ಸುರಪುರ: ಕಳೆದ ಫೆಬ್ರವರಿ ೮ ರಿಂದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದ ದಿ. ರಾಜಾ ಶ್ರೀರಾಮ ನಾಯಕ ಇವರ ಸ್ಮರ್ಣಾರ್ಥವಾಗಿ ನಡೆಸಲಾದ ಆರ್.ಕೆ.ಎನ್ ಟ್ರೋಫಿ ಕ್ರಿಕೇಟ್ ಟೂರ್ನಿಯ ಫೈನಲ್ ಪಂದ್ಯವನ್ನು ಕಿಂಗ್ಸ್ ಎಲೆವನ್ ಸುರಪುರ ತಂಡ ಜಯಗಳಿಸಿತು. ಎದುರಾಳಿಯಾಗಿದ್ದ ಅಲ್-ಅಮೀನ್ ಬಸವನ ಬಾಗೇವಾಡಿ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ ಇಪ್ಪತ್ತು ಓವರ್‌ಗಳ ಪಂದ್ಯದಲ್ಲಿ ಕೇವಲ ೧೪೮ ರನ್ ಗಳಿಸಿತು.ಇದನ್ನು ಬೆನ್ನತ್ತಿದ ಕಿಂಗ್ಸ್ ಎಲೆವನ್ ಸುರಪುರ ತಂಡ ಇನ್ನು ಎರಡು ಓವರ್‌ಗಳು ಬಾಕಿ ಇರುವಾಗಲೆ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು.
ನಂತರ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅಧ್ಯಕ್ಷತೆ ವಹಿಸಿದ್ದರು.ಪ್ರಥಮ ಬಹುಮಾನ ೧.೫೦ ಲಕ್ಷ ರೂಪಾಯಿ ನೀಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗು ದ್ವೀತಿಯ ಬಹುಮಾನ ೭೫ ಸಾವಿರ ರೂಪಾಯಿಗಳ ಬಹುಮಾನ ನೀಡಿದ ಅಪೇಕ್ಸ್ ಬ್ಯಾಂಕ್ ರಾಜ್ಯ ನಿರ್ದೇಶಕ ವಿಠ್ಠಲ್ ಯಾದವ್,ವೆಂಕೋಬ ಯಾದವ್ ಹಾಗು ಮುಖಂಡರಾದ ಸೂಲಪ್ಪ ಕಮತಗಿ,ವೆಂಕಟೇಶ ಹೊಸ್ಮನಿ,ಅಬ್ದುಲ ಗಫೂರ ನಗನೂರಿ,ಬಸವರಾಜ ವಾರದ್,ಮಲ್ಲಣ್ಣ ಸಾಹು ಮುಧೋಳ,ಕಾಲೇಜಿನ ಪ್ರಾಚಾರ್ಯ ಎಸ್.ಹೆಚ್.ಹೊಸ್ಮನಿ,ನಿಂಗಣ್ಣ ಬಾದ್ಯಾಪುರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಪ್ರಕಾಶ ಗುತ್ತೇದಾರ,ಸೋಮನಾಥ ಡೊಣ್ಣಿಗೇರಾ,ರಾಜಾ ಪಾಮನಾಯಕ,ರಾಜಾ ರೂಪಕುಮಾರ ನಾಯಕ,ರಾಜಾ ವೇಣುಗೋಪಾಲ ನಾಯಕ ಉಪಸ್ಥಿತರಿದ್ದು ವಿನ್ನರ್ ಮತ್ತು ರನ್ನರ್ ಅಪ್ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಿದರು.
ರಾಜಾ ಕುಮಾರ ನಾಯಕ,ರಾಜಾ ವಿಜಯಕುಮಾರ ನಾಯಕ,ರಾಜಾ ಸುಶಾಂತ ಕುಮಾರ ನಾಯಕ, ಸಂಪತ್ ಕುಮಾರ ಚೀನಿ,ಮೂಕಪ್ಪ ಬಿಚ್ಚದಕೇರಾ,ಕೆ.ಸಿದ್ದರಾಜ್,ಮಾನಪ್ಪ ಕಲಬುರ್ಗಿ,ವೆಂಕಟೇಶ ಸೂರ್ಯವಂಶಿ,ಗೋವಿಂದ ಮಾಳದಕರ್,ವೆಂಕಟೇಶ ದಳವಾಯಿ ಸೇರಿದಂತೆ ಸಾವಿರಾರು ಜನ ಫೈನ್ ಪಂದ್ಯ ನೋಡಲು ನೆರೆದಿದ್ದರು.