಕ್ತಪಡಿಸಿದರು.

ಅವರು ಚಿಂಚೋಳಿಯ ಮಿರಿಯಾಣ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ  ಮಾತನಾಡಿ, ಕರ್ನಾಟಕ ದಲ್ಲಿ ಶಾಸಕರು ಮಾರಾಟವಾದರೆ ಏನು ಗತಿ ಕಾಣುತ್ತಾರೆ ಎನ್ನುವ ಸ್ಪಷ್ಟ ಸಂದೇಶವನ್ನು‌ಜಾಧವ್ ನನ್ನ ಸೋಲಿಸುವ ಮೂಲಕ  ನೀವು ಇಡೀ ರಾಜ್ಯಕ್ಕೆ ಕಳಿಸಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಕ್ಷೇತ್ರ ದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯಾಗಬೇಕು. ಇಲ್ಲಿ ಒಬ್ಬ ಕ್ರಿಯಾಶೀಲ ಶಾಸಕರ ಅಗತ್ಯವಿದೆ. ಸುಭಾಷ್ ರಾಠೊಡ್ ಅಂತಹ ವ್ಯಕ್ತಿ. ಹಾಗಾಗಿ ನೀವು ಅವರಿಗೆ ಮತ ನೀಡಿ ಎಂದು ಕರೆ ನೀಡಿ, ಬಸವೇಶ್ವರ ಅವರ ತತ್ವದ ಅಡಿಯಲ್ಲಿ ಕಾಂಗ್ರೇಸ ನಂಬಿಕೆಯಿಟ್ಟಿದೆ. ಆದರೆ, ಬಿಜೆಪಿಗೆ ಮುಸಲ್ಮಾನರು, ಕ್ರಿಶ್ಚಿಯನ್‌ ರು ಬೇಡ ಬರೀ ಹಿಂದುತ್ವ ಎಂದು ಹೇಳುತ್ತಾರೆ ಇದು ಸಂವಿಧಾನ ವಿರೋಧಿ ಧೋರಣಯಲ್ಲವೇ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ‌ ಸಿಎಂ ಆಗಿದ್ದಾಗ ೨೭ ಲಕ್ಷ ರೈತರ ತಲಾ ೫೦ ಸಾವಿರ ಸಾಲ ಮನ್ನಾ ಮಾಡಿದೆ. ಮೋದಿಯವರೇ, ಯಡಿಯೂರಪ್ಪನವರೇ ನೀವೇನೂ ಮಾಡಿದಿರಿ. ಕಾಂಗ್ರೇಸ್ ನಾಯಕರನ್ನು ಬಾಯಿಗೆ ಬಂದಂತೆ ಬೈಯುವುದೆ ಕೆಲಸವಾಗಿದೆ ನಿಮಗೆ. ಐದು ವರ್ಷಗಳ ಅಮೂಲ್ಯ‌ಸಮಯದಲ್ಲಿ ಬರೀ ಸುಳ್ಳು ಹೇಳಿಕೊಂಡು ಕಾಲಹರಣ ಮಾಡಿ‌ ಈಗ ಸೈನಿಕರ ಹೆಸರೇಳಿ ಮತ ಕೇಳುವಂತ ನೀಚ ರಾಜಕಾರಣ ಮಾಡುತ್ತಿದ್ದೀರಿ ಎಂದು ಟೀಕಿಸಿದರು.

ಚಿಂಚೋಳಿ ಕುಂದುಗೋಳ ಉಪಚುನಾವಣೆಯಲ್ಲಿ ಕಾಂಗ್ರೇಸ್ ಸೋತರೆ ಸರಕಾರ ಬೀಳುತ್ತೆ ಎಂದು ಬಿಜೆಪಿಯವರು ಭ್ರಮಿಸಿದ್ದಾರೆ ಇದು ಕೇವಲ ಭ್ರಮೆಯಾಗಲಿದೆ. ಐದು ವರ್ಷ ಕಾಲ ಮೈತ್ರಿ ಸರಕಾರ ಆಡಳಿತ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here