೩೭೧ಜೆ ಮುಂಬಡ್ತಿ ಮತ್ತು ನೇಮಕಾತಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ

0
1153

ಕಲಬುರಗಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ೩೭೧ಜೇ ಮೀಸಲಾತಿಯಡಿ ನೇಮಕಾತಿ, ಮುಂಬಡ್ತಿ ಮತು ಖಾಲಿ ಹುದ್ದೆ ಭರ್ತಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ ೭ ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ಕರೆಯಲಾಗಿದ್ದು, ಈ ಕುರಿತು ನೌಕರ ಬಾಂಧವರು ತಮ್ಮ ಇಲಾಖೆ, ವೃಂದವಾರು ೩೭೧ಜೆ ಅನುಷ್ಠಾನದಲ್ಲಿ ಲೋಪದೋಷಗಳ ಬಗ್ಗೆ ಅಭಿಪ್ರಾಯ, ಸಲಹೆಗಳನ್ನು ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಅವರು ಮನವಿ ಮಾಡಿದಾರೆ.

ಜಿಲ್ಲೆಯ ನೌಕರ ಬಾಂಧವರು ಇಲಾಖಾ-ವೃಂದವಾರು ಸೂಕ್ತ ದಾಖಲೆಗಳ ಮಾಹಿತಿಯನ್ನು ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ೩೭೧ (ಜೆ) ಸಂಚಾಲಕರಾಗಿರುವ ಶಿವಾನಂದ ಸ್ಥಾವರಮಠ-೯೯೮೦೨೦೩೪೩೫ ಅವರಿಗೆ ಮತ್ತು ಉಳಿದ ಜಿಲ್ಲೆಗಳ ನೌಕರರು ತಮ್ಮ ಜಿಲ್ಲಾಧ್ಯಕ್ಷರಿಗೆ ಮಾರ್ಚ್ ೫ರ ಸಂಜೆ ೫.೩೦ ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

೩೭೧ಜೆ ಅಡಿ ಈ ಭಾಗದ ನೌಕರರಿಗೆ ಮುಂಬಡ್ತಿ ಮತ್ತು ನೇಮಕಾತಿ ಸಂದರ್ಭದಲ್ಲಿ ಆಗುತ್ತಿರುವ ಅನ್ಯಾಯ ಮತ್ತು ಕಾಯ್ದೆಯ ಲೋಪದೋಷ ಸರಿಪಡಿಸುವಂತೆ ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ನೌಕರರ ಸಂಘದ ನಿಯೋಗವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ನೌಕರರ ಸಂಘದ ಪ್ರತಿನಿಧಿಯೊಂದಿಗೆ ಸಭೆ ನಡೆಸಿ ಲೋಪದೋಷ ಸರಿಪಡಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here