ಸುರಪುರ: ಹಿಂದೆ ನಿಮ್ಮ ಹಣ ಬಿದ್ದಿವೆ ಎಂದು ಯಾಮಾರಿಸಿ ಬೈಕ್‌ನ ಟ್ಯಾಂಕ್ ಕವರಲ್ಲಿ ಇಟ್ಟಿದ್ದ ಹಣವನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದಿದೆ.ಗುರುವಾರ ಮದ್ಹ್ಯಾನ ತಾಲೂಕಿನ ಚನ್ನಪಟ್ಟಣ ಗ್ರಾಮದ ರೈತ ಶರಣಪ್ಪ ಕೊರಿ ಎಂಬುವವರೆ ಹಣ ಕಳೆದುಕೊಂಡ ನತದೃಷ್ಟರಾಗಿದ್ದಾರೆ.
ನಗರದ ಕೇನರಾ ಬ್ಯಾಂಕಲ್ಲಿ ಟ್ರ್ಯಾಕ್ಟರ್ ತೆಗೆದುಕೊಳ್ಳಲು ಸಾಲದ ಹಣ ೯೦ ಸಾವಿರ ರೂಪಾಯಿ ಡ್ರಾ ಮಾಡಿಕೊಂಡು,ಹಣದ ಚೀಲವನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಕವರಲ್ಲಿಟ್ಟು ತನ್ನ ಊರಿಗೆ ಹೋಗಲು ಬೈಕ್ ಹತ್ತಿ ಹೊರಟಿದ್ದಾರೆ.ಇವರನ್ನು ಹಿಂಬಾಲಿಸಿದ ಇಬ್ಬರು ಕಳ್ಳರು ಗಾಂಧಿ ವೃತ್ತದಲ್ಲಿ ಪಕ್ಕದಲ್ಲಿ ಬಂದು ನಿಮ್ಮ ಹಣ ಬಿದ್ದಿವೆ ನೋಡಿ ಎಂದಿದ್ದಾರೆ.
ಹಣ ಕಳೆದುಕೊಂಡ ವ್ಯಕ್ತಿಯ ರೋದನೆಯನ್ನು ನೊಡಲಾಗುತ್ತಿಲ್ಲ.ಎಲ್ಲಾ ಸರ್ಕಲ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಅನೇಕ ಬಾರಿ ಮನವಿ ಮಾಡಿದರು ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯತೆ ತೋರುತ್ತಿದ್ದಾರೆ.ಸಿಸಿ ಕ್ಯಾಮರಗಳಿದ್ದರೆ ಕಳ್ಳರನ್ನು ಬೇಗ ಪತ್ತೆ ಮಾಡಲು ಪೊಲೀಸರಿಗೆ ಸಹಾಯವಾಗುತ್ತದೆ.ನಿರ್ಲಕ್ಷ್ಯ ತೋರುವ ನಗರಸಭೆಯ ಅಧಿಕಾರಿಗಳನ್ನೆ ಈ ಘಟನೆಗೆ ಹೊಣೆಗಾರರನ್ನಾಗಿ ಮಾಡಬೇಕಿದೆ – ಮಾಳಪ್ಪ ಕಿರದಳ್ಳಿ ಡಿಎಸ್‌ಎಸ್ ತಾಲೂಕು ಸಂಚಾಲಕ
ಹಿಂದೆ ನೋಡಿದ ಶರಣಪ್ಪ ನನ್ನ ಹಣವಲ್ಲ ಎಂದರು ಕೇಳ ಕಳ್ಳರು ನಿಮ್ಮವೆ ಬಿದ್ದಿವೆ ಎಂದಾಗ ಬೈಕ್ ಮೇಲಿಂದ ಕೆಳಗೆ ಬಿದ್ದ ಹತ್ತು ರೂಪಾಯಿ ಐವತ್ತು ರೂಪಾಯಿಯ ನೊಟುಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಗ,ಬೈಕ್ ಕವರಲ್ಲಿದ್ದ ಹಣದ ಚೀಲವನ್ನು ತೆಗೆದುಕೊಂಡು ಓಡಿದ್ದಾರೆ.ಬೈಕ್ ನಿಲ್ಲಿಸಿ ಹಿಂಬಾಲಿಸುವ ಪ್ರಯತ್ನ ಮಾಡಿದರು ಸಿಗದ ಕಳ್ಳರು ಓಡಿ ಹೋಗಿದ್ದಾರೆ.ತನ್ನ ಹಣವನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.