ಕಲಬುರಗಿ: ಹಿಂದುತ್ವ ಕೋಮುವಾದಿ ಪಡೆಗಳು ಈಶಾನ್ಯ ದೆಹಲಿಯಲ್ಲಿ ಪೊಲೀಸರೊಂದಗಿಗೆ ವ್ಯವಸ್ಥಿತವಾಗಿ ಸಿಎಎ ಪ್ರತಿಭಟನಾಕಾರರ ಮತ್ತು ಮುಸ್ಲಿಮರ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸಿ ಹಿಂಸೆ ಮಾಡಿರುವ ಘಟನೆ ಖಂಡಿಸಿ, ಗಲಭೆಯ ನೈತಿಕತೆ ಹೊಣೆ ಹೊತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಜಗತ್ ವೃತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಅಬ್ದುಲ್ ರಹೀಂ ಪಟೇಲ್ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ವಿವಾದಿತ ಹೇಳಿಕೆಯಿಂದ ರಾಜಧಾನಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇನ್ನೂರುಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶತಕೋಟಿ ಮೌಲ್ಯದ ಆಸ್ತಿ, ರೂಪಾಯಿಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಮುಖ ದರ್ಗಾ, ಮಸೀದಿದಂತಹ ಧಾರ್ಮಿಕ ಸ್ಥಳಗಳು ಸಹ ಗುರಿಸಿ ಹಿಂಸೆಯಲ್ಲಿ ಮಾಡಲಾಗಿದ್ದು, ಇದು ಪೂರ್ವ ಯೋಜಿತ ದಾಳಿ ಎಂದರು.
ಇಡೀ ಮಾಧ್ಯಮಗಳ ಗಮನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಮಯದಲ್ಲಿ ಇದಾಗ ಕಪಿಲ್ ಮಿಶ್ರಾ, ಸಿಎಎ ವಿರೋಧಿ ಪ್ರತಿಭಟನಾಕಾರರ ಮತ್ತು ಜನರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಮಾಡಿಸಿ, ಧರ್ಮದ ಹೆಸರಲ್ಲಿ ಹಿಂಸಾಚಾರ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ದೆಹಲಿ ಪೊಲೀಸರು ಈ ಹಿಂಸಾಚಾರವನ್ನು ತಡೆಯುವಲ್ಲಿ ವಿಫಲರಾಗಿ, ದುಷ್ಕರ್ಮಿಗಳಿಗೂ ಸಹಾಯ ಮಾಡಿರುವ ಹಲವು ವಿಡಿಯೋ ಸಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತಿವೆ. ರಾಜಧಾನಿಯ ಬೀದಿಗಳಲ್ಲಿ ಈ ಭಯೋತ್ಪಾದಕ ಕೃತ್ಯವನ್ನು ಮಾಡಲು ಗಲಭೆಕೋರರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಹ ಗಮನಿಸಿ, ದೆಹಲಿ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಸಾಂವಿಧಾನಿಕ ಕರ್ತವ್ಯ ಮಾಡಲು ವಿಫಲರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಹಿಂಸೆಯ ನೈತಿ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಿ, ಗಲಭೆ ಮಾಡಿದ ಎಲ್ಲಾ ಗೂಂಡಾ, ದುಷ್ಕರ್ಮಿಗಳ ಪತ್ತೆಗೆ ಉನ್ನತ ತನಿಖೆ ನಡೆಸಿ ಬಂಧಿಸಿ ಕಠಿನ ಕ್ರಮ ಕೈಗೊಂಡು, ಮುಖ್ಯ ಆರೋಪಿ ಕಪಿಲ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲೆ. ಕೌನ್ಸಿಲ್ ಸದಸ್ಯ ಸೈಯದ್ ಜಾಕಿರ್, ಮೊಹಮ್ಮದ್ ಮೊಹ್ಸಿನ್, ವಸೀಮ್ ಅಕ್ರಮ್, ವಿಐಎಂ ಜಿಲ್ಲೆಯ ಅಧ್ಯಕ್ಷೆ ರೆಹಾನಾ ಬೇಗಂ, ಉಪಾಧ್ಯಕ್ಷೆ ಆಯೆಷಾ ಬೇಗಂ, ವಾಹಿದಾ ಅಂಜುಮ್ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.