ಕಲಬುರಗಿ : ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರಾದ ಡಾ.ಸಿದ್ಧಲಿಂಗರೆಡ್ಡಿ ಬರೆದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿ.ಎ.೪ನೇ ಸೆಮಿಸ್ಟರ ಮತ್ತು ಬಿ.ಕಾಂ. ೩ನೇ ಸೆಮಿಸ್ಟರ ವಿದ್ಯಾರ್ಥಿಗಳಿಗಾಗಿ ’ಹಣ ಮತ್ತು ಬ್ಯಾಂಕಿಂಗ್ ಅರ್ಥಶಾಸ್ತ್ರ’ ಪಠ್ಯ ಪುಸ್ತಕವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣಬಸವ ವಿವಿಯ ಎಂ.ಬಿ.ಎ.ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಚ್.ಹೊನ್ನಳ್ಳಿಯವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ, ಗೂಗಲ್ ಮತ್ತಿತರ ಮೂಲಗಳಿಂದ ವಿಷಯಗಳನ್ನು ಪಡೆದು ಓದುವ ಸಮಯದಲ್ಲಿ ಅರ್ಥಶಾಸ್ತ್ರದಲ್ಲಿ ಅದರಲ್ಲೂ ಕನ್ನಡದಲ್ಲಿ ಬರೆದಿರುವುದು ಶ್ಲಾಘನೀಯವಾಗಿದೆ. ಪೂಜ್ಯ ಡಾ.ಅಪ್ಪಾಜೀಯವರು ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಪುಸ್ತಕಗಳನ್ನು ಓದುಗಿಸಿದ್ದಾರೆ ಮತ್ತು ಬರೆಯಲು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದರು. ಬರೆಯುವ ಮತ್ತು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಸಿದ್ದಮ್ಮ ಗುಡೇದ ಮಾತನಾಡಿ, ಅರ್ಥಶಾಸ್ತ್ರ ಕಠಿಣ ವಿಷಯ, ಅದು ಬೇಗ ಅರ್ಥವಾಗದ ವಿಷಯ ಅದನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ಪುಸ್ತಕ ಬರೆದಿರುವುದು ಹೆಮ್ಮೆ ಪಡುವಂತಹದು ಎಂದರು. ಚಿತ್ರಕಲಾ ವಿಭಾಗದ ಮುಖ್ಯಸ್ಥರಾದ ಡಾ. ಶಾಂತಲಾ ನಿಷ್ಠಿ ಮಾತನಾಡಿ, ವಿದ್ಯಾರ್ಥಿಗಳು ಬರೆಯುವುದನ್ನೂ ರೂಢಿಸಿಕೊಳ್ಳಿ, ಅದರಲ್ಲೂ ಲೇಖನಗಳನ್ನು ಬರೆಯಬೇಕೆಂದು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀಯವರು ಪುಸ್ತಕಗಳ ಪ್ರೇಮಿಯಾಗಿದ್ದು, ವಿದ್ಯಾರ್ಥಿಗಳು ಓದಲೆಂದೆ ಲಕ್ಷ ಲಕ್ಷ ಹಣ ಖರ್ಚು ಮಾಡಿ ಪುಸ್ತಕಗಳನ್ನು ಕೊಟ್ಟಿದ್ದಾರೆ. ಬೇರೆ ಶಾಲಾ ಕಾಲೇಜುಗಳಲ್ಲಿ ಸಿಗದ ಪುಸ್ತಕಗಳು ನಮ್ಮ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಸಿಗುತ್ತವೆ. ಪೂಜ್ಯ ಅಪ್ಪಾಜೀಯವರು ಬರವಣಿಗೆಗೆ ಹೆಚ್ಚು ಒತ್ತು ನೀಡುತ್ತಾರೆ. ಅದರಿಂದಾಗಿಯೇ ಪುಸ್ತಕ ಹೊರಬರುತ್ತಿವೆ. ಮಹಾವಿದ್ಯಾಲಯದ ಉಪನ್ಯಾಸಕರು ಪ್ರತಿವರ್ಷ ಪುಸ್ತಕಗಳನ್ನು ಹೊರತರುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರೇ ಕನ್ನಡ ವಿಷಯದಲ್ಲಿ ಪಠ್ಯ ಪುಸ್ತಕಗಳನ್ನು ಬರೆದು ಬಿಡುಗಡೆಗೊಳಿಸುತ್ತಿದ್ದಾರೆಂದು ತಿಳಿಸಿದರು.
ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಶಾಂತಲಾ ನಿಷ್ಠಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಸಿದ್ಧಮ್ಮ ಗುಡೇದ, ಲೇಖಕ ಡಾ.ಸಿದ್ಧಲಿಂಗರೆಡ್ಡಿ ವೇದಿಕೆಯಲ್ಲಿದ್ದರು. ಡಾ.ಸಿದ್ಧಲಿಂಗರೆಡ್ಡಿ ಸ್ವಾಗತಿಸಿದರು, ಡಾ. ಪುಟ್ಟಮಣಿ ದೇವಿದಾಸ ಲೇಖಕರ ಪರಿಚಯ ಮಾಡಿದರು, ಕು. ಭಾಗ್ಯಶ್ರೀ ಪಾಟೀಲ ಪುಸ್ತಕ ಪರಿಚಯ ಮಾಡಿದರೆ, ಕು.ಪ್ರಿಯಾಂಕಾ ಗಾಜರೆ ನಿರೂಪಿಸಿದರು, ಕು. ಪೂಜಾ ಡೋಮನಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಇಂದಿರಾ ಶೇಟಕಾರ, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಡಾ.ಎನ್.ಎಸ್.ಹೂಗಾರ, ಡಾ.ಸೀಮಾ ಪಾಟೀಲ, ರೇವಯ್ಯ ವಸ್ತ್ರದಮಠ, ಕೃಪಾಸಾಗರ ಗೊಬ್ಬುರ, ಶ್ರೀಮತಿ ಗೌರಮ್ಮ ಹಿರೇಮಠ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.