ಸುರಪುರ: ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ವಿದ್ಯಾರ್ಥಿ ಹಂತದಿಂದಲೆ ದೇಶಪ್ರೇಮವನ್ನು ಮೈಗೂಡಿಸಿಕೊಂಡು ಶಿಸ್ತಿನ ಸಿಪಾಯಿಗಳಂತೆ ಸೇವೆ ಮಾಡುತ್ತಾರೆ.ನಿಮ್ಮ ಸೇವೆ ಇತರೆ ಇಲಾಖೆಗಳಿಗು ಮಾದರಿಯಾಗಿದೆ.ನೀವೆಲ್ಲರು ಮುಂದೆ ದೊಡ್ಡವರಾದ ಮೇಲೆ ಪೋಲಿಸ್ ಮತ್ತಿತರೆ ರಕ್ಷಣಾ ಇಲಾಖೆಗೆ ಸೇರಿ ದೇಶ ಸೇವೆ ಮಾಡುವಂತೆ ಪಿಎಸ್‌ಐ ಚೇತನ್ ಮಾತನಾಡಿದರು.
ತಾಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪೋಲಿಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಇಂದು ನಾವೆಲ್ಲರು ಪೋಲಿಸ್ ಇಲಾಖೆಯಲ್ಲಿದ್ದು ಕೆಲಸ ಮಾಡುತ್ತೆವೆ.ಆದರೆ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ವಿದ್ಯಾರ್ಥಿಗಳಿದ್ದುಕೊಂಡೆ ಪೋಲಿಸರಂತೆ ಕೆಲಸ ಮಾಡುವ ಮೂಲಕ ಎಲ್ಲರಿಗು ಮಾದರಿಯಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಠಾಣೆಯ ಪೇದೆ ಚಂದ್ರಶೇಖರ ಮಾತನಾಡಿ,ನೀವುಗಳು ಒಂದು ರೀತಿಯಲ್ಲಿ ಪೋಲಿಸರಿದ್ದಂತೆ,ತಾವೆಲ್ಲರು ಎಂದು ತಪ್ಪು ಹಾದಿಯನ್ನು ತುಳಿಯಬೇಡಿ ಮತ್ತು ನಿಮ್ಮ ಕಣ್ಮುಂದೆ ಯಾವುದೆ ವ್ಯಕ್ತ ತಪ್ಪು ಮಾಡಿದರೆ ಅಂತವರ ಬಗ್ಗೆ ಪೋಲಿಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸೇವೆಯನ್ನು ಎತ್ತಿಹಿಡಿಯಬೇಕೆಂದು ಕಿವಿ ಮಾತು ಹೇಳಿದರು.
ಇದಕ್ಕು ಮುನ್ನ ನಗರದ ದರಬಾರ ಶಾಲೆಯಿಂದ ಪುಟಾಣಿ ಪೋಲಿಸ್ ಬ್ಯಾನರ್ ಹಿಡಿದು ಪೋಲಿಸ್ ಠಾಣೆ ವರೆಗೆ ಪ್ರಭಾತ್ ಪೇರಿ ನಡೆಸಿದರು.ಮೆರವಣಿಗೆಗೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ ಚಾಲನೆ ನೀಡಿದರು.ಪೋಲಿಸ್ ಠಾಣೆಯಿಂದ ಮರಳಿ ದರಬಾರ ಶಾಲೆ ವರೆಗೆ ಮೆರವಣಿಗೆ ನಡೆಸಲಾಯಿತು.ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಅಧಿಕಾರಿ ರಾಜಶೇಖರ ದೇಸಾಯಿ,ತಿಮ್ಮಾಪುರ ಶಾಲೆ ದೈಹಿಕ ಶಿಕ್ಷಕ ಮಲ್ಲಪ್ಪ,ಶಿಕ್ಷಕರಾದ ಈಶ್ವರ ಬಡಿಗೇರ,ಜೋಗಪ್ಪ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ನೂರಕ್ಕು ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿದ್ದರು.