ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ “ವಿಜ್ನಾನ ದಿನ” ಆಚರಣೆ

0
93

ಕಲಬುರಗಿ: ಶಹಾಬಾದ ರಸ್ತೆಯಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿಜ್ನಾನ ದಿನ ಆಚರಣೆ ಹಾಗೂ ಶಾಲೆಯ ಆಟದ ಮೈದಾನದ ಗುದ್ದಲಿ ಪೂಜೆಯನ್ನು ಸಿಯುಕೆ ಕುಲಪತಿ ಪೊ.ಎಚ್.ಎಂ.ಮಹೆಶ್ವರಯ್ಯ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳ ಪ್ರಾರ್ಥನೆಯ ಮೂಲಕ “ವಿಜ್ನಾನ ದಿನ” ಆಚರಣೆಯನ್ನು ಪ್ರಾರಂಭಿಸಲಾಯಿತು.

ಪ್ರಸಿದ್ಧ ವಿಜ್ನಾನಿಗಳಾದ ಡಾ.ಸಿ.ವಿ.ರಾಮನ್, ಥಾಮಸ್ ಅಲ್ವ ಎಡಿಸನ್ ಹಾಗೂ ಎ.ಪಿ,ಜೆ.ಅಬ್ದಲ್ ಕಲಾಂರ ಕುರುತು ಮಕ್ಕಳಿಗೆ ವಿವರಿಸಿದರು. ಯಾವ ರೀತಿ ಥಾಮಸ್ ಅಲ್ವ ಎಡಿಸನ್ ಅವರು ೨೦೦೦ ಸಲ ತಮ್ಮ ಪ್ರಯತ್ನದಲ್ಲಿ ಸೋಲನ್ನು ಅನುಭವಿಸಿದರೂ ಮತ್ತೆ ಪ್ರಯತ್ನ ಮಾಡಿ ಸಾಧನೆಯನ್ನು ಮಾಡಿದರೋ ಅದೇ ರೀತಿ ಮಕ್ಕಳು ಕೂಡ ತಮ್ಮ ಪ್ರಯತ್ನವನ್ನು ನಿಲ್ಲಿಸದೆ ತಮ್ಮ ಜೀವನದಲ್ಲಿ ಮುಂದುವರೆಯಬೇಕು ಎಂದು ಮಕ್ಕಳಿಗೆ ಹೇಳಿದರು.

Contact Your\'s Advertisement; 9902492681

ನಂತರ ಶಾಲೆಯ ವಿಜ್ನಾನ ಪ್ರಯೋಗಾಲಯ, ಸಮಾಜ ವಿಜ್ನಾನ ಪ್ರಯೋಗಾಯಲ, ಗಣಿತ ಪ್ರಯೋಗಾಲಯಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚಿಸಿದರು. ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲ ಮಿ. ದೇವಸ್ಸಿಯವರು, ಶಿಕ್ಷಕ ವೃಂದ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here