ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಭಂಡಾರೆ ತೋಟದ ಮನೆಯಲ್ಲಿ ಕರೆಯಲಾಗಿದ್ದ ಕರ್ನಾಟಕ ರಾಜ್ಯ ನೇಕಾರ ಸಮುದಾಯ ಸಂಘಗಳ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಯ್ಕೆಗೊಳಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಎಸ್.ಪಿ. ಸಿ.ಎನ್.ಭಂಡಾರೆ ಮಾತನಾಡಿ ಸಮಾಜ ಏಳ್ಗೆಗಾಗಿ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ನೇಕಾರ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸಲು ಸಮಾಜದ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾ.೨೯ ರಂದು ಆರಾಧ್ಯ ದೈವ ದೇವರ ದಾಸಿಮಯ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು, ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿ ಮಹಾಲಕ್ಷ್ಮೀ ಗಡದ ಹಾಗೂ ಖಜಾಂಚಿಯಾಗಿ ಅಕ್ಕಮಹಾದೇವಿ ನಾಲವಾರ ಅವರನ್ನು ಆಯ್ಕೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಹುನಗುಂದ, ಜಿಲ್ಲಾ ಪ್ರ ಕಾರ್ಯದರ್ಶಿ ಯಲ್ಲಪ್ಪ ಮಾರಪಳ್ಳಿ, ಮಲ್ಲಿಕಾರ್ಜುನ ಚಂಡ್ರಕಿ, ಸೋಮಶೇಖರ, ಚನ್ನಪ್ಪ ಗುಂಡಾನೋರ, ಅಮರಪ್ಪ ಪರಚಂಡಿ, ಸಂಗಪ್ಪ ಸಿರೆಗೋಳ, ಮಲ್ಲಿಕಾರ್ಜುನ ರಾವುತ್, ಬಸವರಾಜ, ಉಷಾ ಪಾಟೀಲ, ಸೂಗಮ್ಮ ಶಿಕ್ಷಕಿ ಹಾಗೂ ಇತರರು ಉಪಸ್ಥಿತರಿದ್ದರು.