ಸಂಚಾರಿ ನಿಯಮಗಳ ಪಾಲಿಸಿ ಅಪಾಯದಿಂದ ಪಾರಾಗಿ: ಶಾಸಕ ರಾಜುಗೌಡ

0
159
ನಗರದಲ್ಲಿ ಯಾದಗಿರಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಕಿರು ಮ್ಯಾರಾಥಾನ್‌ಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ಎಸ್ಪಿ ರುಶಿಕೇಶ ಭಗವಾನ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿ,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಇತರರಿದ್ದರು.

ಸುರಪುರ: ಇಂದು ಯುವಕರು ಮತ್ತು ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಮೀರಿ ಬೈಕ್ ಚಲಾಯಿಸುವುದರಿಂದ ಎಷ್ಟೋ ಅಪಘಾತಗಳು ಸಂಭವಿಸುತ್ತಿವೆ.ಎಲ್ಲರು ಸಂಚಾರಿ ನಿಯಮಗಳ ಪಾಲಿಸಿ ಅಪಾಯದಿಂದ ಪಾರಾಗುವಂತೆ ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.

ಯಾದಗಿರಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಚಾರಿ ನಿಯಮಗಳ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಕಿರು ಮ್ಯಾರಾಥಾನ್ ಓಟಕ್ಕೆ ತಿಮ್ಮಾಪುರ ಬಸ್ ನಿಲ್ದಾಣದ ಬಳಿ ಚಾಲನೆ ನೀಡಿ ಮಾತನಾಡಿದರು.ನಂತರ ಪೋಲಿಸ್ ಠಾಣಾ ಆವರಣದಲ್ಲಿ ನಡೆದ ಮ್ಯಾರಾಥಾನ್‌ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ,ಎಲ್ಲರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ,ಅಲ್ಲದೆ ಅನೇಕರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಓಡಿಸುವಿರಿ,ಅಂತವರಿಗಾಗಿ ಲೈಸೆನ್ಸ್ ಮಾಡಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮ್ಯಾರಾಥಾನ್‌ಗೆ ಚಾಲನೆ ನೀಡಿ ಯಾದಗಿರಿ ಜಿಲ್ಲಾ ಪೋಲಿಸ್ ಅಧೀಕ್ಷಕ ರುಶಿಕೇಶ ಭಗವಾನ್ ಸೋನೆವಾನೆ ಮಾತನಾಡಿ,ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲೆಂದು ೫ ಕಿಲೋ ಮೀಟರ್ ವರೆಗೆ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ.ಮ್ಯಾರಾಥಾನ್‌ಗೆ ಶಾಸಕ ರಾಜುಗೌಡರು ಸಹಕಾರ ನೀಡಿದ್ದು ಸಂತೋಷದಾಯಕವಾಗಿದೆ.ಯುವಕರು ಇದರ ಮೂಲಕ ಎಲ್ಲರು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಕರೆ ನೀಡಿದರು.

ತಿಮ್ಮಾಪುರದಿಂದ ಆರಂಭಗೊಂಡ ಮ್ಯಾರಾಥಾನ್ ಮರಗಮ್ಮ ಗುಡಿ ಮೂಲಕ,ಬಡಾ ಮಜೀದ್ ಮಾರ್ಕೆಟ್ ಮಾರ್ಗವಾಗಿ ಅಂಬೇಡ್ಕರ ವೃತ್ತದ ಮೂಲಕ ಸುರಪುರದ ಗಾಂಧೆ ವೃತ್ತದ ಮೂಲಕ ದರಬಾರ ರಸ್ತೆಯಿಂದ ಸರ್ದಾರ ವಲ್ಲಭಬಾಯಿ ಪಟೇಲ ಮೂರ್ತಿ ಮಾರ್ಗವಾಗಿ ಹನುಮಾನ್ ಟಾಕೀಸ್ ರಸ್ತೆಯಿಂದ ಪುನಃ ಗಾಂಧಿ ವೃತ್ತದಿಂದ ಪೋಲಿಸ್ ಠಾಣೆಗೆ ಬಂದು ಸಮಾಪ್ತಿಗೊಳಿಸಲಾಯಿತು.ಮ್ಯಾರಾಥಾನ್‌ಲ್ಲಿ ಶಾಸಕರು ಎಸ್ಪಿಯವರು,ಡಿವಾಎಸ್‌ಪಿ ವೆಂಕಟೇಶ ಹುಗಿಬಂಡಿ,ಪಿಐ ಎಸ್.ಎಂ.ಪಾಟೀಲ,ತಹಸೀಲ್ದಾರ ನಿಂಗಣ್ಣ ಬಿರಾದಾರ,ತಾ.ಪಂ ಇಒ ಅಂಬ್ರೇಶ,ಸಡಿಪಿಒ ಲಾಲಸಾಬ್,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ(ತಾತಾ),ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ,ಆರ್.ಐ ಗುರುಬಸಪ್ಪ,ಪಿಎಸ್‌ಐ ಶರಣಪ್ಪ, ಚಂದ್ರಶೇಖರ, ಚೇತನ್,ನಚಿಕೇತ ಜನಗೌಡ ಹಾಗು ಪೇದೆಗಳಾದ ಶಿವಪ್ಪ,ಶರಣು,ಬಸವರಾಜ ಮುದ್ಗಲ್,ಮಂಜುನಾಥ ಸ್ವಾಮಿ, ದಯಾನಂದ,ಉಮಾಕಾಂತ ಇತರರಿದ್ದರು.

ಪೋಲಿಸ್ ಠಾಣಾ ಆವರಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮ್ಯಾರಥಾನ್‌ನಲ್ಲಿ ಮೊದಲ ಹತ್ತು ಸ್ಥಾನ ಪಡೆದ ಯುವಕರಲ್ಲಿ ಪ್ರಥಮ ಸ್ಥಾನ ಪಡೆದ ಶರಣಬಸವ ದೇವಾಪುರ ಮತ್ತು ದ್ವೀತಿಯ ಸ್ಥಾನ ಪಡೆದ ಪರಶುರಾಮ ದೇವರಗೋನಾಲ,ತೃತಿತ ಸ್ಥಾನ ಪಡೆದ ವಿಜಯಕುಮಾರ ಡೊಣ್ಣಿಗೇರಾ ಇವರಿಗೆ ಶಾಸಕರು ಮತ್ತು ಪೋಲಿಸ್ ಇಲಾಖೆಯಿಂದ ನಗದು ಮತ್ತು ಹೆಲ್ಮೆಟ್ ನೀಡಲಾಯಿತು ಮತ್ತು ಇನ್ನುಳಿದ ಏಳು ಜನರಿಗೆ ಹೆಲ್ಮೆಟ್ ನೀಡಿ ಗೌರವಿಸಲಾಯಿತು.ಶಿಕ್ಷಕ ಶರಣಗೌಡ ನಿರೂಪಿಸಿದರು,ಪಿಐ ಎಸ್.ಎಮ್.ಪಾಟೀಲ ಸ್ವಾಗತಿಸಿದರು,ಮಹಾಂತೇಶ ಬಿರಾದಾರ ಪ್ರಾರ್ಥಿಸಿದರು. ದೇವು ಕನ್ನಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here