ಕಲಬುರಗಿ: ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ವೈದ್ಯ ಡಾ. ಎಸ್ .ಎಚ್ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಮುಖಂಡ ಲಿಂಗರಾಜಪ್ಪ ಅಪ್ಪ ಅವರು ಮಾತನಾಡು ತ್ತಾ. ಮಕ್ಕಳಲ್ಲಿ ಚಿಕ್ಕಂದಿನಲ್ಲೇ ಸಂಸ್ಕಾರಗಳನ್ನು ಕಲಿಸುವುದರಿಂದ ಅವರು ಸಮಾಜದ ಉತ್ತಮ ಆಸ್ತಿಯಾಗಿ ರೂಪುಗೊಳ್ಳುವುದು ಸುಲಭವಾಗುತ್ತದೆ. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣ ಮತ್ತು ಉತ್ತಮ ಸಂಸ್ಕಾರಗಳಿಂದ ವಂಚಿತರಾಗಬಾರದು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಅವರು ಆಶೀರ್ವಚನ ನೀಡಿದರು.
ಅಫಜಲಪೂರ ಶಾಸಕ ಹಾಗೂ ಮದರ್ ತೆರೆಸ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಎಂ.ವೈ. ಪಾಟೀಲ್ ಮಾತನಾಡಿ. ಮಕ್ಕಳು ಕೇವಲ ಶಾಲೆಯಲ್ಲಿಯೇ ಎಲ್ಲವನ್ನೂ ಕಲಿಯುತ್ತಾರೆ ಎನ್ನುವಂತಿಲ್ಲ ಮನೆಯ ವಾತಾವರಣವು ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಖ್ಯಾತ ವೈದ್ಯರು ಎಸ್. ಎಚ್. ಕಟ್ಟಿ ಮಾತನಾಡುತ್ತಾ. ಥಾಮಸ್ ಅಲ್ವಾ ಎಡಿಸನ್ ಶಾಲೆಗಿಂತಲೂ ಹೆಚ್ಚಾಗಿ ಮನೆಯಲ್ಲಿಯೇ ಹೆಚ್ಚು ಶಿಕ್ಷಣ ಪಡೆದ ಎಂಬುದನ್ನು ಇಂದಿನ ಪೋಷಕರು ನೆನಪಿಡಬೇಕು ಅದರಲ್ಲೂ ಶಾಲೆಯಲ್ಲಿ ಮಕ್ಕಳು ಕಲಿಯದೇ ಇರುವ ಎಷ್ಟು ಸಕರಾತ್ಮಕ ಅಂಶಗಳನ್ನು ಮನೆಯಲ್ಲಿ ತಾಯಂದಿರು ಕಲಿಸುವುದರಿಂದ ಮಕ್ಕಳ ವ್ಯಕ್ತಿತ್ವ ಹೆಚ್ಚು ಪ್ರಖರಗೂಳುತ್ತದೆ ಎಂದು ಹೇಳಿದರು.
ಚಿತ್ರದುರ್ಗದ ತಹಸಿಲ್ದಾರ್ ಮಾಧವರಾವ್, ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಸವರಾಜ್ ಭೀಮಳ್ಳಿ, ಶಕುಂತಲಾ ಬಸವರಾಜ್ ಭೀಮಳ್ಳಿ, ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ ಮದರ್ ತೆರೆಸಾ ಬಿಇಡಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ವನಿತಾ ಜಾಧವ್, ಮದರ್ ತೆರೇಸಾ ಕಲಾ ಪದವಿ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ದಯಾನಂದ್ ಎಸ್. ಬಿ, ಟ್ರಿನಿಟಿ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯಗುರು ಆಫ್ರಿನ್ ಬೇಗಂ, ಪ್ರಿನ್ಸಿಪಾಲ್ ನಾಗೇಂದ್ರ ಬಡಿಗೇರ ಇದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದರು.