ಗೋದುತಾಯಿ ಕಾಲೇಜಿನಲ್ಲಿ ರಾಷ್ಟ್ರೀಯ ಕಾರ್ಯಾಗಾರ : ಸಾಹಿತಿ ನೇಮಿಚಂದ್ರ ಅಭಿಮತ

0
64

ಕಲಬುರಗಿ: ಮಹಿಳೆಯರು ಧೈರ್ಯದಿಂದ ಎದುರಿಸಿದರೆ ಸಾಧನೆಯ ಶಿಖರವನ್ನೇರಲು ಯಾವುದೇ ಅಡ್ಡಿಗಳು ಬರುವುದಿಲ್ಲ ಎಂದು ಬೆಂಗಳೂರಿನ ಹೆಚ್‌ಎಎಲ್ ಕಂಪನಿಯ ನಿವೃತ್ತ ಜನರಲ್ ಮ್ಯಾನೇಜರ ಮತ್ತು ಖ್ಯಾತ ಬರಹಗಾರ್ತಿ ಡಾ.ನೇಮಿಚಂದ್ರ ಅವರು ತಿಳಿಸಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರದ ಅಡಿಯಲ್ಲಿ ಗುರುವಾರ ಆರಂಭವಾದ ಐದು ದಿನಗಳ ’ ವಿವಿಧ ಕ್ಷೇತ್ರಗಳಲ್ಲಿ ಸಮಕಾಲಿನ ಮಹಿಳೆಯರ ಪಾತ್ರ’ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಯಾವುದೇ ಅಸಾಧ್ಯವೆನ್ನುವುದು ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಎಲ್ಲವನ್ನು ಸಾಧಿಸುತ್ತಾಳೆ. ಪುರುಷರ ಸರಿಸಮಾನವಾಗಿ ಬೆಳೆಯುತ್ತಿದ್ದಾರೆ. ಆದರೆ ಕುಟುಂಬ, ಸಮಾಜ, ಸರಕಾರಗಳ ಸಹಕಾರ ಅಗತ್ಯವಿದೆ. ಎಷ್ಟೋ ಮಹಿಳೆಯರು ಸಾವಲಂಬಿಗಳಾಗಿ ಬದುಕುತ್ತಿದ್ದಾರೆ. ಸೋತಾಗ ಕುಗ್ಗದೆ ಅದನ್ನು ಎದುರಿಸಿ ಗೆಲುವಿನ ಸೋಪಾನ ಮಾಡಿಕೊಳ್ಳಬೇಕು. ಬದುಕಲು ಅನೇಕ ಉತ್ತಮ ದಾರಿಗಳಿವೆ ಅವುಗಳ ಆಯ್ಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ನನ್ನಿಂದ ಎನೂ ಮಾಡಲು ಸಾಧ್ಯವಿಲ್ಲ ಎಂದು ವ್ಯರ್ಥ ಕಾಲ ಕಳೆದರೆ ಬದುಕು ಬಹಳ ದುಸ್ತರವಾಗುತ್ತದೆ. ನನ್ನಿಂದ ಎಲ್ಲಾ ಸಾಧ್ಯ ಅಂದಾಗ ಮಾತ್ರ ಬದುಕು ಸುಂದರವಾಗುತ್ತದೆ ಎಂದು ಹೇಳುತ್ತಾ ಎಷ್ಟೋ ಸಮಸ್ಯೆಗಳಿದ್ದರೂ ಅವುಗಳನ್ನು ಮೆಟ್ಟಿ ನಿಂತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಕುರಿತು ಉದಾಹರಣೆ ನೀಡುವುದರ ಮೂಲಕ ತಿಳಿಸಿದರು. ಅವರ ಮಾತಿನದುದ್ದಕ್ಕೂ ಯಾವುದೂ ಅಸಾಧ್ಯವಲ್ಲ, ಎಲ್ಲವೂ ಸಾಧ್ಯ ಎಂದು ಹೇಳುತ್ತಿತ್ತು.

Contact Your\'s Advertisement; 9902492681

ಕಾರ್ಯಕ್ರಮದ ಮುಖ್ಯ ಅತಿಥಗಳಾದ ಖ್ಯಾತ ವಕೀಲೆ ಮತ್ತು ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಅನುರಾಧ ದೇಸಾಯಿ ಅವರು ಮಾತನಾಡಿ, ವಿದ್ಯಾರ್ಥಿನಿಯರು ಹೊಸ ಹೊಸ ಯೋಚನೆಗಳನ್ನು ಮಾಡುವುದು ಕಲಿಯಬೇಕು. ಅಂದಾಗ ನಿಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ ಆದರೆ ಉನ್ನತ ಹುದ್ದೆಗಳಲ್ಲಿ ಅವರು ಬಹಳ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನ ಯಾವಾಗಲೂ ನೊಂದವರಿಗೆ, ದಿವ್ಯಾಂಗರಿಗೆ, ವಿಧವೆಯರಿಗೆ, ಪ್ರತಿಭಾವಂತರಿಗೆ ಆಶ್ರಯ ನೀಡುತ್ತಾ ಬಂದಿದೆ. ಇಂತಹ ಎಷ್ಟೋ ಜನರನ್ನು ಪೂಜ್ಯ ಅಪ್ಪಾಜೀಯವರು ಬೆಳೆಸಿದ್ದಾರೆ. ಅದರಲ್ಲೂ ಮಹಿಳೆಯರಿಗಾಗಿ ಅನೇಕ ಶಾಲಾ ಕಾಲೇಜುಗಳು ಆರಂಭಿಸಿ ಅವರನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಡಾ. ನೇಮಿಚಂದ್ರ ಅವರು ವಿಜ್ಞಾನಕ್ಕೂ ಸೈ, ಸಾಹಿತ್ಯಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದು ಮಹಿಳೆಯರ ಉನ್ನತಿಗೆ ಕನ್ನಡಿ ಹಿಡಿದಂತಿದೆ ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಧಿಕಾರಿ ಡಾ.ಶಾಂತಲಾ ನಿಷ್ಠಿ, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸೀಮಾ ಪಾಟೀಲ, ಐಕ್ಯೂಎಸಿ ಸಂಯೋಜಕಿ ಡಾ.ಇಂದಿರಾ ಶೇಟಕಾರ ವೇದಿಕೆಯಲ್ಲಿದ್ದರು. ಡಾ. ಸೀಮಾ ಪಾಟೀಲ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರು, ಡಾ. ಸಿದ್ದಮ್ಮ ಗುಡೇದ ನಿರೂಪಿಸಿದರು, ಶ್ರೀಮತಿ ಜಾನಕಿ ಹೊಸುರ ವಂದಿಸಿದರು. ಕು.ಭುವನೇಶ್ವರಿ ಮತ್ತು ಕು. ರಾಜೇಶ್ವರಿ ಪ್ರಾರ್ಥಿಸಿದರು.

ನಂತರ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವುದರ ಮೂಲಕ ತಮ್ಮ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಂಡರು.
ಕಾರ್ಯಕ್ರದಲ್ಲಿ ಡಾ. ಎನ್.ಎಸ್.ಹೂಗಾರ, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಡಾ.ಸಂಗೀತಾ ಪಾಟೀಲ, ಕೃಪಾಸಾಗರ ಗೊಬ್ಬುರ, ಶ್ರೀಮತಿ ಶಶಿಕಲಾ ಪಾರಾ, ಶ್ರೀಮತಿ ಅನಿತಾ ಕೃಪಾಸಾಗರ, ಶ್ರೀಮತಿ ಪದ್ಮಜಾ ವೀರಶೆಟ್ಟಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here