ಯಾದಗಿರಿ,ಸುರಪುರ: ತಾಲೂಕಿನ ಕವಡಿಮಟ್ಟಿ ಗ್ರಾಮದ ಹತ್ತಿರ ಹೊರವಲಯದ ಹೊಲದಲ್ಲಿ ಆರರಿಂದ ಏಳು ಬಣಿವೆಗಳಿಗೆ ಬೆಂಕಿ ಬಿದ್ದು ಭಾಗಶಃ ಭಸ್ಮವಾಗಿದೆ ಎಂದು ಅಗ್ನಿ ಶಾಮಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ವಾಲಿ ತಿಳಿಸಿದರು.
ಕವಡಿಮಟ್ಟಿ ಗ್ರಾಮದ ಬಾಲಯ್ಯ ಎನ್ನುವವರಿಗೆ ಸೇರಿದ ಈ ಬಣಿವೆಗಳು. ಬಣಿವೆಯ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳ ಸ್ಪರ್ಷದಿಂದ ಕಿಡಿ ಹೊತ್ತಿ ಬೆಂಕಿ ತಗುಲಿದ್ದು, ಇದರಿಂದ ಜಾನುವಾರುಗಳಿಗಾಗಿ ಸಂಗ್ರಹಿಸಿದ ಹುಲ್ಲು ಸುಟ್ಟು ಹೋಗಿದೆ. ಸುಮಾರು ಸಾವಿರಾರು ರೂಪಾಯಿಗಳ ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.
ಗುರುವಾರ ಸಂಜೆ ಘಟನೆ ನಡೆದಿದ್ದು. ಮಾಹಿತಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿಸಿದರು. ಈ ವೇಳೆ ಪ್ರಮುಖ ಅಗ್ನಿ ಶಾಮಕ ದಳದ ಮಲ್ಲಿಕಾರ್ಜುನ, ಚಾಂದಶಾಹ ಮುಜಾವರ್, ಸುಭಾಷ್ ಚಂದ್ರ, ಶಂಕರ ಚವ್ಹಾಣ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.