ಕಲಬುರಗಿಯಲ್ಲಿ ಗೋಡೆಯ ಮೇಲೆ ಪಾಕಿಸ್ತಾನ ಜಿಂದಾಬಾದ್, ಮೋದಿ ವಿರುದ್ಧ ಅವಾಚ್ಯ ಬರಹ ಬಳಕೆ

0
760

ಕಲಬುರಗಿ: ನಗರದ ಹಫ್ತ್ ಗುಂಬಜ್ ಪ್ರದೇಶದ ಬಹೇಮನಿ ಆಸ್ಪತ್ರೆ ಎದುರಿನ ಗೋಡೆಯೊಂದರ ಮೇಲೆ ಕಿಡಿಗೇಡಿಗಳು ಕಪ್ಪು ಆಯಿಲ್ ಬಳಕೆಯಿಂದ ಪಾಕಿಸ್ತಾನ ಜಿಂದಾಬಾದ್ ಮತ್ತು ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಬರೆದಿರುವ ಒಕ್ಕಣಿಕೆ ರಾರಾಜಿಸುತ್ತಿರುವ ಘಟನೆ ನಡೆದಿದೆ.

ಸಂತೋಷ ಚೌಧರಿ ಎಂಬ ವ್ಯಕ್ತಿಯ ಕಚೇರಿಯ ಗೋಡೆಯ ಮೇಲೆ ಬರೆಯಲಾಗಿದ್ದು, ಕಿಡಗೇಡಿಗಳು ನಿನ್ನ ರಾತ್ರಿ ಕೃತ್ಯ ನಡೆಸಿರಬಹುದೆಂದು ಅನುಮನ ವ್ಯಕ್ತವಾಗುತ್ತಿದೆ. ಇಂದು ಬೆಳಿಗ್ಗೆ ಸಂತೋಷ ಅವರ ಸಹೋದರ ಕಚೇರಿ ತೆರೆದು ಸ್ವಚ್ಛಗೊಳಿಸಿ ಕೈತೊಳೆಯುವ ವೇಳೆಯಲ್ಲಿ ಬರಹವನ್ನು ನೋಡಿದ್ದಾರೆ ಎನ್ನಲಾಗಿದೆ.

Contact Your\'s Advertisement; 9902492681

ಅಲ್ಲದೇ ಆಯಿಲ್ ಇಂದ ಬರೆದು ಕಚೇರಿಯ ಚರಂಡಿಯ ಎದುರು ರಬ್ಬರ್ ಸ್ಪಂಚ್ ಮತ್ತು ಬ್ಲಾಕ್ ಆಯಿಲ್ ಬಿದ್ದಿದೆ, ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಬರಹವನ್ನು ನೀರು ಹಾಕಿ ಅಳಿಸಿದ್ದು, ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ ವಹಿಸುತಿದ್ದಾರೆ.

ಸೂಫಿ ಸಂತರ ನೆಲೆವೀಡಾದ ಕಲಬುರಗಿಯ ಶಾಂತಿ ,ಸೌಹಾರ್ದ ವಾತಾವರಣ ಕದಡುವ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಹಚ್ಚಿ ತಕ್ಕ ಶಿಕ್ಷೆ ನೀಡಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here