ನಿತ್ಯ ಜೀವನದಲ್ಲಿ ದಾರ್ಶನಿಕರ ತತ್ವೋಪದೇಶ ಅಳವಡಿಸಿಕೊಳ್ಳಿ: ಸುರೇಶ ಬಡಿಗೇರ

0
159

ಕಲಬುರಗಿ: ಮಕ್ಕಳಲ್ಲಿ ಸಂಸ್ಕೃತಿಯನ್ನು ಬೆಳೆಸದಿದ್ದರೆ, ಆ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಸಾಧ್ಯವಿಲ್ಲ. ಚಿಕ್ಕವರಿದ್ದಾಗಿನಿಂದ ಮಕ್ಕಳಿಗೆ ಶರಣರ, ದಾರ್ಶನಿಕರ, ಮಹಾತ್ಮರ ಸಂದೇಶಗಳ ತಿಳಿವಳಿಕೆ ನೀಡುವುದು ಅವಶ್ಯಕವಿದೆ ಎಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.

ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಜನ್ಮದಿನದಂಗವಾಗಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ ನೇತೃತ್ವದಲ್ಲಿ ನಗರದ ಅಪ್ಪಾಜಿ ಗುರುಕುಲ ಶಾಲಾ ವಿದ್ಯಾರ್ಥಿಗಳಿಗೆ ದಾರ್ಶನಿಕರ ಚರಿತ್ರೆಗಳುಳ್ಳ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು, ಯುವ ಜನರು ವಿದ್ಯಾರ್ಜನೆ ಎಂಬ ಬಂಡಿಯನ್ನು ಓಡಿಸುವಾಗ ಎಚ್ಚರವಿರಬೇಕು. ದುರ್ಮಾಗದತ್ತ ನಡೆಸದೇ ದುಷ್ಟರಿಂದ ದೂರವಿದ್ದು, ಗುಣವಂತರಾಗಿ, ಪ್ರಜ್ಞಾವಂತರಾಗಿ ಈ ದೇಶದ ಉತ್ತಮ ಪ್ರಜೆಗಳಾಗಬೇಕು. ಸಮಯದ ಸದ್ಬಳಕೆ ಮಾಡಿಕೊಂಡು ಸದ್ವಿಚಾರದ ಮಾರ್ಗದತ್ತ ಸಾಗಿ ಸಾತ್ವಿಕ ಗುಣಗಳನ್ನು ಬೆಳೆಸಿಕೊಂಡು ನಿಮ್ಮ ಜೀವನದಲ್ಲಿ ಪರಮಾನಂದ ಎಂಬ ಬಾಳ ಬಂಡಿಯನ್ನು ಸುಗಮವಾಗಿ, ಸ್ವಸ್ಥವಾಗಿ ನಡೆಸಬೇಕೆಂದ ಅವರು, ಸಮಾಜದ ಸರ್ವಾಂಗೀಣ ಅಭಿವೃದ್ಧಿ ಕಾಣಬೇಕಾದರೆ ಪ್ರತಿಯೊಬ್ಬರೂ ಪುಸ್ಕತ ಓದುವ ಗೀಳು ಬೆಳೆಸಿಕೊಳ್ಳಬೇಕು. ಸಂವಿಧಾನ ರಚನೆ ಮಾಡಿದ ಡಾ.ಅಂಬೇಡ್ಕರ್ ಅವರು ಸತತ ಅಧ್ಯಯನ ಶೀಲರಾಗಿದ್ದರಿಂದಲೇ ಅತ್ಯುತ್ತಮ ಸಂವಿಧಾನ ರಚನೆ ಮಾಡಿಕೊಡಲು ಸಾಧ್ಯವಾಯಿತು ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ನ್ಯಾಯವಾದಿಗಳಾದ ಶಿವರಾಜ ಎಸ್.ಅಂಡಗಿ, ವಿನೋದ ಜೇನವೇರಿ, ಶಿಕ್ಷಣ ಪ್ರೇಮಿ ರವಿಕುಮಾರ ಶಹಾಪುರಕರ್, ಪ್ರಮುಖರಾದ ಶಿವಾನಂದ ಮಠಪತಿ, ರವೀಂದ್ರಕುಮಾರ ಭಂಟನಳ್ಳಿ, ಶಿವಶರಣಪ್ಪ ಕುಸನೂರ, ಪರಮೇಶ್ವರ ಶಟಕಾರ, ಶರಣರಾಜ್ ಛಪ್ಪರಬಂದಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಭಾಗಮ್ಮ ರಾಜಕುಮಾರ ಉದನೂರ ಅಧ್ಯಕ್ಷತೆ ವಹಿಸಿದ್ದರು. ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು ಸಾವಿರಕ್ಕೂ ಹೆಚ್ಚು ದಾರ್ಶನಿಕರ ಪುಸ್ತಕಗಳನ್ನು ವಿತರಿಸುವ ಮೂಲಕ ಶಾಸಕ ಅಪ್ಪುಗೌಡರ ಜನ್ಮದಿನವನ್ನು ಅರ್ಥಪೂರ್ಣ ಮತ್ತು ಸಮಾಜಮುಖಿಯಾಗಿ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here