ಸುರಪುರ: ಕಲ್ಯಾಣ ಕರ್ನಾಟಕ ನಾಮಕರಣದ ರೂವಾರಿ, ಹೈದರಬಾದ್ ಕರ್ನಾಟಕ ಅಭಿವೃದ್ಧಿ ವಿಭಾಗದ ಪ್ರಧಾನ ಸಂಚಾಲಕರು ಆಗಿರುವ ಬಸವರಾಜ ಪಾಟೀಲ್ ಸೇಡಂ ಅವರ ಶ್ರಮ ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಪೂರಕವಾಗಿದೆ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಭಿಪ್ರಾಯ ಪಟ್ಟರು.
ಕರ್ನಾಟಕ ಸರಕಾರದಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನದೊಂದಿಗೆ ಆಯ್ಕೆಯಾಗಿರುವ ಬಸವರಾಜ ಪಾಟೀಲ್ ಸೇಡಂ ಅವರನ್ನು ಕಲಬುರಗಿ ವಿಕಾಸ ಅಕಾಡೆಮಿ ಕಾರ್ಯಲಯದಲ್ಲಿ ಪ್ರತಿಷ್ಠಾನದವತಿಯಿಂದ ಸನ್ಮಾನಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಸರ್ವತೋಮುಖ ಪ್ರಗತಿ ಸಾಧಿಸಬೇಕು ಶಿಕ್ಷಣ, ಕೃಷಿ, ಸಂಸ್ಕೃತಿ ಹಿಗೆ ಒಟ್ಟಾರೆ ಎಲ್ಲಾ ಕ್ಷೇತ್ರದ ಬೆಳವಣಿಗೆಗಾಗಿ ಕಳೆದ ಹಲವು ದಶಕಗಳಿಂದ ನಿರಂತರವಾಗಿ ದುಡಿಯುತ್ತಿರುವ ಬಸವರಾಜ ಪಾಟೀಲ್ ಜಿ ಅವರು ಈ ಭಾಗದ ಪ್ರಗತಿಯ ಮತ್ತು ಬದಲಾವಣೆಯ ಹರಿಕಾರರು, ಪ್ರಸ್ತುತ ಸರಕಾರ ಅವರಿಗೆ ವಿಶೇಷ ಅವಕಾಶ ಕಲ್ಪಿಸಿರುವುದು ನಮ್ಮೆಲ್ಲರಿಗು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಶಾಂತರೆಡ್ಡಿ, ಮಲ್ಲು ಬಾದ್ಯಾಪುರ, ಮೌನೇಶ ಐನಾಪೂರ, ಬಸವರಾಜ ಚನ್ನಪಟ್ನ ಸೇರಿದಂತೆ ಇತರರಿದ್ದರು.