” ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ: ಶಫಿ ಅಹ್ಮದ್

0
84

ಶಹಾಬಾದ: ವಿದ್ಯಾರ್ಥಿಗಳಿಗೆ ಸಿಕ್ಕ ಉತ್ತಮ ಅವಕಾಶವನ್ನು ಸತತ ಪ್ರಯತ್ನ ಶ್ರದ್ಧೆ ಮತ್ತು ಶ್ರಮ ದಿಂದ ಅಭ್ಯಸಿಸಿ ಪ್ರಯೋಜನ ಪಡೆದು ಯಶಸ್ಸು ಪಡೆಯಬೇಕೆಂದು ಟಿ. ಐ. ಎಸ್. ಎಸ್, ಕಾರ್ಯಕ್ರಮಧಿಕಾರಿ ಅಬ್ದುಲ್ ಶಫಿ ಅಹ್ಮದ್ ಹೇಳಿದರು.

ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ . ನೆಹರು ಯುವ ಕೇಂದ್ರ ಕಲಬುರಗಿ, ಹರ್ಷ ನಗರ ಮತ್ತು ಗ್ರಾಮಿಣ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ರಿ ಕಲಬುರಗಿ . ಮತ್ತು ಸ್ಟಾರ್ ಯುವಕ ಸಂಘ, ಸಹಾರ ಯುವತಿ ಸಂಘ, ಪ್ರಾಯಗ್ ಯುವಕ ಸಂಘ , ವಿಕಾಸ ಯುವಕ ಸಂಘ. ಇವರ ಸಂಯುಕ್ತಾಶ್ರದಲ್ಲಿ. ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಗಾರ ಕಾರ್ಯಕ್ರಮದ ಕಾಲೇಜಿನ ವಿದ್ಯಾರ್ಥಿಗಳಿಗೆ ” ನೆರೆ ಹೊರೆ ಯುವ ಸಂಸತ್ತು “. ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಜಿಲ್ಲಾ ಸಮಾಲೋಚಕ ಮಂಜುನಾಥ ಕಂಬಾಳಿಮಠ ಮಾತನಾಡುತ್ತಾ , ವಿದ್ಯಾರ್ಥಿಗಳಿಗೆ ಕ್ಷಯರೋಗ ಲಕ್ಷಣಗಳ ಬಗ್ಗೆ ವಿವರಿಸುತ್ತ ನಮ್ಮ ವಿಶ್ವದಾದ್ಯಂತ ಕ್ಷಯರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, ಹಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ. ಒಬ್ಬ ಕ್ಷಯರೋಗಿ ಹತ್ತು ಜನರಿಗೆ ಹರಡಿಸಬಲ್ಲ, ಹಾಗೆ ಇದರ ಲಕ್ಷಣಗಳು ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು,ಕಫದ ಜೊತೆ ರಕ್ತ ಬೀಳುವುದು. ಈ ಲಕ್ಷಣಗಳು ಕಂಡಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ಸಲಹೆ ಪಡೆದು. ಹಾಗೆ ಲ್ಯಾಬೋರೇಟರಿಯಲ್ಲಿ ಕಫದ ಮಾದರಿ ಪರೀಕ್ಷೆ ಕೇಂದ್ರ ಮಾಡಿಸಲು ಉಚಿತವಾಗಿದೆ ಎಂದು ತಿಳಿಸಿದರು.

ಕ್ಷಯರೋಗಿ ಎಂದು ಧೃಡಪಟ್ಟಲ್ಲಿ ಅವರಿಗೆ ಪೂರ್ಣ ಪ್ರಮಾಣದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಹಾಗೆ ರೋಗಿಗೆ ಪ್ರತಿ ತಿಂಗಳು ಪೋಷಣ / ಪೌಷ್ಟಿಕಾಹಾರ ಸೇವನೆಗಾ ಐದುನೂರು ರೂಪಾಯಿ ನೆರೆ ಅವರ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ. ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೋ ಪೀರ್ ಪಾಶಾ ಎನ್ ಎಸ್ ಎಸ್ ಅಧಿಕಾರಿಗಳು. ವೇದಿಕೆ ಮೇಲೆ ಪ್ರೋ ಮೊಹ್ಮದಿ ಬೇಗಂ. ಪ್ರೋ ಮೋಹನ್ ಚವ್ಹಾನ್, ಹಾಗೆ ವಿಕಾಸ ಯುವಕ ಸಂಘದ ಅಧ್ಯಕ್ಷ ಮುಕ್ತಧಿರ್ ಅಹ್ಮದ್ ಸ್ವಾಗತಿಸಿದರು, ಪ್ರೋ ರಾಜಶೇಖರ ದಂಡೋತಿ ಅವರು ನಿರೂಪಿಸಿದರು. ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here