ಕಲಬುರಗಿ: ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಇದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿ ಕಾಳಜಿ ವಹಿಸುವಲ್ಲಿ ಸಂಪೂರ್ಣವಿಫಲವಾಗಿದೆ. ಅಲ್ಪಸಂಖ್ಯಾತರ ವಿರೋಧಿ ಬಜೆಟ್ ಎಂದು ಸಾಬೀತು ಪಡಿಸಿದೆ ಎಂದು ನಯಾ ಸವೇರಾ, ಮುಸ್ಲಿಂ ಪಟೇಲ್ ಮಂಚ್ ಸದಸ್ಯ ಮೋದಿನ್ ಪಟೇಲ್ ಅಣಬಿ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.