ಕಲಬುರಗಿ: ದೆಹಲಿ ಹಿಂಸಾಚಾರ ಮತ್ತು ಸಿಎಎ. ಸಿಎಎ.ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸಭೆ ಕರೆದಿದ್ದು, ಸಭೆಯ ನಂತರ ಡೋರ್ ಟು ಡೋರ್ ಅಭಿಯಾನ ನಡೆಸಲಾಗುವುದೆಂದು ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ತಿಳಿಸಿದರು.
ಅವರು ಇಲ್ಲಿನ ಫೀರದೋಸ್ ನಗರ ಬಡಾವಣೆಯಲ್ಲಿ ಫೀರದೋಸ್ ನಗರ ವೇಲ್ಪರ್ ಸೂಸೈಟಿಯ 11ನೇ ವರ್ಷಿಕ ಆಚರಣೆ ಮತ್ತು ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಕ್ಷದ ತೀರ್ಮಾನದಂತೆ ಮುಂದಿನವಾರದಿಂದ ವಿವಾದಿತ ಸಿಎಎ.ಆನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ಧ ಡೋರ್ ಟು ಡೋರ್ ಕ್ಯಾಂಪೇನ್ ನಡೆಸಿ ಮುಂದಿನ ನಡೆಯ ಕುರಿತು ಚುನಾವಣೆ ಮಾದರಿಯಲ್ಲಿ ಜನರಿಗೆ ತಿಳಿಸುವ ಜಾಗೃತಿ ಅಭಿಯಾನ ಮಾಡಲಾಗುವುದು, ಯಾರು ಕೂಡ ಭಯಪಡಬೇಕಾಗಿಲ್ಲ ಎಂದು ಆಶ್ವಾಸನೆ ನೀಡಿ, ಈ ಹೋರಾಟವನ್ನು ಗೆದ್ದೇ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಫಾರಾಜ ಉಲ್ ಇಸ್ಲಾಂ, ವೇಲ್ಪರ್ ಸೂಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್, ಮಾಜಿ ಮಹಾಪೌರರಾದ ಸೈಯದ್ ಅಹ್ಮದ್, ಅದೀಲ್ ಸುಲೇಮಾನಿ ಸೇಠ, ಬಾಬಾ ಖಾನ್, ವಾಹೇದ್ ಅಲಿ ಫಾತೇಕಾನಿ, ಹಮ್ಮಿದ್ ಚೊಂಗೆ, ಅಬ್ದುಲ್ ಮಜಿದ್, ಅಬ್ದುಲ್ ರಜಾಕ್ ಸಾಬ್, ನಿವೃತ ನೌಕರರಾದ ಸೇಕ್ ಚಾಂದ್ ಸೇರಿದಂತೆ ವೇಲ್ಪರ್ ಸೂಸೈಟಿಯ ಸದಸ್ಯರು ಮತ್ತು ಬಡಾವಣೆಯ ನಿವಾಸಿಗಳು ಇದ್ದರು.