ಮೈಸೂರಿನ: ಟಿ.ಕೆ.ಬಡಾವಣೆ 4 ನೇ ಹಂತದಲ್ಲಿರುವ ಶ್ರೀಮಹಾಗಣ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದುರ್ಗಾದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ತಡರಾತ್ರಿ ಕಬ್ಬಿಣದ ರಾಡ್ ನಿಂದ ಬಾಗಿಲ ಬೀಗ ಹೊಡೆದು ಒಳ ನುಗ್ಗಿ, ದೇವಸ್ಥಾನದ ಎರಡು ಹುಂಡಿಗಳಲ್ಲಿದ್ದ 30 ಸಾವಿರಕ್ಕೂ ಹೆಚ್ಚು ನಗದು ದೋಚಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಈ ದೇವಸ್ಥಾನದಲ್ಲಿ ಮೂರನೇ ಬಾರಿಗೆ ಕಳ್ಳತನ ನಡೆದಿರೋದು ಆಘಾತಕಾರಿ ವಿಷಯ. ಸ್ಥಳಕ್ಕೆ ಸರಸ್ಪತಿಪುರಂ ಪೊಲೀಸರು ಆಗಮಿಸಿ ಪರಿಶೀಲನೆ ನಡೆದಿದ್ದು, ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.