ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ: ಡಾ.ನಾಗಾಬಾಯಿ ಬುಳ್ಳಾ

0
60

ಕಲಬುರಗಿ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶಿಕ್ಷಣದಿಂದಲೇ ಮಾತ್ರ ಸಾಧ್ಯವಾಗಿದೆ ಎಂದು ಕೆಪಿಎಸ್‌ಸಿ ಮಾಜಿ ಸದಸ್ಯರು ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ನಾಗಾಬಾಯಿ ಬುಳ್ಳಾ ಅವರು ಹೇಳಿದರು.

ಪೂಜ್ಯ ಗೋದುತಾಯಿ ಅವ್ವಾಜೀಯವರ ೪೯ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಏಳು ದಿನಗಳ ಕಾರ್ಯಕ್ರಮದಲ್ಲಿ ಆರನೇ ದಿನ ರವಿವಾರ ಮಹಾವಿದ್ಯಾಲಯದಲ್ಲಿ ಸಾಹಿತಿಕ, ಸಾಂಸ್ಕೃತಿಕ ಅಡಿಯಲ್ಲಿ ಭಾಷಣ, ಗಾಯನ ಮತ್ತು ಚಿತ್ರಕಲೆ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಮಹಿಳೆ ಈಗ ಅಬಲೆ ಅಲ್ಲ, ಅವಳು ಸಬಲಳಾಗಿದ್ದಾಳೆ. ಪುರುಷರ ಸರಿಸಮಾನವಾಗಿ ಬೆಳೆದಿದ್ದಾಳೆ. ಬಾಹ್ಯಕಾಶ, ರಾಜಕಾರಣ, ಕ್ರೀಡೆ, ವಿಜ್ಞಾನ, ವೈದ್ಯ, ಇಂಜಿನೀಯರ್ ಪ್ರತಿಯೊಂದು ಕ್ಷೇತ್ರಗಳಲ್ಲೂ ಛಾಪೂ ಮೂಡಿಸಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಪ್ರತಿವರ್ಷ ಶೈಕ್ಷಣಿಕ ಫಲಿತಾಂಶದಲ್ಲಿ ಮಹಿಳೆಯರೇ ಮೈಲುಗೈ ಇರುತ್ತಿರುವುದು ಗೊತ್ತಿರುವ ವಿಷಯ. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಓದಿದ ಹೆಣ್ಣಮಕ್ಕಳಿಗೆ ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ ಸಹಜವಾಗಿ ಬರುತ್ತದೆ. ಅವರು ಹೊರ ಪ್ರಪಂಚದಲ್ಲಿ ಯಾವುದೇ ತೊಂದರೆಯಿಲ್ಲದೆ ಜೀವನ ಸಾಗಿಸುತ್ತಾರೆ ಎಂದು ಹೇಳಿದರು.

Contact Your\'s Advertisement; 9902492681

ಗೋದುತಾಯಿ ಅವ್ವಾಜೀಯವರು ಈ ಭಾಗದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಅವರ ಸರಳ ಜೀವನ, ಕಾಳಜಿಯ ಮನಸ್ಸು ಎಂತಹವರನ್ನು ಸೆಳೆಯುವಂತದ್ದು. ಅಂತಹವರ ಪುಣ್ಯಸ್ಮರಣೋತ್ಸವ ಏಳು ದಿನಗಳವರೆಗೆ ಆಚರಿಸುತ್ತಿರುವುದು ಶ್ಲಾಘನೀಯವಾದದ್ದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಗೋದುತಾಯಿ ಅವ್ವಾಜೀಯವರು ಸ್ತ್ರೀ ಕುಲದ ಸಂಕೇತವಾಗಿದ್ದಾರೆ. ಅವರು ಕಲ್ಯಾಣ ಕರ್ನಾಟಕ ಭಾಗದ ಆಧುನಿಕ ಮೊದಲ ಮಹಿಳಾ ಕವಯತ್ರಿಯಾಗಿದ್ದಾರೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಶಾಂತಲಾ ನಿಷ್ಠಿ, ಮಹಾವಿದ್ಯಾಲದಯ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಪ್ರೊ.ರೇವಯ್ಯ ವಸ್ತ್ರದಮಠ ವೇದಿಕೆಯಲ್ಲಿದ್ದರು. ಡಾ.ಪುಟ್ಟಮಣಿ ದೇವಿದಾಸ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು. ಡಾ.ಸೀಮಾ ಪಾಟೀಲ ನಿರೂಪಿಸಿದರು. ಪ್ರೊ. ರೇವಯ್ಯ ವಸ್ತ್ರದಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ.ಸಿದ್ದಮ್ಮ ಗುಡೇದ, ಡಾ.ಇಂದಿರಾ ಶೇಟಕಾರ, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಶ್ರೀಮತಿ ಜಾನಕಿ ಹೊಸೂರ, ಡಾ.ಛಾಯಾ ಭರತನೂರ, ಡಾ.ಎಮ್.ಎಸ್.ಪಾಟೀಲ, ಕೃಪಾಸಾಗರ ಗೊಬ್ಬುರ ಮತ್ತು ಬೇರೆ ಬೇರೆ ಮಹಾವಿದ್ಯಾಲಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾಷಣ ಸ್ಫರ್ಧೆಯಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಕು.ಪೂಜಾ ಎ.ಎಮ್. ಪ್ರಥಮ, ಕು. ಬಸವರಾಜ ಎಸ್.ಎಮ್. ದ್ವಿತೀಯ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಕು. ಶಿಲ್ಪಾ ಜಿ.ಎಸ್. ತೃತೀಯ ಸ್ಥಾನ ಪಡೆದರು. ಚಿತ್ರಕಲೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದ ಉಜ್ವಲಾ ಸಿ.ಪಾಟೀಲ ಪ್ರಥಮ, ಗೋದುತಾಯಿ ಮಹಾವಿದ್ಯಾಲಯದ ಕು.ಪಲ್ಲವಿ ಎಸ್. ರಾಠೋಡ ದ್ವಿತೀಯ, ಕು. ಪ್ರೇಮಾ ಎಸ್.ಕೆ. ತೃತೀಯ ಸ್ಥಾನ ಪಡೆದರು. ಗಾಯನ ಸ್ಪರ್ಧೆಯಲ್ಲಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕು.ಮಾಳಪ್ಪ ಪ್ರಥಮ, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಕು.ಉಷಾರಾಣಿ ದ್ವಿತೀಯ, ಕು.ಭಾಗ್ಯಶ್ರೀ ತೃತೀಯ ಸ್ಥಾನ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here