ಸುರಪುರ: ಪುಸ್ತಕಗಳನ್ನು ಅಬ್ಯಾಸಿಸುವುದರಿಂದ ಜ್ಞಾನಾರ್ಜನೆ ವಿಕಾಸವಾಗುತ್ತದೆ ಕಾರಣ ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಬ್ಯಾಸಿಸಬೇಕು ಎಂದು ಹಿರಿಯ ಸಾಹಿತಿ ಎ. ಕೃಷ್ಣ ಸುರಪುರ ಹೆಳಿದರು.
ಸುರಪುರ ಪಟ್ಟಣದ ಅವರ ನಿವಾಸದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ಸಾಹಿತಿಗಳಿಂದ ಪುಸ್ತಕ ಸಂಗ್ರಹಣೆಗಾಗಿ ಹಮ್ಮಿಕೊಂಡ್ಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಪುಸ್ತಕಗಳ ಪ್ರಕಟಣೆ ಇಂದು ಹೆಚ್ಚ್ಚಾಗುತ್ತಿದ್ದು ಓದುಗರ ಸಂಖ್ಯೆ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ದಶಮಾನೋತ್ಸವ ನಿಮಿತ್ಯ ಪ್ರಾರಂಭಿಸುತ್ತಿರುವ ಸಾಹಿತ್ಯ ಮತ್ತು ಸಂಶೋಧನಾ ಗ್ರಂಥಾಲಯಕ್ಕೆ ಈ ಸಂದರ್ಭದಲ್ಲಿ 1000 ಪುಸ್ತಕಗಳನ್ನು ಉಚಿತ ಕಾಣಿಕೆಯಾಗಿ ಕೊಟ್ಟರು.
ಈ ಸಂದರ್ಭದಲ್ಲಿ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ನಾಡಿನ ತುಂಬಾ ಹಿರಿಯ-ಕಿರಿಯ ಸಾಹಿತಿಗಳ ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದು, ಬರುವ ದಿನಗಳಲ್ಲಿ ಕನ್ನೆಳ್ಳಿ ಗ್ರಾಮದಲ್ಲಿ ಪ್ರತಿಷ್ಠಾನದ ದಶಮಾನೋತ್ಸವದ ಸವಿನೆನಪಿನಲ್ಲಿ ಗ್ರಂಥಾಲಯ ಪ್ರಾರಂಭಿಸುತ್ತಿದ್ದು ಒಂದು ಲಕ್ಷ ಪುಸ್ತಕಗಳನ್ನು ಸಂಗ್ರಹಿಸುವ ಯೋಜನೆ ಇದೆ. ಅದಕ್ಕೆ ಪೂರಕವಾಗಿ ಈಗಾಗಲೆ 10,000 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ ಬರುವ ದಿನಗಳಲ್ಲಿ ಪುಸ್ತಕ ಸಂಗ್ರಹ ಅಭಿಯಾನ ಹಮ್ಮಿಕೊಂಡು ಪುಸ್ತಕಗಳನ್ನು ಸಂಗ್ರಹಿಸಿ ಮಾದರಿ ಗ್ರಂಥಾಲಯ ಮಾಡುವ ಬಹುದೊಡ್ಡ ಯೋಜನೆ ನಮ್ಮ ಪ್ರತಿಷ್ಠಾನದಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ, ಶಿವಶರಣಪ್ಪ ಹೆಡಿಗಿನಾಳ ಮಾತನಾಡಿದರು, ಪ್ರಮುಖರಾದ ಅಮರೇಶ ಕುಂಬಾರ, ಮೌನೇಶ ಐನಾಪೂರ ಸೇರಿದಂತೆ ಇತರರಿದ್ದರು. ಪರಶುರಾಮ ಚಾಂದಕೋಟಿ ನಿರೂಪಿಸಿದರು, ಮಲ್ಲು ಸಾತಿಹಾಳ ಸ್ವಾಗತಿಸಿದರು, ಬಸವರಾಜ ಚನ್ನಪಟ್ಟಣ ವಂದಿಸಿದರು.