ಶಂಕರನ ಅರಿವು ಮೂಡಿಸುವ ಕೆಲಸ ಬ್ರಹ್ಮಕುಮಾರಿಸ್ ಮಾಡುತ್ತದೆ: ರಾಜಯೋಗಿ ಪ್ರೇಮಣ್ಣ

0
143

ಸುರಪುರ: ಕಲೆ ಸಾಹಿತ್ಯ ಶಿಲ್ಪಕಲೆ ಎಲ್ಲದರಲ್ಲೂ ದೇವರಿದ್ದಾನೆ,ಆದರೆ ಆತನನ್ನು ಸಾಕಾರ ರೂಪದಲ್ಲಿ ಕಾಣುವುದು ಮುಖ್ಯವಾಗಿದೆ.ಆತನ ಸಾಕಾರ ರೂಪದ ಅರಿವು ಮೂಡಿಸುವ ಕೆಲಸವನ್ನು ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯದ ಮಾಡುತ್ತದೆ ಎಂದು ರಾಜಯೋಗಿ ಪ್ರೇಮಣ್ಣ ಮಾತನಾಡಿದರು.

ನಗರದ ಬ್ರಹ್ಮಕುಮಾರಿಸ್ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಭಾಗವಹಿಸಿ ಮಾತನಾಡಿ,೧೨ನೇ ಶತಮಾನದ ಶರಣರು ಹೇಳಿದರು ದೇವನೊಬ್ಬ ನಾಮ ಹಲವು ಎಂದು,ಆದರೆ ಇಂದು ಬಸವಣ್ಣನವರನ್ನೆ ದೇವರೆಂದು ಹಿಡಿದು ಎಳೆದಾಡುತ್ತಿದ್ದಾರೆ ಎಂದು ಬ್ರಹ್ಮಕುಮಾರಿಸ್ ಓಂ ಶಾಂತಿ ಧಾಮದ ರಾಜಯೋಗಿ ಪ್ರೇಮಣ್ಣನವರು ಮಾತನಾಡಿದರು.

Contact Your\'s Advertisement; 9902492681

ಜಗತ್ತಿನ ೧೪೮ ರಾಷ್ಟ್ರಗಳಲ್ಲಿ ಈಶ್ವರಿ ವಿಶ್ವವಿದ್ಯಾಲಯಗಳಿವೆ,ಲಕ್ಷಾಂತರ ಜನರು ಇದರಡಿಯಲ್ಲಿ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಇಲ್ಲಿಯೂ ಒಂದು ವಾರದ ಕಾರ್ಯಕ್ರಮವಿರುತ್ತದೆ.ಎಲ್ಲರೂ ನಿತ್ಯವು ಒಂದು ವಾರಗಳ ಕಾಲ ಭಾಗವಹಿಸಿ ಶಂಕರನ ಅರಿವನ್ನು ಹೊಂದುವಂತೆ ತಿಳಿಸಿದರು. ಇಂದು ಜಾತಿ ಮತ ಪಂಥಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ,ಆದರೆ ಬ್ರಹ್ಮಕುಮಾರಿಸ್ ಇದೆಲ್ಲವನ್ನು ಅಳಿದು ಶರಣರ ವಾಣಿಯಂತೆ ದೇವನೊಬ್ಬನೆ ಅವನು ಎಲ್ಲರೊಳಗಿದ್ದಾನೆ,ಅವನೆ ಆತ್ಮ ಎಂಬ ಅರಿವನ್ನು ಮೂಡಿಸುತ್ತದೆ.ಯಾವುದೆ ಭೇದ ಭಾವವಿಲ್ಲದೆ ಎಲ್ಲರು ಒಂದು ನಾವೆಲ್ಲ ಬಿಂದು,ಜ್ಯೋತಿ ಸ್ವರೂಪ,ಜಗವೊಂದು ನಾಟಕ ರಂಗ ನಾವೆಲ್ಲರು ಪಾತ್ರಧಾರಿಗಳು ಶಂಕರನೊಬ್ಬ ಸೂತ್ರಧಾರನಾಗಿ ಆಡಿಸುತ್ತಾನೆ.ಆತನು ಆಡಿಸಿದಂತೆ ಆಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿಸ್ ಕಲಬುರಗಿ ಉಪವಲಯ ಮುಖ್ಯಸ್ಥರಾದ ರಾಜಯೋಗಿ ಬಿ.ಕೆ.ವಿಜಯಾ ದೀದಿ ಮಾತನಾಡಿ,ಕಾಮ ಕ್ರೋಧಾದಿ ಪಂಚ ವಿಕಾರಗಳು ನಮ್ಮ ಮನಸ್ಸನ್ನು ಕದಿಯದಂತೆ ಜಾಗೃತರಾಗಿರಲು ಶಿವ ಜ್ಞಾನ ಅವಶ್ಯಕ,ಅಂತಹ ಶಿವಜ್ಞಾನ ನೀಡುವ ಕೆಲಸವನ್ನು ಬ್ರಹ್ಮಕುಮಾರಿಸ್ ಮಾಡುತ್ತದೆ.ಆಂತರಿಕ ಮತ್ತು ಬಾಹ್ಯ ವಿಕಾಸಕ್ಕಾಗಿ ಮಕ್ಕಳು ಸಾಂಸ್ಕೃತಿಕ ಚಟುವಟುಕೆಗಳಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ತಿಳಿಹೇಳಿದರು.ಕ್ಷಣಿಕ ಸುಖದ ಹಿಂದೆ ಬೀಳುವ ಬದಲು ಶಾಸ್ವತ ಸುಖವನ್ನು ಕಲಿಸುವುದು ರಾಜಯೋಗ ಮತ್ತು ಶಿವಯೋಗ ಅದನ್ನು ಇಲ್ಲಿ ಕಲಿಸಲಾಗುತ್ತದೆ.ಎಲ್ಲರೂ ಇದರ ಅರಿವನ್ನು ಹೊಂದಿ ಸುಖ ಸಂತೋಷವನ್ನು ಪಡೆಯುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ ಕೆಂಭಾವಿ,ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕ ಲಕ್ಷ್ಮಣ ಗುತ್ತೇದಾರವರಿಗೆ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಈರ್ವರು ಮಾತನಾಡಿದರು.ನಂತರ ಶ್ರೀ ಖಾಸ್ಗತೇಶ್ವರ ಸಾಂಸ್ಕೃತಿಕ ನೃತ್ಯ ಕಲಾ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಬ್ರಹ್ಮಕುಮಾರಿಸ್ ಕೇಂದ್ರದ ರಾಗಿಣಿ ಅಕ್ಕನವರು ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ, ಬಂದೇನವಾಜ್ ನಾಲತವಾಡ,ನಂದಪ್ಪ ದೊರೆ,ಹಣಮಂತ್ರಾಯ ಉಪ್ಪಾರ,ಸೂಗಯ್ಯ ಹಿಂಡಿ, ಮಹೇಶ ಕುಂಟೋಜಿ,ಬಸವರಾಜ ನ್ಯಾಯವಾದಿ,ಯಲ್ಲಪ್ಪ ಹುಲಕಲ್ ನ್ಯಾಯವಾದಿ,ಮಾಣಿಕ ಸೇಠ,ರಾಜಣ್ಣ ಕಡಕೋಳ,ಪ್ರಕಾಶ ಜೈನ್,ಈಶ್ವರಣ್ಣ ರುಮಾಲಮಠ,ನಿಂಗಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here