ಸವಿತಾ ಸಮಾಜದ ಅಭಿವೃಧ್ಧಿಗೆ ಎಲ್ಲರೂ ಹೊರಾಟಕ್ಕೆ ಮುಂದಾಗಿ: ರಾಜ್ಯಾಧ್ಯಕ್ಷ ಸಂಪತ್ ಕುಮಾರ

0
95

ಸುರಪುರ: ಇಂದಿನ ಪೈಪೋಟಿ ಯುಗದಲ್ಲಿ ನಾವೆಲ್ಲರು ಬದುಕುತ್ತಿದ್ದು ಸರಕಾರಗಳು ನಮ್ಮ ಸಮುದಾಯದ ಅಭಿವೃಧ್ಧಿಯನ್ನು ನಿರ್ಲಕ್ಷಿಸುತ್ತಿವೆ.ಆದ್ದರಿಂದ ಎಲ್ಲ ನಮ್ಮ ಸವಿತಾ ಬಂಧುಗಳು ಸಂಘಟಿತರಾಗುವಂತೆ ಸ್ಪೀನ್ ಸಂಸ್ಥೆ ಅಧ್ಯಕ್ಷ ನಾಮದೇವ ನಾಗರಾಜ ಕರೆ ನೀಡಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಸವಿತಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ಇಂದು ತಾವೆಲ್ಲರು ಹರ್ಷದಿಂದ ಸಮಾವೇಶ ನಡೆಸುತ್ತಿರುವಿರಿ.ಇದೇ ಒಗ್ಗಟ್ಟು ಸಮಾಜದ ಏಳಿಗೆಗು ಇರಲಿ.ನಾವೆಲ್ಲರು ಒಂದಾಗಿ ಸರಕಾರಗಳಿಗೆ ನಮಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸೋಣ,ನಮ್ಮ ಕಸುಬಿನ ಬಗ್ಗೆ ನಮಗೆ ಹೆಮ್ಮೆಯಿರಲಿ.ಪ್ರತಿಯೊಬ್ಬರು ನಿಮ್ಮ ಮಕ್ಕಳಿಗೆ ಮೊದಲು ಶಿಕ್ಷಣವನ್ನು ಕೊಡಿಸಿ ನಂತರ ನಮ್ಮ ಉದ್ಯೋಗಕ್ಕೆ ಆದ್ಯತೆ ಕೊಡಿ,ಕೇವಲ ಉದ್ಯೋಗಕ್ಕಾಗಿ ಜೋತು ಬಿದ್ದು ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಬೇಡಿ ಎಂದರು.

Contact Your\'s Advertisement; 9902492681

ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಹಯ್ಯ ಮಾತನಾಡಿ,ಇಂದು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯವಿದೆ.ಮೊದಲು ಶಿಕ್ಷಣ ನಂತರ ಉದ್ಯೋಗ ದೊರೆಯಲಿದೆ.ನಮ್ಮ ಕಸುಬಿನೊಂದಿಗೆ ಇತರೆ ಕೆಲಸಗಳನ್ನು ಪಡೆಯುವತ್ತ ಯೋಚನೆ ಇರಲಿ.ಅಲ್ಲದೆ ನಮ್ಮ ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರು ನಿಮ್ಮಿಂದಾಗುವ ಸಹಾಯ ಸಹಕಾರ ನೀಡುವ ಮೂಲಕ ನಮ್ಮವರ ಬೆಳವಣಿಗೆಗೆ ಸಹಕರಿಸುವಂತೆ ತಿಳಿಸಿದರು.

ಸ್ಥಳಿಯ ಸವಿತಾ ಸಮಾಜದ ಮುಖಂಡ ಬಾಲರಾಜ ಮಾತನಾಡಿ,ಇಂದು ನಾವೆಲ್ಲರು ಒಗ್ಗಟ್ಟಾಗಿ ಸರಕಾರಗಳಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಬೇಕಿದೆ.ಅದಕ್ಕಾಗಿ ಸಂಘಟನೆಯನ್ನು ಬಲಪಡಿಸೋಣ.ಜೊತೆಗೆ ನಮ್ಮ ಸಮಾಜದ ಯಾವುದೆ ವ್ಯಕ್ತಿಗೆ ಅನ್ಯಾಯವಾದಲ್ಲಿ ಅದರ ವಿರುಧ್ಧ ಪ್ರತಿಭಟಿಸೋಣ ಎಂದರು.

ಕಾರ್ಯಕ್ರಮ ಆರಂಭಕ್ಕು ಮುನ್ನ ಸಮಾಜದ ರಾಜ್ಯಾಧ್ಯಕ್ಷ ಎನ್.ಸಂಪತ್ ಕುಮಾರ ಹಾಗು ಇತರೆ ಮುಖಂಡರನ್ನು ತೆರೆದ ವಾಹನದಲ್ಲಿ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು.ಇದೇ ಸಂದರ್ಭದಲ್ಲಿ ನಗರದ ಹಳೆ ಸರಕಾರಿ ಆಸ್ಪತ್ರೆ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಮರೆಪ್ಪ ಚಿನ್ನಾಕಾರರ ನೆಮ್ಮದಿ ಹೆರ್ ಸಲೂನ್ ಕ್ಷೌರ ಕುಟೀರವನ್ನು ಎಲ್ಲಾ ಗಣ್ಯರು ಅದ್ಧೂರಿಯಾಗಿ ಉದ್ಘಾಟಿಸಿದರು.ನಂತರ ನಡೆದ ಸಮಾವೇಶವನ್ನು ರಾಜ್ಯಾಧ್ಯಕ್ಷ ಎನ್.ಸಂಪತ್ ಕುಮಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ರಾಜ್ಯ ಮುಖಂಡರಾದ ಮಾವಳ್ಳಿ ಕೃಷ್ಣಾ,ಆರ್.ನಾರಾಯಣ,ಆನಂದ ಕುಮಾರ,ಛಲಪತಿ ಎನ್,ಜ್ಯೋತಿ ಕುಮಾರ,ತಿಪ್ಪಣ್ಣ,ಬಾಲು ಎಮ್.ಜಿ,ಡಾ: ಮುರಳಿಧರ,ರವಿಕುಮಾರ,ರಾಘವೇಂದ್ರ ಇಟಗಿ,ರಾಮು ಹೆಚ್.ಡಿ,ಮಾವಳ್ಳಿ ಶ್ರೀನಿವಾಸ,ನಿಜಾಮ್ ಅಹ್ಮದ್ ಉಸ್ತಾದ,ಸೂರ್ಯಕಾಂತ ಚಿನ್ನಾಕಾರ,ಪ್ರಭು, ಸೇರಿದಂತೆ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಸ್ಥಳಿಯ ಮುಖಂಡರುಗಳಿದ್ದರು.ರಾಮಚಂದ್ರ ಮುಂದಿನಮನಿ ಅಧ್ಯಕ್ಷತೆ ವಹಿಸಿದ್ದರು.ಬಸವರಾಜ ಗೋಗಿ ನಿರೂಪಿಸಿದರು,ವಿರೇಶ ಹಡಪದ ಸ್ವಾಗತಿಸಿದರು,ಗೋಪಾಲ ಚಿನ್ನಾಕಾರ ವಂದಿಸಿದರು.ಕುಮಾರಿ ನಿರಿಕ್ಷಾ ನೃತ್ಯ ಮಾಡಿದರೆ,ಗುರುಪಾದ ಹುಣಸಗಿ ತಂಡದಿಂದ ಸಂಗೀತ ಕಾರ್ಯಕ್ರಮ ನೆರವೇರಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here