ಕಬ್ಬಿನ ತೋಟಕ್ಕೆ ಬೆಂಕಿ, ಅಪಾರ ಪ್ರಮಾಣದ ಬೆಳೆ ನಾಶ

0
82

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುನ್ನೂರು ಗ್ರಾಮದಲ್ಲಿ ಸುಮಾರು 15 ಎಕರೆ ಭೂಮಿಯ ಕಬ್ಬಿನ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಸಿ ಸಂಪೂರ್ಣ ಕಬ್ಬು ಸುಟ್ಟುಹೋಗಿರುವ ಘಟನೆ ನಡೆದಿದೆ.

ಕುಂದನೂರ್ ಗ್ರಾಮದ ಉಮರ್ ಪಟೇಲ್ ತಂದೆ ಜಾಫರ್ ಪಟೇಲ್ ಇವರೇ ಕಂಗಲಾದ ರೈತ. ಸತತವಾಗಿ ಎರಡು ವರ್ಷ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿತಿದ್ದ ರೈತ ಘಟನೆಯಿಂದ ಅನಾಹುತದಿಂದ ಕಂಗಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಗೋಳಾಡುವ ಸ್ಥಿತಿಯಲ್ಲಿ ಇದ್ದಾನೆ. ಸಂಪೂರ್ಣ ಕಬ್ಬು ಸುಟ್ಟು ಭಸ್ಮವಾಗಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

Contact Your\'s Advertisement; 9902492681

ಗ್ರಾಮಸ್ಥರು ನೀರು ಹೊಡೆದರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದು, ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಯಾವುದೇ ಪ್ರಯೋಜನವಾಗಲಿಲ್ಲ. ಇಡೀ ಕಬ್ಬಿನ ಗದ್ದೆ ಸುಟ್ಟು ಕರಕಲಾಗಿ ಹೋಯಿತು ಎಂದು ಉಮರ್ ಪಟೇಲ್ ತಮ್ಮ ಅಳಲು ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯ ಬಗ್ಗೆ ವಾಡಿ  ಪೊಲೀಸ್ ಠಾಣೆಯಲ್ಲಿದೂರ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿ ಪೊಲೀಸ್ ಪರಿಶೀಲನೆ ನಡೆಸಿದ್ದಾರೆ.

ನೊಂದ ರೈತನಿಗೆ ತಕ್ಷಣ ಪರಿಹಾರ ಘೋಷಿಸಬೇಕೆಂದು ಗ್ರಾಮದ ಯೂಸುಫ್ ಪಟೇಲ್ ಕುಂದನೂರ್, ಮೋದಿನ್ ಪಟೇಲ ಅಣಬಿ, ರುಕುಂ ಪಟೇಲ್ ಕೂಡಿ, ಗೌಸ್ ಪಟೇಲ್ ಮಾಲಗತ್ತಿ,  ರಾಜ ಪಟೇಲ್ ನದಿ ಸಿನೋರ್, ಮಹಮ್ಮದ್ ಪಟೇಲ್ ಯಾಳವಾರ್, ಮಹಿಬೂಬ್ ಪಟೇಲ್ ದಳಪತಿ, ಅನ್ನು ಪಟೇಲ್, ಸೈಯದ್ ಏಜಾಜ್ ಅಲಿ ಇನಾಮದಾರ್, ರಜಾಕ್ ಪಟೇಲ್ ಭೋಗನಹಳ್ಳಿ, ಸಮದ್ ಪಟೇಲ್,  ಜಾಕಿರ್ ಪಟೇಲ್, ಸಲೀಂ ಚಿತ್ತಾಪುರ, ಜಿಲಾನ್ ಪಾಷಾ, ಅಬ್ದುಲ್ ಜಾವಿದ್ ಸಿಂದಗಿ, ಕುತುಬುದ್ದಿನ್ ಜಿಲಾನ್ ಗುತ್ತೇದಾರ್ ಸೇರಿದಂತೆ ಗ್ರಾಮಸ್ಥರು ಕ್ಷೇತ್ರದ ಶಾಕರು, ಸಂಸದರು ಮತ್ತು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here