ಮಕ್ಕಳು ಗುರುಗಳಿಗೆ ಗೌರವ ಕೊಡುವ ಸಂಸ್ಕೃತಿ ಹೆತ್ತವರು ಕಲಿಸಿ: ರುಮಾಲ

0
241

ಸುರಪುರ: ವಿದ್ಯಾರ್ಥಿಗಳು ಚನ್ನಾಗಿ ಓದಿ ಸಾಧನೆಮಾಡಿ ಜೀವನದಲ್ಲಿ ಮುಂದೆ ಬಂದರೆ ಅದು ಅವರುಗಳು ಗುರುಗಳಿಗೆ ನೀಡುವ ನಿಜವಾದ ವಂದನೆಗಳು ಇಂದಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವಕೊಡುವ ಸಂಸ್ಕೃತಿಯನ್ನು ಮರೆತಿದ್ದಾರೆ ಇದು ನೂವಿನ ಸಂಗತಿಯಾಗಿದೆ ತಮ್ಮ ಜೀವನವನ್ನು ರೂಪಿಸಿದ ಶಿಕ್ಷಕರಿಗೆ ಗೌರವನೀಡಬೇಕೆಂದು ತಾವುಗಳು ತಮ್ಮ ಮಕ್ಕಳಿಗೆ ತಿಳಿಹೇಳಿ ಎಂದು ನಿವೃತ್ತ ಶಿಕ್ಷಕ ಬಸವರಾಜ ರೂಮಾಲ ತಿಳಿಸಿದರು.

ನಗರದ ರಂಗಂಪೇಟೆಯ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ರಂಗಂಪೇಟಯ ೧೯೯೯-೨೦೦೦ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದಿನ ಶಿಕ್ಷಣ ಪದ್ದತಿಯು ಮೌಲ್ಯಗಳನ್ನು ಕಳೆದುಕೊಂಡಿದೆ. ಇಲ್ಲಿ ನೆರೆದಿರುವ ನನ್ನ ವಿದ್ಯಾರ್ಥಿಗಳು ಅನೇಕ ಜನ ಶಿಕ್ಷಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಿರಿ ಸಂತೋಷದಾಯಕ ಸಂಗತಿಯಾಗಿದೆ ಹಾಗೆ ನಿಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿ ನಮ್ಮನ್ನು ಈ ಕಾರ್ಯಕ್ರಮದಲ್ಲಿ ಕರೆಯಿಸಿ ನಮ್ಮ ಹಳೆಯದಿನಗಳನ್ನು ನೆನಪಿಸಿದ್ದಿರಿ ಎಂದು ಸಂಸತಸವ್ಯಕ್ತಪಡಿಸಿದರು.

Contact Your\'s Advertisement; 9902492681

ಇನ್ನೂರ್ವ ನಿವೃತ್ತ ಶಿಕ್ಷಕ ಅಣ್ಣರಾವ ಮಾತನಾಡಿ ನಮ್ಮ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಇತಂಹ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮ ವೃತ್ತಿಜೀವನದ ನೆನಪು ಮಾಡಿದ್ದಿರಿ ಆಗಿನ ಕಾಲದ ಶಿಕ್ಷಕರಿಗೆ ಎಲ್ಲಾ ಮಕ್ಕಳು ಒಂದೆ ಶಿಕ್ಷಕರು ಮತ್ತು ಪಾಠಶಾಲೆಯಲ್ಲಿ ಯಾವೊಬ್ಬರು ಭೆದಭಾವ ಮಾಡದೆ ಶಿಕ್ಷಣವನ್ನು ಕಲಿಸುತ್ತಿದ್ದರು ಮತ್ತು ಅಂದಿನ ದಿನಗಳಲ್ಲಿ ಮಕ್ಕಳುಕೂಡಾ ಶಿಕ್ಷಕರಿಗೆ ಗೌರವನ್ನು ನೀಡಿ ಪಾಠ ಆಲಿಸುತ್ತಿದ್ದರು. ಶಿಕ್ಷಣವು ಮನಷ್ಯನ ಬದುಕು ರೂಪಿಸುವಂತಿತ್ತು ಅಂದು ನಾವುಗಳು ನಿಮ್ಮೊಂದಿಗೆ ಕಠಿಣವಾಗಿ ನಡೆದುಕೊಂಡಿದ್ದರಿಂದ ನಿವುಗಳು ಉತ್ತಮ ಸ್ಥಿತಿಯಲ್ಲಿದ್ದಿರಿ ಇದನ್ನು ನೋಡಿದರೆ ನಮ್ಮೆಲ್ಲಾ ಶಿಕ್ಷಕರಿಗೆ ಹರ್ಷವಾಗುತ್ತದೆ ಎಂದು ಹೇಳಿದರು.

ಶಿಕ್ಷಕರುಗಳಾದ ಸುರೇಶ ಚನ್ನಾಳ, ಗೊಲ್ಲಾಳಪ್ಪ, ಶಬಾನ, ಶೈಲಾಗುಳಿಗಿ, ಪ್ರಭಾಕರ ಮಾತನಾಡಿದರು. ಜನಾರ್ಧನ ಪಾಣಿಭಾತೆ, ಈರಣ್ಣ ಉಕ್ಕಲಿ, ಕಮಲಾಕರ್ ಕುಲ್ಕರ್ಣಿ, ಅಜೀಂ, ಶರಣಪ್ಪ, ಪದ್ಮಾವತಿ, ಸುರೇಶ ಭಾಬು, ವಿಟ್ಟಪ್ಪ ಕುದ್ರಕರ್, ರಘುಬಾಯಿ, ಶರಣಗೌಡ ಪಾಟಿಲ್, ಕಿಷನ್, ಸರೋಜಾ, ಶಾಂತಾ, ಸುಧ, ಮೋಹನಲೀಲಾ, ಸಾವಿತ್ರಿ, ಗುಂಡಮ್ಮ, ರೇಖಾ, ಸಂಗಮ್ಮ, ಬಸವರಾಜ ಉಕ್ಕಲಿ ವೇದಿಕೆಯಲ್ಲಿದ್ದರು. ವಿನೊದ ಡೊಳ್ಳೆ, ಮೂರ್ತಿ ಹಳಿಜೊಳ, ಮುರಳಿ ಅಂಬುರೆ , ತುಳಸಿರಾಮ್ ಅಂಬುರೆ, ಅಮರೇಶ್ವರ ಕುಂಬಾರ, ಶನ್ನು ಸಂಗತ್ರಾಸ್, ಸತೀಶ್ ಬಾಸುತ್ಕರ್, ನಾಗರಾಜ, ಆನಂದ, ಬಸವರಾಜ, ಹನುಮಯ್ಯ ಕಡೇಚೂರ್, ಶಿವು ಕೊಡೆಕಲ್, ವೀರೇಶ ಪತ್ತಾರ್, ವೆಂಕಟೇಶ ಆಲ್ದರ್ತಿ, ಶಿವಶರಣಯ್ಯ, ಗೀತಾ ಕಡೇಚೂರ್, ಪ್ರಿಯದರ್ಶಿನಿ, ವೈಶಾಲಿ, ಅನುಶಾ, ಸುವರ್ಣ ಪತ್ತಾರ, ಅಮ್ರುತಾ, ಪ್ರಮಲತಾ, ಲಕ್ಷ್ಮಿ, ಶಾರದಾ ಇನ್ನಿತರರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here