ಸುರಪುರ: ಜಗತ್ತೆ ಇಂದು ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣವನ್ನು ಪೊಜಿಸುತ್ತದೆ. ನಮ್ಮ ಜೀವನಕ್ಕೆ ದಾರಿತೊರುವ ಗ್ರಂಥ ರಚಿಸಿದ ಮಹಾನ್ ವ್ಯಕ್ತಿಯನ್ನು ಶಾಸಕ ಬಸನಗೌಡ ಯತ್ನಾಳ್ ಬಾಯಿಚಪಲಕ್ಕೆ ಜಾತಿ ಹೆರಸಲ್ಲಿ ನಿಂದಿಸಿ ಮಾತನಾಡಿದ್ದನ್ನು ಖಂಡಿಸುವುದಾಗಿ ಕಲ್ಯಾಣ ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಜಾ ಪಿಡ್ಡನಾಯಕ ಪ್ಯಾಪ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಹಶಿಲ್ದಾರ ಕಛೇರಿ ಮುಂಭಾಗದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಅಧಿವೇಶನದಲ್ಲಿ ಸವಿಂಧಾನದ ಕುರಿತು ಮಾತನಾಡುವ ವೇಳೆ ನಾಯಕ ಜನಾಂಗದ ಗುರುವಾಗಿರುವ ಮಹರ್ಷಿ ವಾಲ್ಮೀಕಿ ಅವರು ಕೀಳ ಜಾತಿಯವರ ಎಂದು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಹೇಳುವುದು ಖಂಡನಾರ್ಹ ಈ ರೀತಿ ಹೇಳಿಕೆ ನೀಡಿರುವ ಶಾಸಕ ಯತ್ನಾಳ ಅವರ ಮೇಲೆ ಜಾತಿನಿಂದನೆ ಪ್ರಕರಣವನ್ನು ದಾಖಲಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದರು.
ಸಮಾಜದ ಏಳಿಗೆಗಾಗಿ ದುಡಿದ ಸಮಾಜ ಸುಧಾರಕರ ಕುರಿತು ತಮ್ಮ ಜನಪ್ರೀಯತೆಗಾಗಿ ಬಳಸಿಕೊಳ್ಳಬಾರದು ಇತಂಹ ಶಾಸಕರಿಂದ ನಮ್ಮ ಸಮುದಾಯಕ್ಕೆ ಮತ್ತು ಸಮಸ್ತ ಮಾನವ ಕುಲಕ್ಕೆ ಇವರು ನೀಡಿದ ಹೇಳಿಕೆಯಿಂದ ನೋವಾಗಿದೆ, ಇತಂವರು ಒಂದು ಕ್ಷಣವು ಸಹ ಶಾಸಕ ಸ್ಥಾನದಲ್ಲಿರಲು ಯೋಗ್ಯರಲ್ಲ ಬಿಜೆಪಿ ಪಕ್ಷ ಇವರ ಮೇಲೆ ಶಿಸ್ತು ಕ್ರಮಕ ಜರುಗಿಸಬೇಕು ಎಂದು ಆಗ್ರಹಿಸಿ ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರಾದಾರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಲಭಿಮ ನಾಯಕ ದೇವಾಪುರ, ಶಂಕರಗೌಡ ಪಾಟೀಲ, ಅನೀಲ ಇಟ್ಟಂಗಿ, ಶ್ರೀನಿವಾಸ ನಾಯಕ ಬೊಮ್ಮನಳ್ಳಿ, ರವಿ ನಾಯಕ ಬೈರಿಮರಡಿ, ಕನಕಾಚಲ ಜಾಗಿರದಾರ್, ಶಿವರಾಜ ನಾಯಕ, ವೆಂಕಟೇಶ ನಾಯಕ, ಯಲ್ಲಪ್ಪ ಕಲ್ಲೊಡಿ, ದೇವು ನಾಯಕ, ದುರ್ಗಪ್ಪ ನಾಯಕ, ಭೀಮಣ್ಣ ಧೋರಿ, ಬಸವರಾಜ ಡಿ, ಭೀಮರಾಯ, ರವಿ ದರಬಾರಿ ಸೃಎಇದಂತೆ ಇನ್ನಿತರರಿದ್ದರು.