ಸುರಪುರ: ಇಂದಿನಿಂದ (ಬುಧವಾರ) ಎರಡು ದಿನಗಳ ಕಾಲ ಗ್ರಾಮದಲ್ಲಿಯ ಅಂಬ್ರಣ್ಣ ಮುತ್ಯಾ ಅವರ ಗದ್ದುಗೆ ಬಳಿಯಲ್ಲಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೭ ಗಂಟೆಗೆ ಗದ್ದುಗೆ ಪೂಜೆ ಅಭಿಷೇಕವಿರುತ್ತದೆ ಮತ್ತು ರಾತ್ರಿ ದೇವಾಪೂರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಬಜನಾ ಮತ್ತು ಡೊಳ್ಳು ಪದಗಳ ಮೇಳ ನಡೆಯಲಿದೆ.
ದಿನಾಂಕ:೨೭ರ ಗುರುವಾರ ಬೆಳಿಗ್ಗೆ ಕುಂಭ ಕಳಸ, ಪುರವಂತಿಕೆ ಸೇವಾ, ಡೊಳ್ಳುಕುಣಿತ, ಬಾಜಾ ಭಜಂತ್ರಿಯೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಅಂಬ್ರಣ್ಣ ಮುತ್ಯಾ ನವರ ಭಾವಚಿತ್ರ ಭವ್ಯಮೆರೆವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಗ್ರಾಮದ ಜಡಿಶಾಂತಲಿಂಗೇಶ್ವರ ಮಠದ ಶ್ರೀ ಶಿವಮೂರ್ತಿ ಶಿವಚಾರ್ಯರ ಸ್ವಾಮೀಜಿ,ವೀರಗೋಟಾದ ಅಡವಿಲಿಂಗ ಮಹರಾಜರು , ಶ್ರೀ ಗುರು ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ರುಕ್ಮಾಪೂರ, ಮಲ್ಲಣ್ಣ ಮುತ್ಯಾ, ಗಚ್ಚಪ್ಪ ಪೂಜಾರಿ, ಮೌನೇಶ್ವರ ಮುತ್ಯಾನವರು ಪಾಲ್ಗೊಳ್ಳಲಿದ್ದಾರೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಭಾಗವಹಿಸಿ ಅಂಬ್ರಣ್ಣ ಮುತ್ಯಾನವರ ಕೃಪೆಗೆ ಪಾತ್ರರಾಗುವಂತೆ ಮಲ್ಲಣ್ಣ ಮುತ್ಯಾರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.