ಗೆಳೆಯರ ಬಳಗದಿಂದ ಪಂಡಿತ ಪುಟ್ಟರಾಜ ಗವಾಯಿ ಜನ್ಮದಿನ

0
101

ಕಲಬುರಗಿ: ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮದಿನದಂಗವಾಗಿ ಇಲ್ಲಿನ ಗೆಳೆಯರ ಬಳಗದ ವತಿಯಿಂದ ನಗರದ ಅಂಧ ಬಾಲಕರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬುಧವಾರದಂದು ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರಿ ಮಾಶಾಳ, ಸಿದ್ಧಲಿಂಗ ಶಾಸ್ತ್ರಿ ನರೋಣಾ, ಶಿವಾನಂದ ಗವಾಯಿ ಗೌಡಗಾಂವ, ವಿಶ್ವನಾಥ ಹೇರೂರ, ಲೋಕನಾಥ ಚಾಂಗಲೇರಾ ಹಳ್ಳಿಖೇಡ, ಬೇಬಾವತಿ ಕಳಸೆ ಅವರು ನಡೆಸಿಕೊಟ್ಟ ವಿಶೇಷ ರೀತಿಯ ಸಂಗೀತ-ವಾದ್ಯಗಳ ನೀನಾದ ಮುಗಿಲು ಮುಟ್ಟಿತು. ಬಿಸಿಲನ್ನೂ ಲೆಕ್ಕಿಸದೇ ಭಾಗವಹಿಸಿದ್ದ ಅಂಧ ವಿದ್ಯಾರ್ಥಿಗಳು, ಪ್ರೇಕ್ಷಕರು ಸಂಗೀತ ನಾದಕ್ಕೆ ಮನಸೋತು, ಕಲಾವಿದರ ರಾಗಕ್ಕೆ ತಾಳ ಹಾಕಿ, ತಲೆದೂಗಿದರು.

ಸಮಾರಂಭ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಮಾತನಾಡಿ, ನಾಡಿನ ಲಕ್ಷಾಂತರ ಅಂಧರ ಬಾಳಿಗೆ ಬೆಳಕಾಗಿ ಸಂಗೀತ ಶಕ್ತಿಯ ನಾದದ ಸುಧೆಯನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳಂತೆ ಇಂದಿನ ಯುವ ಜನತೆ ಶ್ರೇಷ್ಠ ಸಾಧಕರಾಗಿ ಎಂದು ಕಿವಿ ಮಾತು ಹೇಳಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಇಂದು ಎಲ್ಲ ರಂಗಗಳಲ್ಲೂ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಬುದ್ಧಿ ವಿಕಾಸಗೊಂಡರೂ ಭಾವನೆಗಳು ಬೆರೆಯುತ್ತಿಲ್ಲ. ಸಮಷ್ಟಿ ಹಿತಕಾಪಾಡುವುದಕ್ಕಿಂತ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ ಕಲುಷಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳು ಸೇರಿದಂತೆ ದಾರ್ಶನಿಕರ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ವಿಕಲಚೇತನರು ತಮ್ಮಲ್ಲಿ ಇರುವ ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಪಂಡಿತ ಪುಟ್ಟರಾಜ ಗವಾಯಿಗಳು ಈ ಶತಮಾನದ ಅದ್ಭುತ ಸೃಷ್ಠಿಯಾಗಿದ್ದಾರೆ. ಅಂಥ ಶ್ರೇಷ್ಠ ಸಂತನನ್ನು ಪ್ರೇರಣೆಯನ್ನಾಗಿಸಿಕೊಳ್ಳಬೇಕು.  – ವಿಜಯಕುಮಾರ ತೇಎಗಲತಿಪ್ಪಿ, ಸಾಂಸ್ಕೃತಿಕ ಸಂಘಟಕ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹಾಗೂ ಸಂಘಟಕ ಹಣಮಂತರಾಯ ಅಟ್ಟೂರ ಮಾತನಾಡಿ, ಕಣ್ಣಿದ್ದವರು ಮಾಡದ ಸಾಧನೆ ಕಣ್ಣಿಲ್ಲದ ಪಂಡಿತ ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಭಗವಂತನು ಅವರನ್ನು ವಿಶೇಷವಾಗಿ ಸೃಷ್ಠಿ ಮಾಡಿ ಅವರ ಸಾಧನೆಗೆ ಎಲ್ಲರೂ ಮಾರು ಹೋಗುವಂತೆ ಮಾಡಿದ್ದಾನೆ. ಅಂಧ ಮತ್ತು ಅನಾಥ ಮಕ್ಕಳ ಪಾಲಿಗೆ ದೇವರಾಗಿರುವ ಪಂಡಿತ ಪುಟ್ಟರಾಜ ಗವಾಯಿಗಳು, ಸಾಧನೆಯ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂಥ ವಿಷಯವಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಹುಟ್ಟು ಕುರುಡರಾಗಿದ್ದುಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಬೀದರಿನ ಲೋಕನಾಥ ಚಾಂಗಲೇರಾ, ಮಾರುತಿ ರಾವಣಗಾಂವ, ಬೇಬಾವತಿ ಕಳಸೆ, ಸೂರ್ಯಕಾಂತ ಪೊಲೀಸ್ ಪಾಟೀಲ ಉಪಳಾಂವ, ಸಂಗೀತ ನಿರ್ದೇಶಕ ಕಲಬುರಗಿಯ ಅಮರಪ್ರಿಯ ಹಿರೇಮಠ ರವರನ್ನು ವಿಶೇವಾಗಿ ಸತ್ಕರಿಸಲಾಯಿತು.

ಗೆಳೆಯರ ಬಳಗದ ಶರಣರಾಜ್ ಛಪ್ಪರಬಂದಿ, ರವಿಕುಮಾರ ಶಹಾಪುರಕರ್, ಶಿವಾನಂದ ಮಠಪತಿ, ಪ್ರಮುಖರಾದ ರುಕ್ಮಣ್ಣ ಹತಗುಂದಿ, ವಿದ್ಯಾಸಾಗರ ದೇಶಮುಖ, ಕಿರಣ ಗೋಡಬಾಲೆ, ರಾಜು ಹೆಬ್ಬಾಳ, ಮಲ್ಕಾರಿ ಪೂಜಾರಿ, ಮಹೇಶ, ಭರತೇಶ ಶೀಲವಂತರ್, ಶಿಕ್ಷಕರಾದ ನೀಲಾಂಬಿಕಾ ದಂಡಪ್ಪಗೋಳ, ಜ್ಯೋತಿ ಶಖಾಪುರ, ಸೀತಾ ಚೂರಿ, ಮಹೇಶ ತಿರಣಿ ವೇದಿಕೆ ಮೇಲಿದ್ದರು.

ಅಂಧ ಬಾಲಕರಿಗೆ ಗೆಳೆಯರ ಬಳಗದ ವತಿಯಿಂದ ಬ್ಯಾಟ್ ಮತ್ತು ಬಾಲ್‌ಗಳನ್ನು ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here