12ನೇ ಆತಮಾನದಲ್ಲಿ ಅಂತರ್ಜಾತಿ ವಿವಾಹದಿಂದ ಕಲ್ಯಾಣದ ಕ್ರಾಂತಿ: ಸಿದ್ಧಬಸವ ಕಬೀರ ಮಹಾಸ್ವಾಮೀಜಿ

0
71

ಕಲಬುರಗಿ: ೧೨ನೇ ಶತಮಾನದಲ್ಲಿ ಬಸವಣ್ಣ ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅನೇಕ ತತ್ವ, ವಿಚಾರಗಳ ಕುರಿತು ಚರ್ಚೆ ನಡೆಯುತ್ತಿತ್ತು, ಜನರಲ್ಲಿರುವ ಜಾತಿ ಬೇಧ-ಭಾವವನ್ನು ತೊಡೆದುಹಾಕಲು ಶರಣರು ಅಂತರ್ಜಾತಿ ವಿವಾಹ ಮಾಡುವ ಮೂಲಕ ಕಲ್ಯಾಣದ ಕ್ರಾಂತಿಗೆ ಕಾರಣವಾಯಿತು ಎಂದು ಚಿಗರಳ್ಳಿಯ ಮರುಳಶಂಕರದೇವ ಗುರುಪೀಠದ ಸಿದ್ಧಬಸವ ಕಬೀರ ಮಹಾಸ್ವಾಮೀಜಿ ನುಡಿದರು.

ಗುರುವಾರ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಶರಣರು ತಮ್ಮ ಜೀವನದ ಮೂಲಕವೇ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು. ಇಂತಹ ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾಯಕದಿಂದಲೇ ಜೀವನವನ್ನು ಉತ್ತುಂಗಕ್ಕೆ ಕೊಂಡ್ಯೊಯ್ಯಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಕಲಬುರಗಿಯ ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ ಮಾತನಾಡಿ, ೧೨ನೇ ಶತಮಾನದಲ್ಲಿ ೩೬೦ ಜನ ಶಿವ-ಶರಣರಿದ್ದರು. ಅವರ ಬದುಕಿನ ಮೂಲಕವೇ ಸಾಧನೆ ಮಾಡಿದ ಮಹಾನ್ ಶರಣರಾಗಿದ್ದಾರೆ. ಯಾವುದೇ ಜಾತಿ,ಮತ,ಪಂಥಗಳನ್ನು ನೋಡದ ಅವರು ಸಮಾಜದಲ್ಲಿ ಕಂದಾಚಾರಗಳನ್ನು ತೊಡೆದುಹಾಕುವಲ್ಲಿ ಪ್ರಯತ್ನಿಸಿದರು ಎಂದು ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು.

ಮಾದಾರ ಚನ್ನಯ್ಯ,ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ,ಉರಿಲಿಂಗಪೆದ್ದಿ ಹಾಗೂ ಅನೇಕ ಶರಣರು ತಮ್ಮ ಅಂತರಂಗ-ಬಹಿರಂಗದ ಶುದ್ಧ ಕಾಯಕದಿಂದ ಭಕ್ತಿಯ ಮಾರ್ಗವನ್ನು ತೋರಿಸಿದರು. ಬಸವಣ್ಣನ ದಾರಿಯಲ್ಲಿಯೇ ಜೀವನ ನಡೆಸಿದ ಅನೇಕ ಶರಣರು ಇಂದಿಗೂ ನಮಗೆ ಮಾರ್ಗದರ್ಶನ. ಅವರ ವಚನಗಳನ್ನು ಓದುವ ಮೂಲಕ ಇಂದಿನ ಜನರು ಜೀವನ ನಡೆಸಿದರೆ ಸಮಾಜ ಸುಸ್ಥಿರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯ ಮೇಲೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಕೋಡ್ಲಾದ ಉರಿಲಿಂಗಪೆದ್ದಿ ಮಠದ ಉಪಾಧ್ಯಕ್ಷ ಶಂಕರ ಕೋಡ್ಲಾ, ಕಲಬುರಗಿಯ ಶರಣ ಡೋಹರ ಕಕ್ಕಯ್ಯಾ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಸಾಯಬಣ್ಣ ಹೋಳ್ಕರ, ಕಲಬುರಗಿಯ ಅಖಿಲ ಭಾರತ ಬಸವ ಮಾದಾರ ಚನ್ನಯ್ಯ ಸಮಾಜದ ಕಾರ್ಯದರ್ಶಿ ರುದ್ರಪ್ಪ ವಾಲೀಕರ, ಕಲಬುರಗಿಯ ಮಾದಾರ ಧೂಳಯ್ಯ ಸಮಾಜದ ಅಧ್ಯಕ್ಷ ರಮೇಶ ಹೊಸಮನಿ,ಕಲಬುರಗಿ ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಕಾಶಿರಾಯ ಹರಳಯ್ಯ ನಂದೂರಕರ್, ಕಲಬುರಗಿಯ ಮಾಜಿ ಮಹಾಪೌರರಾದ ಚಂದ್ರಿಕಾ ಪರಮೇಶ್ವರ, ಸಹಾಯಕ ಆಯುಕ್ತರಾದ ರಾಮಚಂದ್ರ ಗಡೇದ ಹಾಗೂ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here