ಕಲಬುರಗಿ: ದೆಹಲಿಯಲ್ಲಿ ನಡೆಯುತ್ತಿರುವ ಶಾಹೀಬಾಗ್ ಹೋರಾಟಗಾರರ ಮೇಲೆ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವ ಕೇಂದ್ರ ಸಚಿವ ಕಪೀಲ್ ಮಿಶ್ರಾ ರವರನ್ನು ಕೂಡಲೇ ಬಂಧಿಸಬೇಕೆಂದು ಗುಲಬರ್ಗಾ ಯುತ್ ಪ್ರೋಟೇಸ್ಟ್ ಸಂಘಟನೆಯ ಕಾರ್ಯಕರ್ತರು ಮಿಶ್ರಾ ಅವರ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ಪ್ರತಿಭಟನೆ ಆಗ್ರಹಿಸಿದರು.
ನಗರದ ಜಗತ ವೃತ್ತದಲ್ಲಿ ಪ್ರತಿಭಟನೆ ಸಂಘಟನೆಯ ಕಾರ್ಯಕರ್ತರು ದೆಹಲಿಯಲ್ಲಿ ನಡೆಯುತ್ತಿರುವ ಶಹೀನಬಾಗ ಹೋರಾಟಗಾರರ ಮೇಲೆ ಕೋಮುಗಲಭೆ ಸೃಷ್ಟಿಸುತ್ತಿರುವ ದೇಶದಲ್ಲಿ ನಡೆಯುತ್ತಿರುವ ಸಿಎಎ, ಎನ್.ಪಿ. ಆರ್ ಮತ್ತು ಎನ್.ಆರ್.ಸಿ ನ್ಯಾಯಯುತ ಹೋರಾಟವನ್ನು ಹತ್ತಿಕ್ಕೂವ ಕೃತ್ಯ ನಡೆಸುತ್ತಿದ್ದಾರೆ ಎಂದು ಸಂಘಟನೆಯ ಸೈಯದ್ ಅಲಿಮ್ ಇಲಾಹಿ ಹೇಳಿದರು.
ಕಾರಣವಾಗಿ ಶಾಹಿನಬಾಗ ಹೋರಾಟಗಾರರ ಮೇಲೆ ಕೋಮು ಗಲಭೆ, ದೌರ್ಜನ್ಯ ಎಸಗುತ್ತಿರುವ ಕಮಿಲ್‌ಮಿಶ್ರಾ ಇವರನ್ನು ಬಂಧಿಸಿ ಶಾಂತಿಯುತವಾಗಿ, ಹೋರಾಟಕ್ಕೆ ಬೆಂಬಲಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಜೀಮಶೇಕ್, ಅಬ್ದುಲ್ ಸತ್ತಾರ, ಮಹ್ಮದ್ ಮೀನಾಜ ಖತೀಫ್, ಮನಸೂರ ರಜಾ, ನಜೀರ್ ಶೇಕ್, ಅಲಮದಾರ್ ಜೈದಿ, ಸೈಯದ್ ಮೀನಾಜ ಹುಸೈನಿ, ಸೈಯದ್ ಅಕ್ಬರ್ ಜೆ.ಡಿ, ಮಹಮ್ಮದ್ ಸಾಜಿದ್ ಕಲ್ಯಾಣಿ, ಅಸಲಮ್ ಹಾಜಜ್ರಿ ಸೇರಿದಂತೆ ಮುಂತಾದವರು ಇದ್ದರು.