ಶಹಾಬಾದ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಕ್ವಿಂಟಾಲಗೆ ೬೧೦೦ ರೂ. ಬೆಂಬಲ ಬೆಲೆ ನೀಡುತ್ತಿದೆ.ರೈತರು ಇದರ ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಹೇಳಿದರು.
ಅವರು ಮರತೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಲಾದ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಭಾಗದ ರೈತರು ವಾಣಿಜ್ಯ ಬೆಳೆಯಾದ ತೊಗರಿ ಬೆಳೆಯನ್ನೇ ನಂಬಿಕೊಂಡು ಸಾವಿರಾರು ಹೆಕ್ಟೇರ್ ತೊಗರಿ ಬೆಳೆಯನ್ನೇ ಬೆಳೆದಿದ್ದಾರೆ.ಅಲ್ಲದೇ ಉತ್ತಮ ಇಳುವರಿ ಕೂಡ ಈ ವರ್ಷ ಬಂದಿದೆ. ರೈತರು ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು.ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿದ ಪರಿಣಾಮವಾಗಿ ರಾಜ್ಯ ಸರ್ಕಾರ ರೈತರಿಂದ ತೊಗರಿ ಖರೀದಿಸಲಾಗುತ್ತಿದೆ.ಸರ್ಕಾರ ತೊಗರಿ ಬೆಳೆಗಾರರ ಅನುಕೂಲಕ್ಕಾಗಿ ಪ್ರತಿ ಕ್ವಿಂಟಾಲಗೆ ೬೧೦೦ರೂ. ಬೆಂಬಲ ಬೆಲೆ ನೀಡುತ್ತಿದೆ. ನೊಂದಣಿಗೊಂಡ ರೈತರಿಂದ ಗರಿಷ್ಠ ಸಧ್ಯ ೧೦ ಕ್ವಿಂಟಾಲ್ ಮಾತ್ರ ಖರಿದಿಸಲಾಗುತ್ತಿದೆ. ಸರ್ಕಾರದಿಂದ ೨೦ ಕ್ವಿಂಟಾಲ್ ತೊಗರಿ ಖರೀದಿಸಬೇಕೆಂಬ ಆದೇಶ ಬಂದರೆ ರೈತರಿಗೆ ಅನುಕೂಲವಾಗುವುದು ಎಂದು ಹೇಳಿದರು.
ಅಜಿತ್‌ಕುಮಾರ ಪಾಟೀಲ, ಸಿದ್ದುಗೌಡ ಅಫಜಲಪುರಕರ್, ಅಪ್ಪಾಸಾಬ ಪಾಟೀಲ, ವಿದ್ಯಾಸಾಗರ ಪಾಟೀಲ,ಶ್ಯಾಮರಾಯಗೌಡ,ಶಮಶೀರ ಗೋಳಾ, ಸಿದ್ದಲಿಂಗ ಭಮ್ಮಶೆಟ್ಟಿ, ಕರಬಸಪ್ಪ ರಾಯಗೌಡ,ದೇವಾನಂದ ಸಾಹು, ರಮೇಶ ಸಾಹು, ಶರಬಸಪ್ಪ ಪಟ್ಟೇದ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ನರೋಣಿ, ವ್ಯವಸ್ಥಾಪಕ ಈರಣ್ಣ ಬುಕ್ಕಿನ್ ಸೇರಿದಂತೆ ನಏಕರು ಇದ್ದರು.